ಪಣಜಿ: ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಭಾರತಕ್ಕೆ ಹೊಸ ಜವಾಬ್ದಾರಿ ಯೊಂದಿಗೆ ಮರಳುತ್ತಿರುವುದಕ್ಕೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಭಾರತ ಹೊಂದಿರುವ ದೀರ್ಘಕಾಲದ ಸಂಬಂಧ ಮತ್ತು ಹಳೆಯ ಸಹ ಆಟಗಾರರು ಹಾಗೂ ಪ್ರತಿಸ್ಪರ್ಧಿಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದಾದ ಅವಕಾಶದ ಬಗ್ಗೆ ಅವರು ಮಾತನಾಡಿದ್ದಾರೆ. ಕ್ಲಾರ್ಕ್ ಉದ್ಘಾಟನಾ ಲೆಜೆಂಡ್ಸ್ ಪ್ರೋ T20 ಲೀಗ್‌ನ ಲೀಗ್ ಕಮಿಷನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ಲಾರ್ಕ್ “ಭಾರತ, ಕ್ರಿಕೆಟ್‌ನ ಅತ್ಯಂತ ದೊಡ್ಡ ಮನೆಗಳಲ್ಲಿ ಒಂದಾಗಿರುವುದರಿಂದ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ಅಭಿಮಾನಿಗಳ ಉತ್ಸಾಹ, ಅವರ ಕ್ರಿಕೆಟ್ ಪ್ರೀತಿ, ಮತ್ತು ಈ ಲೀಗ್‌ನ ಭಾಗವಾಗಿರುವ ಗೌರವ ಇವುಗಳೆಲ್ಲವೂ ನನಗೆ ತುಂಬಾ ಸ್ಪೆಷಲ್. ಹಳೆಯ ಸ್ನೇಹಿತರನ್ನೂ, ತೀವ್ರ ಪ್ರತಿಸ್ಪರ್ಧಿಗಳನ್ನೂ ಮತ್ತೆ ನೋಡಿಕೊಳ್ಳುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಇಷ್ಟು ಅದ್ಭುತ ಆಟಗಾರರು ಒಂದೇ ಲೀಗ್‌ನಲ್ಲಿ ಸೇರುವುದನ್ನು ನೋಡುವುದು ರೋಚಕವಾಗಿದೆ ಎಂದರು.
ಲೆಜೆಂಡ್ಸ್ ಪ್ರೋ T20 ಲೀಗ್ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದಲ್ಲಿ ನಡೆಯಲಿದೆ. ಆರು ಫ್ರಾಂಚೈಸಿ ತಂಡಗಳಲ್ಲಿ ಒಟ್ಟು 90 ಮಂದಿ ಅಂತರರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಎಲ್ಲಾ ಪಂದ್ಯಗಳು ಹೊಸದಾಗಿ ಉದ್ಘಾಟನೆಯಾದ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಘೋಷಿತ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್, ಹರ್ಭಜನ್ ಸಿಂಗ್, ಶೇನ್ ವಾಟ್ಸನ್ ಮತ್ತು ಡೇಲ್ ಸ್ಟೇನ್ ಸೇರಿದ್ದಾರೆ. ಇನ್ನೂ ಹೆಚ್ಚಿನ ಆಟಗಾರರ ವಿವರಗಳು, ತಂಡಗಳ ಮಾಹಿತಿ ಮತ್ತು ಟಿಕೆಟ್ ವಿವರಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




