ಉಡುಪಿ: ವಲಯದ ಅತ್ಯಂತ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ಇದರ ನೂತನ ಅಧ್ಯಕ್ಷೆ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಿತ್ಯಾನಂದ ಆಕೆ೯ಡ್ ನಲ್ಲಿ ನ.29 ರಂದು ನಡೆಯಿತು.
ಘಟಕದ 24ನೆಯ ಅಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಬಾಸುಮ ಕೊಡಗು ದಂಪತಿಗಳ ಸುಪುತ್ರಿ ಪಲ್ಲವಿ ಕೊಡಗು ರವರು ಅಧಿಕಾರ ಸ್ವೀಕರಿಸಿದರು.
ಜೆಸಿ ವಲಯ 15ರ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯದರ್ಶಿಯಾಗಿ ಸಮಿಯಾ ಹೆಗ್ಡೆ, ಖಚಾಂಜಿಯಾಗಿ ಮಹಮ್ಮದ್ ಜಿಯಾದ್, ಮಹಿಳಾ ಜೆಸಿ ಸಂಚಾಲಕರಾಗಿ ನಯನ ಉದಯ್ ನಾಯ್ಕ್, ಯುವ ಜೇಸಿ ಅಧ್ಯಕ್ಷರಾಗಿ ಶ್ರೀರಾಜ್ ಆಚಾರ್ಯ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ 24ಹೊಸ ಜೆಸಿ ಸದಸ್ಯರನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಮಾಣವಚನ ಬೋಧಿಸಿ ಬರಮಾಡಿಕೊಂಡರು.
ಅವರು ಮಾತನಾಡಿ, ಜೆಸಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೈಕ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಮೂಲಕ ಉತ್ತಮ ರೀತಿಯ ತರಬೇತಿಯನ್ನು ಪಡೆಯುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಜೆ ಸಿ ಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರಾದ ಮಹಮದ್ ಸುಹಾನ್ ಹಾಗೂ ಲಯನ್ಸ್ ಸಂಸ್ಥೆಯ ಪೂರ್ವ ಜಿಲ್ಲಾ ಗವನ೯ರ್, ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಉಡುಪಿ ಸಿಟಿ ಘಟಕದ ವತಿಯಿಂದ ಪೂರ್ವ ಅಧ್ಯಕ್ಷ ದಿ.ಶಶಿಪ್ರಸಾದ್ ರಾವ್ ನೆನಪಿನಲ್ಲಿ ಕೊಡ ಮಾಡಲ್ಪಡುವ ಉಡುಪಿ ಕಣ್ಮಣಿ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗ ಪಟು ತನುಶ್ರೀ ಪಿತ್ರೋಡಿ ರವರಿಗೆ ನೀಡಲಾಯಿತು. ನೂತನ ಅಧ್ಯಕ್ಷರ ಆಶಯದಂತೆ ದಿ. ಸಾಲುಮರದ ತಿಮ್ಮಕ್ಕ ಇವರ ನೆನಪಿನಲ್ಲಿ ವರ್ಷಪೂರ್ತಿ ನಡೆಯುವ ಹಸಿರು ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ವಿನಯ ಆಚಾರ್ಯ ಇವರ ಜೆಸಿವಾಣಿಯೊಂದಿಗೆ ಆರಂಭವಾದ ಸಮಾರಂಭ ನೂತನ ಕಾರ್ಯದರ್ಶಿ ಸಮಿಯಾ ಹೆಗ್ಡೆ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




