ಮಂಗಳೂರು: ವಿಶ್ವದ ಐದನೇ ಅತಿದೊಡ್ಡ ಚಿನ್ನಾಭರಣ ರಿಟೇಲ್ ಮಾರಾಟ ಸಂಸ್ಥೆ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಲ್ಲಿ ಭಾರತದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಗೋಲ್ಡ್ ಅಂಡ್ ಡೈಮಂಡ್ಸ್, ತನ್ನ ಮಹತ್ವದ 'ಹಸಿವು ಮುಕ್ತ ವಿಶ್ವ' (ಹಂಗರ್ ಫ್ರೀ ವರ್ಲ್ಡ್) ಉಪಕ್ರಮವನ್ನು ಇಥಿಯೋಪಿಯಾಗೆ ವಿಸ್ತರಿಸಿದೆ.
ಭಾರತ ಮತ್ತು ಜಾಂಬಿಯಾದಲ್ಲಿ ಈ ಉಪಕ್ರಮದ ಯಶಸ್ಸಿನ ಬೆನ್ನಲ್ಲೇ, ಆಫ್ರಿಕಾ ಖಂಡದಲ್ಲಿ ಇದನ್ನು ಜಾರಿಗೆ ತರಲು ಸಂಸ್ಥೆ ಸನ್ನದ್ಧವಾಗಿದೆ ಎಂದು ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ. ಅಹ್ಮದ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾಗಿರುವ ದುಬೈ ಗೋಲ್ಡ್ ಸೌಕ್‍ನಲ್ಲಿರುವ ಮಲಬಾರ್ ಇಂಟರ್‍ನ್ಯಾಷನಲ್ ಹಬ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉಪಕ್ರಮದ ವಿಸ್ತರಣೆಯನ್ನು ಪ್ರಕಟಿಸಲಾಯಿತು. ಮಲಬಾರ್ ಗ್ರೂಪ್‍ನ ಉಪಾಧ್ಯಕ್ಷ ಅಬ್ದುಲ್ ಸಲಾಂ ಕೆ.ಪಿ. ಅವರು ದುಬೈನಲ್ಲಿರುವ ಇಥಿಯೋಪಿಯಾದ ಕಾನ್ಸುಲ್ ಜನರಲ್ ಅಸ್ಮೆಲಾಶ್ ಬೆಕೆಲೆ ಅವರಿಗೆ ಅಧಿಕೃತವಾಗಿ ಇಂಗಿತ ಪತ್ರ ಹಸ್ತಾಂತರಿಸಿದರು.
ಸದ್ಯಕ್ಕೆ ಈ ಉಪಕ್ರಮದಡಿ ವಿಶ್ವದಾದ್ಯಂತ 119 ಸ್ಥಳಗಳಲ್ಲಿ ಪ್ರತಿದಿನ 115,000ಕ್ಕೂ ಹೆಚ್ಚು ಊಟಗಳನ್ನು ಒದಗಿಸಲಾಗುತ್ತಿದೆ. 2024ರ ಮೇ ತಿಂಗಳಿನಿಂದ ಜಾಂಬಿಯಾದ ಮೂರು ಶಾಲೆಗಳಲ್ಲಿ 9,00,000 ಕ್ಕೂ ಹೆಚ್ಚು ಊಟಗಳನ್ನು ವಿತರಿಸಲಾಗಿದೆ. ಇಥಿಯೋಪಿಯ ಸರ್ಕಾರದ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ಮುಂದಿನ ಎರಡು ವರ್ಷಗಳಲ್ಲಿ ನಾವು 8,64,000 ಡಾಲರ್ ಗಿಂತ ಹೆಚ್ಚು ಹೂಡಿಕೆ ಮಾಡಲಿದ್ದೇವೆ. 2026ರ ಅಂತ್ಯದ ವೇಳೆಗೆ 10,000 ಮಕ್ಕಳಿಗೆ ದೈನಂದಿನ ಊಟ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಲಬಾರ್ ಗ್ರೂಪ್‍ನ ಉಪಾಧ್ಯಕ್ಷ ಅಬ್ದುಲ್ ಸಲಾಮ್ ಕೆ. ಪಿ ಹೇಳಿದ್ದಾರೆ.
ತನ್ನ ನಿವ್ವಳ ಲಾಭದ ಶೇಕಡ 5ರಷ್ಟನ್ನು ಸ್ಥಿರವಾಗಿ ಹೂಡಿಕೆ ಮಾಡುವುದರ ಜೊತೆಗೆ ಭಾರತದಲ್ಲಿ ಕಡ್ಡಾಯವಾಗಿರುವ 'ಸಿಎಸ್‍ಆರ್' ಹಂಚಿಕೆಗಿಂತ ಎರಡು ಪಟ್ಟು ಹೆಚ್ಚು ವೆಚ್ಚ ಮಾಡಿ ಈ ಉಪಕ್ರಮ ಅದ್ಭುತ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಇದನ್ನು ಇಥಿಯೋಪಿಯಾ ದೇಶಕ್ಕೂ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




