ಉಡುಪಿ: ಸರಕಾರಿ ಪ್ರಥಮದರ್ಜೆ ಕಾಲೇಜು, ಕಾಪು, ಉಡುಪಿ, ಇಲ್ಲಿ ಐಕ್ಯೂಎಸಿ ಹಾಗೂ ಗ್ರಂಥಾಲಯ ಮತ್ತು ಇ-ಸಂಪನ್ಮೂಲ ಕೇಂದ್ರದ ಸಹಭಾಗಿತ್ವದಲ್ಲಿ ಕಾಲೇಜು ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025 ರ ಅಂಗವಾಗಿ ಐಎಎಸ್/ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನವನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೂ.ದೀಪಿಕಾ ಸುವರ್ಣ ರವರು ಗ್ರಂಥಾಲಯದ ಪಿತಾಮಹ ಡಾ.ಎಸ್.ಆ ರ್, ರಂಗಾನಾಥನ್ ಪೋಟೋಗೆ ಹೂ ಹಾಕುವ ಮೂಲಕ ಕಾರ್ಯ ಕ್ರಮ ಅನಾವರಣಗೂಳಿಸಿ ಪ್ರಾಸ್ತಾವಿಕವಾಗಿ ಗ್ರಂಥಾಲಯದಲ್ಲಿಐಎಎಸ್/ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನದ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕನ್ನಡ ಪ್ರಾದ್ಯಾಪಕರಾದ ಪ್ರೂ. ರವಿರಾಜ್ ಶೆಟ್ಟಿ, ಇವರು ಗ್ರಂಥಾಲಯದ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ತಮ್ಮ ಅನಿಸಿಕೆಗಳನ್ನು ನುಡಿದರು. ಕಾಲೇಜಿನ ಗ್ರಂಥಪಾಲಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಯಶೋದಾರವರು ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಕಾಮರ್ಸ ಪ್ರಾದ್ಯಾಪಕರಾದ ಪ್ರೂ.ನಯನಾ ಎಲ್,ಎಮ್, ಪ್ರೂ.ರೋಶನಿ ಯಶ್ವಂತ್, ದ್ಯೆಹಿಕ ನಿರ್ದೇಶಕರಾದ ಸವಿತ, ಮ್ಯಾನೇಜ್ ಮೆಂಟ್ ವಿಭಾಗದ ಡಾ.ಅಶ್ವೀತಾ ಕರ್ಕೇರ, ಸವಿತಾ ಮೇಡಮ್, ಭೋದಕೇತರ ಸಿಬ್ಬಂದಿಗಳಾದ ಸೂಪರಿಂಡೆಂಟ್ ವಿನೋದ ಕುಮಾರ್, ನಾರಾಯಣ ಮೇಘ, ವರ್ಶೀತಾ, ಜಯಶ್ರೀ, ಹಾಗೂ ಕಾಲೇಜಿನ ಪದವಿ ಹಾಗೂ ಎಂ.ಕಾಂ. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)





