ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಲೆಕ್ಸಾ ಲೈಟಿಂಗ್‌ ನಿಂದ ಬೆಳಕಿನ ಅಲಂಕಾರ

Upayuktha
0

ಮಠದ 550ನೇ ವರ್ಷದ ಸಂಭ್ರಮಾಚರಣೆ; ಶ್ರೀರಾಮನ ಪ್ರತಿಮೆಗೆ ಬೆಳಕಿನ ಜಳಕ 




ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಈ ವರ್ಷ ತನ್ನ ಮಹತ್ವದ 550ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಲು ಮಠದಲ್ಲಿ 77 ಅಡಿ ಎತ್ತರದ ಭವ್ಯ ಕಂಚಿನ ಪ್ರಭು ಶ್ರೀರಾಮರ ಮೂರ್ತಿ ನಿರ್ಮಾಣಗೊಂಡಿದ್ದು, ಅನಾವರಣಕ್ಕೆ ಸಜ್ಜಾಗಿದೆ. ದೇಶದಾದ್ಯಂತ ಗಮನಸೆಳೆದಿರುವ ಈ ಮೂರ್ತಿ ಪ್ರಸ್ತುತ ರಾಷ್ಟ್ರದ ಅತಿ ಎತ್ತರದ ಪ್ರಭು ಶ್ರೀರಾಮರ ಕಂಚಿನ ಪ್ರತಿಮೆ ಎಂಬ ಗೌರವವನ್ನು ಹೊಂದಿದೆ.


ಈ ವೈಭವಶಾಲಿ ಮೂರ್ತಿಯ ಬೆಳಕಿನ ಅಲಂಕಾರದ ಮೂಲಕ ದಿವ್ಯ ಕಂಗೊಳಿಸುವಿಕೆಯ ಜವಾಬ್ದಾರಿಯನ್ನು ಕರಾವಳಿಯ ಲೆಕ್ಸಾ ಲೈಟಿಂಗ್ ಸಂಸ್ಥೆ ಕೈಗೊಂಡಿದೆ. ತಮ್ಮ ವಿಶಿಷ್ಟ ತಾಂತ್ರಿಕ ಸಾಮರ್ಥ್ಯ ಮತ್ತು ನವೀನತೆಯ ಮೂಲಕ ಈ ಮೂರ್ತಿಗೆ ಅಗತ್ಯವಾದ ಎಲ್ಲಾ ರೀತಿಯ ಬೆಳಕು ವಿನ್ಯಾಸ ಮತ್ತು ವ್ಯವಸ್ಥೆಯನ್ನು ಅತ್ಯುತ್ತಮ ಮಟ್ಟದಲ್ಲಿ ಅಳವಡಿಸಿದ್ದಾರೆ.


ಮೂರ್ತಿಯ ಲೈಟಿಂಗ್ ವೈಶಿಷ್ಟ್ಯಗಳು


* ಮೂರ್ತಿಯ ಪ್ರತಿ ವೈಭವವನ್ನು ಹೈಲೈಟ್ ಮಾಡಲು 100 ಕ್ಕೂ ಹೆಚ್ಚು ಹೈ-ಪವರ್ ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿದೆ.



* ವಿಭಿನ್ನ ಬಣ್ಣ ಸಂಯೋಜನೆಗಳು, ಆಕಾರ–ರೇಖೆಗಳು ಮತ್ತು ಬೆಳಕು-ನೆರಳಿನ ವಿನ್ಯಾಸಗಳನ್ನು ತೋರಿಸಲು ಅತ್ಯಾಧುನಿಕ DMX ಸಿಗ್ನಲ್ ಆಧಾರಿತ ಸೆಂಟ್ರಲೈಜ್ಡ್ ಕಂಟ್ರೋಲ್ ಸಿಸ್ಟಮ್ ಬಳಕೆ ಮಾಡಲಾಗಿದೆ.


* ಒಂದೇ ನಿಯಂತ್ರಣ ಕೇಂದ್ರದಿಂದ ಮೂರ್ತಿಯ ಸಂಪೂರ್ಣ ಲೈಟಿಂಗ್ ವ್ಯವಸ್ಥೆಯನ್ನು ಹಸ್ತಚಾಲಿತ ಅಥವಾ ಪೂರ್ವ-ನಿಯೋಜಿತ ಪ್ರೋಗ್ರಾಂಗಳ ಮೂಲಕ ನಿರ್ವಹಿಸಲಾಗುತ್ತದೆ.


* ದೇವತ್ವವನ್ನು ಪ್ರತಿಬಿಂಬಿಸುವ, ಮೂರ್ತಿಯ ಭವ್ಯತೆಯನ್ನು ಹೆಚ್ಚಿಸುವ ಮತ್ತು ಸಂಜೆಯ ವೇಳೆಯಲ್ಲಿ ಮೂರ್ತಿಯನ್ನು ಮಿಂಚುವಂತಾಗಿಸುವ ಡೈನಾಮಿಕ್ ಲೈಟಿಂಗ್ sequencesಗಳನ್ನು ವಿನ್ಯಾಸಗೊಳಿಸಲಾಗಿದೆ.

 

ಮೂರ್ತಿಗೆ ಮಾತ್ರವಲ್ಲದೆ ದೇವಳದ ಪರಿಸರದ ಸಂಪೂರ್ಣ ಸುಂದರೀಕರಣ ಕಾರ್ಯವನ್ನೂ ಲೆಕ್ಸಾ ಲೈಟಿಂಗ್ ನಿರ್ವಹಿಸಿದೆ:


* ಪ್ರದೇಶದ ಎಕ್ಸ್ಟೀರಿಯರ್ ಲೈಟಿಂಗ್


* ದೇವಾಲಯದ ಫಸಾಡ್ ಮತ್ತು ಸ್ತಂಭಗಳ ಬೆಳಕು-ಅಲಂಕಾರ


* ಸುತ್ತಮುತ್ತಲಿನ ಲ್ಯಾಂಡ್‌ಸ್ಕೇಪ್ ಗಾರ್ಡನ್ ಲೈಟಿಂಗ್


* ಸಂಸ್ಕೃತಿ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಸಮಾರಂಭಗಳಿಗೆ ಅನುಕೂಲವಾಗುವಂತೆ ಸಭಾಂಗಣದ ವೇದಿಕೆ ಲೈಟಿಂಗ್


* ಕಾರ್ಯಕ್ರಮಗಳಲ್ಲಿ ಅಗತ್ಯವಿರುವ ಡ್ರೇಪರಿ ಮತ್ತು ಕರ್ಟನ್ ಸಿಸ್ಟಮ್.


ಕರಾವಳಿಗರ ಹೆಮ್ಮೆ- ಲೆಕ್ಸಾ ಲೈಟಿಂಗ್


ಮೂಡಬಿದ್ರಿ, ಮಂಗಳೂರು ಮೂಲದಿಂದ ಬೆಳೆದಿರುವ ಲೆಕ್ಸಾ ಲೈಟಿಂಗ್ ಇಂದು ದೇಶದಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಬೆಳಕು ವಿನ್ಯಾಸ ಮತ್ತು ತಾಂತ್ರಿಕ ಪರಿಹಾರಗಳಲ್ಲಿ ತನ್ನ ಹೆಸರು ಮಾಡುತ್ತಿದೆ.


ಇಂತಹ ಭವ್ಯ ಐತಿಹಾಸಿಕ ಮತ್ತು ಧಾರ್ಮಿಕ ಯೋಜನೆಗಳಲ್ಲಿ ಭಾಗವಹಿಸುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ, ಮತ್ತು ಕರಾವಳಿ ಜನತೆಗೆ ಇದು ಒಂದು ಹೆಮ್ಮೆಯ ಸಂಗತಿ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top