ಪ್ರಧಾನಿ ಭೇಟಿಗಾಗಿ ಬೆಂಡೋಣಿಯಿಂದ ಉಡುಪಿಗೆ ಪಾದಯಾತ್ರೆ ಹೊರಟ ಮಂಜುಳಾ

Upayuktha
0

ಪಾದಯಾತ್ರೆ ಹೊರಟಿರುವ ಬೆಂಡೋಣಿ ಗ್ರಾಮದ ಮಂಜುಳ ನಗಿಮುಖ




ಬಾಗಲಕೋಟೆ: ಲಿಂಗಸಗೂರು ತಾಲೂಕ್ ಬೆಂಡೋಣಿ ಗ್ರಾಮದ ಮಹಿಳೆ ಮಂಜುಳ ನಗಿಮುಖ. ಹಲವಾರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ನೇರವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ನೇರವಾಗಿ ಮಾತನಾಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ತಮ್ಮ ಗ್ರಾಮ ಬೆಂಡೋಣಿಯಿಂದ ಕಂದಗಲ್ಲ ಕುಷ್ಟಗಿ ಮಾರ್ಗವಾಗಿ ಉಡುಪಿ ತಲುಪಿ ಅಲ್ಲಿ ಶ್ರೀ ಕೃಷ್ಣಮಂದಿರದ ದೇವಾಲಯದ ಆವರಣದಲ್ಲಿ ಮೋದಿಜಿಯವರನ್ನು ಭೇಟಿಯಾಗಲೆಂದು ಅಂದಾಜು 462 ಕಿ ಮೀ ನಡೆಯುತ್ತಿದ್ದಾಳೆ.


ಅತ್ಯಾಚಾರಿಗಳಿಂದ ಮತ್ತು ಲವ್ ಜಿಹಾದದಿಂದ್ ಮುಕ್ತಿ, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿ, ಹಾಗೂ ಸ್ಪೋಕನ್ ಇಂಗ್ಲೀಷಗೆ ಆದ್ಯತೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಪ್ರಧಾನ ಮಂತ್ರಿಗಳು ಶಕ್ತಿಯಾಗಿ ನಿಲ್ಲಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಪಾದಯಾತ್ರೆ ಕೈಗೊಂಡಿರುವ ಈ ಮಹಿಳೆಯ ಸಾಹಸ ಮೆಚ್ಚುವಂತಹದು.


ಜಿಲ್ಲೆಯ ಇಲಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ಮಹಿಳೆ ಪಾದಯಾತ್ರೆ ಹೋಗುವದನ್ನು ಕಂಡ ಗ್ರಾಮದ ಹಿತಚಿಂತಕ ಸಂಗಣ್ಣ ಹವಾಲ್ದಾರ್ ಈ ಮಹಿಳೆಯ ಕೆಲಸ ಮೆಚ್ಚಿ ತಮ್ಮ ಸಂಸ್ಥೆ ವಿಶ್ವ ಚೇತನ ಪಬ್ಲಿಕ್ ಶಾಲೆಯ ಗುರುಮಹಾಂತ ರಂಗಮಂದಿರದಲ್ಲಿ ಸನ್ಮಾನಿಸಿ ಧೈರ್ಯ ತುಂಬಿ ಬೀಳ್ಕೊಟ್ಟರು. ಶಾಲೆಯ ಎಲ್ಲ ಗುರುಗಳು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Advt Slider:
To Top