ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರಿಂದ ಮೆಚ್ಚುಗೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಮ್ಮ ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ಮಕ್ಕಳ ಹಿತಾಸಕ್ತಿಗಾಗಿ ತೆರೆದುಕೊಳ್ಳುತ್ತಿರುವ ಲಕ್ಷ್ಯ ಸಂಸ್ಥೆಗಳಿಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಶ್ರೀ ಯೋಗರಾಜ್ ಭಟ್ ಇವರು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಬೊಳ್ವಾರು ಬೈಪಾಸ್ ರಸ್ತೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗಾರ್ಡನ್ಸ್ ಹೋಟೆಲ್ ಮುಭಾಗದಲ್ಲಿರುವ ರವಿಂದ ಕಾಂಪ್ಲೆಕ್ಸ್ ನಲ್ಲಿರುವ ಲಕ್ಷ್ಯ ಡೇ ಕೇರ್ ಸಂಸ್ಥೆಯು ಇದೇ ಜನವರಿಯಲ್ಲಿ ಅನಾವರಣಗೊಳ್ಳುತ್ತಿದ್ದು, ಒಂದು ವರ್ಷದಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಶಿಶು ಶಿಕ್ಷಣ ತಜ್ಞರಿಂದ ಹಾಗೂ ಮನಃಶಾಸ್ತ್ರಜ್ಞರಿಂದಲೇ ನಡೆಸಲ್ಪಡುತ್ತಿದ್ದು ಪ್ರತಿ ಶಿಶುವಿನ ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನವಿರಿಸಿ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡುತ್ತಿದೆ. ಇದು ಉದ್ಯೋಗಕ್ಕಾಗಿ ತೆರಳುವ ಪಾಲಕರಿಗೆ ಬಹು ಅನುಕೂಲಕರವಾಗಿದ್ದು ಸಂಶೋಧಿತ ಶೈಕ್ಷಣಿಕ ಚಟುವಟಿಕೆ ಆಟಗಳನ್ನು ಹೊಂದಿರುತ್ತದೆ. ಪ್ರತಿ ಶಿಶುವಿಗೂ ಹಾಗೂ ಪಾಲಕರಿಗೂ ವೈದ್ಯರ ಸಲಹೆ ಆಧಾರಿತ ಆಪ್ತಸಲಹೆ ಮತ್ತು ಮಾರ್ಗದರ್ಶನದ ಲಭ್ಯವಿರುತ್ತದೆ. ಈಗಾಗಲೇ ದಾಖಲಾತಿ ಆರಂಭವಾಗಿದ್ದು ತಾಲೂಕಿನ ಪಾಲಕರಿಗೆ ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆ ವಿನಂತಿಸಿಕೊಂಡಿರುತ್ತದೆ.
ಇದರೊಂದಿಗೆ ಸಂಪೂರ್ಣ ಜೀವನಾಧಾರಿತ ಕೌನ್ಸೆಲಿಂಗ್ ಸೌಲಭ್ಯವನ್ನು ಲಕ್ಷ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಅಡೆತಡೆಗಳನ್ನು ನಿವಾರಿಸಲು ಎಜುಕೇಷನಲ್ ಕೌನ್ಸೆಲಿಂಗ್ ಸೌಲಭ್ಯ ಇರುವುದು. ಇದರಿಂದ ಮಕ್ಕಳಲ್ಲಿ ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾರ್ಗದರ್ಶನ ಪಡೆಯಲು ಸಾಧ್ಯವಿದೆ. ಜೊತೆಗೆ ಗರ್ಭಿಣಿಯರಿಗೆ, ಶಿಶುಗಳಿಗೆ, ಶಿಶು ಆರೈಕೆಗೆ, ಹದಿಹರೆಯದ ಯುವ ಮನಸ್ಸುಗಳಿಗೆ ಹಾಗೂ ವಯಸ್ಕರಿಗೆ ವಿಶೇಷ ಕೌನ್ಸೆಲಿಂಗ್ ಸೌಲಭ್ಯ ಇರುತ್ತದೆ. ಈ ಸಂಸ್ಥೆಯು ಪುತ್ತೂರಿನ ದುರ್ಗಾಪರಮೇಶ್ವರ ಭಟ್ ಹಾಗೂ ಶ್ರೀಮತಿ ಅರ್ಪಿತಾ ಭಟ್ ಇವರ ನೇತೃತ್ವದಲ್ಲಿ ನಡೆಯುತ್ತಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



