ಮಂಗಳೂರು: ಕೆನರಾ ಕಾಲೇಜಿನಲ್ಲಿ 70ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ಬ್ಯಾಂಕ್ ಉರ್ವ ಮಾರ್ಕೆಟ್ ಶಾಖೆಯ ಹಿರಿಯ ಪ್ರಬಂಧಕರಾಗಿರುವ ಶ್ರೀ ಅರುಣ್ ಕುಮಾರ್ ಎಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ, ಈ ನೆಲದಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಉಳಿಸಲು ಅಳಿಲು ಸೇವೆಯನ್ನು ಮಾಡಬೇಕು. ಬೇರೆ ಬೇರೆ ರಾಜ್ಯದ ಜನರು ಕರ್ನಾಟಕದಲ್ಲಿದ್ದಾರೆ. ಉದ್ಯೋಗ ನಿಮಿತ್ತ ರಾಷ್ಟ್ರದಾದ್ಯಂತ ಸಂಚರಿಸುವವರೂ ಕೂಡ ಕನ್ನಡೇತರರಿಗೆ ನಮ್ಮ ಭಾಷೆಯ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಕನ್ನಡ ನಿತ್ಯ ಸ್ಮರಣೆಯಾಗಬೇಕು ಎಂದರು.
ಕಾಲೇಜು ಪ್ರಾಂಶುಪಾಲೆ ಡಾ ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದು ಮಾತನಾಡಿ, ಅನ್ಯ ಭಾಷೆ ಅಥವಾ ಆಂಗ್ಲ ಭಾಷೆಯ ಜೊತೆಯಲ್ಲಿ ಕನ್ನಡವನ್ನು ಪ್ರೀತಿಸಬೇಕು. ವಿದ್ಯಾರ್ಥಿಗಳು ರಾಜ್ಯ ಭಾಷೆ ಕಡೆಗೂ ಒಲವು ತೋರಬೇಕು ಎಂದರು. ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಲ ಮಾತನಾಡಿ ಕನ್ನಡೇತರರಿಗೆ ನಮ್ಮ ಭಾಷೆಯನ್ನು ಕಲಿಸುವ ಒಂದು ಗುರಿಯನ್ನು ನಾವು ಇಟ್ಟುಕೊಳ್ಳಬೇಕು ವಿದ್ಯಾರ್ಥಿಗಳು ಕನ್ನಡವನ್ನು ಭಾಷೆಯಾಗಿ ಕಲಿಯುತ್ತಿರುವುದು ಮಾತ್ರವಲ್ಲ ಅದರಲ್ಲಿ ಓದುವ ಬರೆಯುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿಗಳಿಂದ ಕನ್ನಡ ಗೀತ ಗಾಯನ ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು ಎಸ್ ಪ್ರತಿಜ್ಞಾವಿಧಿ ಬೋಧಿಸಿದರು. ಅನನ್ಯ ಶೆಟ್ಟಿ ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕಿ ಶೈಲಜಾ ಸಹಕರಿಸಿದರು. ವಿದ್ಯಾರ್ಥಿಗಳಾದ ಮೇಘನಾ ಸ್ವಾಗತಿಸಿ, ಶ್ರೀನಿಧಿ ವಂದಿಸಿದರು. ವೈಷ್ಣು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

