ಅವಿಸ್ಮರಣೀಯ ಬಾಲ್ಯದ ದಿನಗಳು

Chandrashekhara Kulamarva
0

ಪ್ರಸ್ತುತ ಜಗತ್ತಿನ ನೆಮ್ಮದಿ ಇಲ್ಲದ ನಗು, ಚಿಂತೆಯಿಂದ ತುಂಬಿದ ಮನಸ್ಸು, ಪರೀಕ್ಷೆಗಳ ಒತ್ತಡ, ಮೊಬೈಲ್ ನ ಹುಚ್ಚುತನ ಇವುಗಳಿಗಿಂತ ಮನಸ್ಸಿಂದ ನಕ್ಕು ನಲಿದು ಕಳೆದ ಆ ದಿನಗಳೇ ಚೆನ್ನಾಗಿತ್ತು.

ಬಾಲ್ಯದಲ್ಲಿ ಇದ್ದ ನಗು, ಸಂತೋಷ ಯಾವುದೂ ಮತ್ತೆ ಬರಲಾರದು. ಅಂಗನವಾಡಿಯಿಂದ ಪ್ರಾಥಮಿಕ ಶಾಲೆ ಮುಗಿಯುವವರೆಗೆ ಇದ್ದ ಅಂದಿನ ದಿನಗಳೇ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತಿತ್ತು. ಮನೆಯಿಂದ ಶಾಲೆಗೆ ಹೋಗುವಾಗ, ಶಾಲೆಯಲ್ಲಿ ಸ್ನೇಹಿತರೊಂದಿಗಿನ ಆಟ ಇವೆಲ್ಲವೂ ಈಗಲೂ ಕಣ್ಣಿಗೆ ಕಟ್ಟಿದಂತಿವೆ. ಮನಸ್ಸಿನಲ್ಲಿ ಸಾವಿರ ದುಃಖ, ನೋವುಗಳನ್ನು ಇಟ್ಟುಕೊಂಡು ಜನರ ಮುಂದೆ ಆಡುವ ನಾಟಕದ ನಗುವಿಗಿಂತ ಬಾಲ್ಯದ ದಿನಗಳಲ್ಲಿ ಮನಸ್ಸಿನಲ್ಲಿ ಏನೂ ಕಲ್ಮಶವಿಲ್ಲದೆ ನಗುತ್ತಿದ್ದ ದಿನಗಳೇ ಚನ್ನಾಗಿತ್ತು. 


ಪರೀಕ್ಷೆಗಳು ಮುಗಿದು ರಜೆ ಸಿಕ್ಕಿದರೆ ಸಾಕು ಎಲ್ಲೂ ಹೋಗದೆ ಶಾಲೆಯಲ್ಲಿ ಸ್ನೇಹಿತರೊಡನೆ ಕುಳಿತು ಅಟವಾಡುತ್ತಿದ್ದ ಆ ದಿನಗಳನ್ನು ಇಂದು ಮೊಬೈಲ್ ನಮ್ಮೆಲ್ಲರನ್ನೂ ಅದರ ಗುಲಾಮರನ್ನಾಗಿಸಿದೆ. ಮೊದಲು ಅಮ್ಮನ ಕೈತುತ್ತು ತಿಂದ ಸವಿನೆನಪುಗಳು ಕಣ್ಣಲ್ಲಿ ನೀರನ್ನು ತರಿಸುತ್ತವೆ. ಅದೇ ಈಗ ಯಾವುದೊ ಊರಿನಲ್ಲಿ ಯಾವುದೊ ಹಾಸ್ಟೆಲ್ ನಲ್ಲಿ ಒಬ್ಬಂಟಿಯಾಗಿ ಕುಳಿತು ಅಮ್ಮನನ್ನು ನೆನೆದು ಊಟ ಮಾಡುವ ಸ್ಥಿತಿ ಬಂದಿದೆ. ಬಾಲ್ಯದಲ್ಲಿ ಬಟ್ಟೆ ಕೊಳೆಯಾದರೆ ಪ್ರೀತಿಯಿಂದ ಬೈಯ್ದು ಬಟ್ಟೆ ಒಗೆಯುತ್ತಿದ್ದರು ಅಮ್ಮ. ಆದರೆ ಈಗ ದೊಡ್ಡವರಾದ ಮೇಲೆ ನಮ್ಮ ಕೆಲಸವನ್ನು ಒಬ್ಬಂಟಿಯಾಗಿ ನಾವೇ ಮಾಡಿಕೊಳ್ಳಬೇಕಾಗಿದೆ.


ಚಿಕ್ಕಂದಿನಲ್ಲಿ ಮನೆಗೆ ಅತಿಥಿಗಳು ಬಂದರೆ ಸಾಕು ಖುಷಿಯಿಂದ ಅವರ ಬಳಿ ಓಡಿ ಹೋಗಿ ಅವರು ತಂದ ತಿಂಡಿಗಳನ್ನು ತೆಗೆದುಕೊಂಡು ಓಡಿ ಹೋಗುತ್ತಿದ್ದೆವು. ಅದೇ ಈಗ ನಗುವುದೆಲ್ಲಿ ಯಾರಾದರೂ ಬಂದರು ಸಹ ರೂಮಿನಿಂದ ಹೊರಬರದೆ  ವ್ಯಕ್ತಿ ಪರಿಚಯದಿಂದ ದೂರ ಉಳಿದಿದ್ದೇವೆ. ಮೊದಲೆಲ್ಲ ಸ್ನೇಹಿತ ರೊಡನೆ ಬೆರೆತು ಎಲ್ಲಾ ರೀತಿಯ ಅಟವಾದ ಕಬಡ್ಡಿ, ಲಗೋರಿ, ಕೇರಂ, ಚೆಸ್, ಕಣ್ಣಾ ಮುಚ್ಚಾಲೆ ಇವೆಲ್ಲವನ್ನೂ ಆಡುತ್ತಿದ್ದೆವು. ಆದರೆ ಈಗ ಮೊಬೈಲ್ ನಲ್ಲಿ ಅಟವಾಡುವುದನ್ನು ಬಿಟ್ಟರೆ ಬೇರೆ ಎನೂ ಇಲ್ಲ ಎನ್ನುವ ತರಹದ ಜೀವನ ಶೈಲಿಗೆ ಪ್ರತಿಯೊಬ್ಬರು ಬದಲಾಗಿದ್ದಾರೆ ಎನ್ನುವುದು ಬೇಸರವನ್ನುಂಟು ಮಾಡುವ ಸಂಗತಿಯಾಗಿದೆ. ಇವೆಲ್ಲವನ್ನೂ ಸ್ಮರಿಸಿಕೊಂಡಾಗ ಆ ನೆನಪಿನಂಗಳದ ದಿನಗಳೇ ಸುಂದರವಾಗಿತ್ತು.




-ರಮ್ಯಾ ನಾಯ್ಕ್ 

ಎಸ್‌ಡಿಎಂಸಿ ಉಜಿರೆ



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top