ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆ: ಮಣಿಪಾಲದ ಸ್ವಸ್ತಿ ಎಂ ಭಟ್‌ಗೆ ಪ್ರಥಮ ಬಹುಮಾನ

Upayuktha
0


ಮಣಿಪಾಲ: ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರ ಅಧ್ಯಯನ ಕೇಂದ್ರ- ಬೆಂಗಳೂರು ಇವರು ಏರ್ಪಡಿಸಿರುವ ರಾಜ್ಯ ಮಟ್ಟದ ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆಯಲ್ಲಿ ಸ್ವಸ್ತಿ ಎಂ ಭಟ್ ಪ್ರಥಮ ಬಹುಮಾನ ಪಡೆದಿದ್ದಾಳೆ.


ಈ ಬಹುಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಕ ಜಯಂತಿ ದಿನದಂದು (ನ. 08) ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನಕ ಗೌರವ ಕಾರ್ಯಕ್ರಮದಲ್ಲಿ ನೀಡಿದರು.


ಈಕೆ ಪ್ರಸ್ತುತ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಎ. ಎಸ್. ಮುರುಳಿ, ಚೆನ್ನೈ, ವಿದುಷಿ ಉಮಾಶಂಕರಿ, ಹಾಗೂ ಶ್ರೀ ರಾಘವೇಂದ್ರ ಆಚಾರ್ಯ, ಮಣಿಪಾಲ ಇವರ ಬಳಿ ಕಲಿಯುತ್ತಿದ್ದಾಳೆ. ಈಕೆ ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮಶನ್ ಸೈನ್ಸಸ್ ಇದರಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಮಧುಶಂಕರ್ ಹಾಗೂ ಉಮಾ ದಂಪತಿಗಳ ಪುತ್ರಿ, ಮಾಧವ ಕೃಪಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Advt Slider:
To Top