ಯಕ್ಷಾಂಗಣದಲ್ಲಿ ಅಮ್ಮಣ್ಣಾಯರ ನೆನಪು ಮತ್ತು ತುಳು ತಾಳಮದ್ದಳೆ

Upayuktha
0

ಅಮ್ಮಣ್ಣಾಯರ ಹಾಡುಗಳ ಡಿಜಿಟಲೀಕರಣವಾಗಲಿ: ಸೂಡ




ಮಂಗಳೂರು: 'ಭಾಗವತ ಅಮ್ಮಣ್ಣಾಯರು ಸ್ವ ಪ್ರತಿಭೆ ಉಳ್ಳವರಾಗಿದ್ದರು; ಅವರ ಹಾಡುಗಾರಿಕೆ ಅನುಕರಣೆಗೆ ನಿಲುಕುವುದಲ್ಲ. ಮಂಡೆಚ್ಚರ ದಾರಿಯಲ್ಲಿ ತನ್ನ ಸ್ವಂತಿಕೆಯನ್ನು ಕಾಣಿಸಿದ ಅವರದೇ ವಿಶಿಷ್ಟ ಶೈಲಿಯ ಹಾಡುಗಳ ಡಿಜಿಟಲೀಕರಣ ಆಗತಕ್ಕದ್ದು' ಎಂದು ಯಕ್ಷಗಾನ ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಹೇಳಿದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ನಡೆಸಿದ 'ಅಮ್ಮಣ್ಣಾಯೆರ್ನ ನೆಂಪು ಬೊಕ್ಕ ತುಳು ತಾಳಮದ್ದೊಲಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯಕ್ಷಗಾನದಲ್ಲಿ ತುಳು ಸಂಸ್ಕೃತಿ ಅನಾವರಣ:

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಅವರು ಮಾತನಾಡಿ 'ಯಕ್ಷಗಾನದಲ್ಲಿ ತುಳುತಿಟ್ಟು ಆರಂಭವಾದ ಕಾಲದಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಪ್ರೇರಣೆಯಿಂದ ಕರ್ನಾಟಕ ಮೇಳದಲ್ಲಿ ದಿ| ಮಂಡೆಚ್ಚರು ಮತ್ತು ಅಮ್ಮಣ್ಣಾಯರು ತುಳು ಪ್ರಸಂಗಗಳನ್ನು ಮೆರೆಸಿದ್ದರು. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಅನಾವರಣವಾಗಿದೆ' ಎಂದರು. ಮಂಗಳೂರು ತಾಲ್ಲೂಕು ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಕ್ಷಾಂಗಣದ ಸಂಚಾಲಕ ಕೆ. ರವೀಂದ್ರ ರೈ ಕಲ್ಲಿಮಾರ್ ವಂದಿಸಿದರು.


'ಮಿತ್ತಲೋಕೊದ ಪೆತ್ತ' ತಾಳಮದ್ದಳೆ:

ಕಾರ್ಯಕ್ರಮದ ಅಂಗವಾಗಿ ದೀವಿತ್ ಎಸ್.ಕೆ. ಪೆರಾಡಿ ಪದ್ಯ ರಚಿಸಿದ 'ಮಿತ್ತ ಲೋಕೊದ ಪೆತ್ತ (ಜಾಬಾಲಿ ನಂದಿನಿ)' ತುಳು ತಾಳಮದ್ದಳೆ ಜರಗಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಡಾ| ತಾರಾನಾಥ ವರ್ಕಾಡಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ದೀವಿತ್ ಪೆರಾಡಿ ಅರ್ಥಧಾರಿಗಳಾಗಿದ್ದರು. ತೋನ್ಸೆ ಪುಷ್ಕಳ್ ಕುಮಾರ್ ಅವರ ಹಾಡುಗಾರಿಕೆಗೆ ಸಮರ್ಥ್ ಉಡುಪ ಮತ್ತು ಶ್ರೇಯಸ್ ಆಚಾರ್ಯ ಹಿಮ್ಮೇಳದಲ್ಲಿ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top