ಇನ್ಫೋಸಿಸ್ ಸೈನ್ಸ್ ಫೌಂಡೇಶನ್‌ನಿಂದ ಇನ್ಫೋಸಿಸ್ ಪ್ರಶಸ್ತಿ 2025 ಘೋಷಣೆ

Upayuktha
0

• 2025 ರ ಇನ್ಫೋಸಿಸ್ ಪ್ರಶಸ್ತಿಯ ಆರು ವಿಜೇತರಲ್ಲಿ ಪ್ರಾಕೃತ ಮತ್ತು ಕನ್ನಡ ಕಾವ್ಯಶಾಸ್ತ್ರ ವಿದ್ವಾಂಸರು ಸೇರಿದ್ದಾರೆ

• ಬೆಂಗಳೂರಿನ ವಿಜ್ಞಾನಿಯೂ 2025 ರ ಇನ್ಫೋಸಿಸ್ ಪ್ರಶಸ್ತಿಗೆ ಭಾಜನ





ಮಂಗಳೂರು: ಇನ್ಫೋಸಿಸ್ ಸೈನ್ಸ್ ಫೌಂಡೇಶನ್(ISF) ತನ್ನ ಪ್ರತಿಷ್ಠಿತ ಇನ್ಫೋಸಿಸ್ ಪ್ರೈಜ್ 2025 ಅನ್ನು ಘೋಷಣೆ ಮಾಡಿದೆ. ಆರ್ಥಿಕ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಹ್ಯುಮ್ಯಾನಿಟಿಸ್ ಮತ್ತು ಸೋಶಿಯಲ್ ಸೈನ್ಸಸ್, ಲೈಫ್ ಸೈನ್ಸಸ್, ಗಣಿತ ವಿಜ್ಞಾನ ಮತ್ತು ಫಿಸಿಕಲ್ ಸೈನ್ಸಸ್ ಎಂಬ ಆರು ವಿಭಾಗಗಳಲ್ಲಿ ಈ ಬಹುಮಾನವನ್ನು ನೀಡಲಾಗುತ್ತಿದೆ. 2009 ರಲ್ಲಿ ಆರಂಭವಾದ ಈ ಇನ್ಫೋಸಿಸ್ ಪ್ರಶಸ್ತಿ ಭಾರತದ ಮೇಲೆ ಗಣನೀಯ ಪರಿಣಾಮ ಬೀರುವಂತಹ ಸಂಶೋಧನೆ ಮತ್ತು ಪರಿಣತಿ ಹೊಂದಿರುವ ಹೊಂದಿರುವ ವ್ಯಕ್ತಿಗಳ ಅಸಾಧಾರಣ ಸಾಧನೆಗಳನ್ನು ಗೌರವಿಸುತ್ತಾ ಬಂದಿದೆ. ಪ್ರತಿ ವಿಭಾಗದ ಬಹುಮಾನವು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು 100,000 USD (ಅಥವಾ ರೂಪಾಯಿಯಲ್ಲಿ ಅದಕ್ಕೆ ಸಮಾನವಾದ ಮೊತ್ತ) ಬಹುಮಾನವನ್ನು ಒಳಗೊಂಡಿರುತ್ತದೆ. 


ಈ ಇನ್ಫೋಸಿಸ್ ಪ್ರಶಸ್ತಿ 2025 ರ ವಿಜೇತರನ್ನು ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಮತ್ತು ಪರಿಣತರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ. ಆರಂಭದಿಂದಲೂ, ISF ಮಾನವ ಜೀವನದ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರಿದ ನವೀನ ಮತ್ತು ವಿನೂತನ ಸಂಶೋಧನೆ ಮತ್ತು ಸಾಧನೆಯನ್ನು ಗುರುತಿಸಿದೆ. 2024 ರಿಂದ 40 ವರ್ಷದೊಳಗಿನ ಸಂಶೋಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಲಾಗುತ್ತಿದೆ. ಈ ಮೂಲಕ ಅವರ ಅಸಾಧಾರಣ ಪ್ರತಿಭೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಮೂಲಕ ಅವರ ವೃತ್ತಿಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಮುಂದಿನ ಪೀಳಿಗೆಯ ಸಂಶೋಧಕರು ಮತ್ತು ನಾವೀನ್ಯಕಾರರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ.


ಈ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ 2025 ರ ವಿಜೇತರನ್ನು ISF ನ– ಕೆ.ದಿನೇಶ್ (ಟ್ರಸ್ಟಿಗಳ ಮಂಡಳಿ ಅಧ್ಯಕ್ಷರು), ನಾರಾಯಣಮೂರ್ತಿ, ಶ್ರೀನಾಥ್ ಬಂಟಿ, ಕ್ರಿಸ್ ಗೋಪಾಲಕೃಷ್ಣನ್, ಡಾ.ಪ್ರತಿಮಾ ಮೂರ್ತಿ ಮತ್ತು ಎಸ್.ಡಿ.ಶಿಬುಲಾಲ್ ಅವರು ಘೋಷಣೆ ಮಾಡಿದರು. ISF ನ ಇತರ ಟ್ರಸ್ಟಿಗಳಾದ- ಮೋಹನ್ ದಾಸ್ ಪೈ, ನಂದನ್ ನಿಲೇಕಣಿ ಮತ್ತು ಸಲೀಲ್ ಪರೇಖ್ ಅವರು ಈ ವರ್ಷದ ವಿಜೇತರರಿಗೆ ಅಭಿನಂದನೆ ಸಲ್ಲಿಸಿದರು.

ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಈ ಇನ್ಫೋಸಿಸ್ ಪ್ರೈಜ್ ಪಾತ್ರವಾಗಿದೆ. ಇದಲ್ಲದೇ, ಈ ಪ್ರಶಸ್ತಿಯನ್ನು ಪಡೆದವರಲ್ಲಿ ಅನೇಕರು ನೋಬೆಲ್ ಪ್ರಶಸ್ತಿ (ಅಭಿಜಿತ್ ಬ್ಯಾನರ್ಜಿ ಮತ್ತು ಏಸ್ತರ್ ಡಫ್ಲೋ), ಫೀಲ್ಡ್ಸ್ ಮೆಡಲ್ (ಮಂಜುಳ್ ಭಾರ್ಗವ ಮತ್ತು ಅಕ್ಷಯ ವೆಂಕಟೇಶ್), ಡ್ಯಾನ್ ಡೇವಿಡ್ ಪ್ರಶಸ್ತಿ (ಸಂಜಯ್ ಸುಬ್ರಮಣ್ಯಂ), ಮ್ಯಾಕ್ ಅರ್ಥುರ್ `ಜೀನಿಯಸ್’ ಗ್ರ್ಯಾಂಟ್ ಅಂಡ್ ಬ್ರಿಟಿಷ್ ಅಕಾಡೆಮಿ ಬುಕ್ ಪ್ರೈಜ್ (ಸುನೀಲ್ ಅಮೃತ್), ಬ್ರೇಕ್ ಥ್ರೂ ಪ್ರೈಜ್ ಇನ್ ಫಂಡಮೆಂಟಲ್ ಫಿಸಿಕ್ಸ್ (ಅಶೋಕ್ ಸೇನ್) ಮತ್ತು ಮಾರ್ಕೊನಿ ಪ್ರೈಜ್ (ಹರಿ ಬಾಲಕೃಷ್ಣನ್) ಸೇರಿದಂತೆ ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲು ಮುನ್ನಡಿ ಇಟ್ಟಿದ್ದಾರೆ. ಹಲವಾರು ಪ್ರಶಸ್ತಿ ವಿಜೇತರು ರಾಯಲ್ ಸೊಸೈಟಿಯ ಫೆಲೋಗಳಾಗಿ ಆಯ್ಕೆಯಾಗಿದ್ದು, ಅವರಲ್ಲಿ ಗಗನ್ ದೀಪ್ ಕಾಂಗ್ ಅವರು ಪ್ರತಿಷ್ಠಿತ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಕೆ.ದಿನೇಶ್ ಅವರು ಮಾತನಾಡಿ, ``ಇನ್ಫೋಸಿಸ್ ಪ್ರಶಸ್ತಿ 2025 ಕ್ಕೆ ಆಯ್ಕೆಯಾಗಿರುವ ಸಾಧಕರೆಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳು ಸಂಶೋಧನೆ, ವಿಜ್ಞಾನ ಮತ್ತು ಸಮಾಜದ ನಡುವಿನ ಪ್ರಮುಖ ಸಂಪರ್ಕವನ್ನು ಪ್ರತಿಬಿಂಬಿಸುತ್ತವೆ. ಮುಂದಿನ ಪೀಳಿಗೆಯ ನಾವೀನ್ಯಕಾರರಿಗೆ ಸ್ಫೂರ್ತಿಯನ್ನು ನೀಡುತ್ತವೆ. ಸಂಶೋಧನೆ ಮತ್ತು ವಿಜ್ಞಾನವು ಮಾನವ ಪ್ರಗತಿಯ ಮೂಲಾಧಾರಗಳಾಗಿವೆ ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದು, ಈ ದಿಸೆಯಲ್ಲಿ ಇನ್ಫೋಸಿಸ್ ಪ್ರಶಸ್ತಿಯು ಸಾಕಾರಗೊಳಿಸುತ್ತಲೇ ಇರುತ್ತದೆ. ನಾವೀನ್ಯತೆಯನ್ನು ಮುನ್ನಡೆಸುವ ಮತ್ತು ವಿಭಾಗಗಳಾದ್ಯಂತ ತಿಳುವಳಿಕೆಯನ್ನು ವಿಸ್ತರಣೆ ಮಾಡುವ ಸಂಸ್ಕೃತಿಯನ್ನು ಪೋಷಣೆ ಮಾಡುವ ಫೌಂಡೇಶನ್ ನ ನಿರಂತರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ’’ ಎಂದು ಹೇಳಿದರು.


ಆರು ವಿಭಾಗಗಳಲ್ಲಿ ಇನ್ಫೋಸಿಸ್ ಪ್ರಶಸ್ತಿ 2025 ರ ವಿಜೇತರು:

ಆರ್ಥಿಕ

ಆರ್ಥಿಕ ವಿಭಾಗದಲ್ಲಿ ಮೆಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಆರ್ಥಿಕ ವಿಭಾಗದ ನಿಖಿಲ್ ಅಗರ್ವಾಲ್, ಪೌಲಾ ಎ.ಸ್ಯಾಮ್ಯುವಲ್ಸನ್ ಅವರಿನ್ನು ಇನ್ಫೋಸಿಸ್ ಪ್ರಶಸ್ತಿ 2025 ಕ್ಕೆ ಆಯ್ಕೆ ಮಾಡಲಾಗಿದೆ. ಶಾಲಾ ಆಯ್ಕೆ, ಮೆಡಿಕಲ್ ರೆಸಿಡೆನ್ಸಿ ಮತ್ತು ಕಿಡ್ನಿ ವಿನಿಮಯ ಸೇರಿದಂತೆ ಹಂಚಿಕೆಯ ಕಾರ್ಯವಿಧಾನಗಳ ಪ್ರಾಯೋಗಿಕ ಅಧ್ಯಯನಗಳಿಗೆ ಮಾರ್ಗನಿರ್ದೇಶಕ ವಿಧಾನದ ಅಭಿವೃದ್ಧಿ ಮತ್ತು ಅನುಷ್ಠಾನ ಸೇರಿದಂತೆ ಮಾರುಕಟ್ಟೆ ವಿನ್ಯಾಸಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಅರ್ಥಶಾಸ್ತ್ರವು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಾರದಂತಹ ಬೇಡಿಕೆಯ ಪೂರೈಕೆಗೆ ಸಮಾನವಾಗಿರುವ ಬೆಲೆಗಳನ್ನು ತರುತ್ತದೆ ಎಂದು ಊಹಿಸಲಾಗುತ್ತದೆ. ಸೇಬು ಮತ್ತು ಕಿತ್ತಳೆಗಳ ವಿಚಾರದಲ್ಲಿ ಇದು ನಿಜವಾಗಿದ್ದರೂ ಮೂತ್ರಪಿಂಡಗಳ ಅಗತ್ಯವಿರುವವರು ಮೂತ್ರಪಿಂಡಗಳನ್ನು ಪೂರೈಸಲು ಸಿದ್ಧರಿರುವವರನ್ನು ಕಂಡುಕೊಳ್ಳುವ ರೀತಿಯಲ್ಲಿ ಅಥವಾ ಕಾಲೇಜು ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳು ಅವುಗಳನ್ನು ಪ್ರವೇಶಿಸುವ ಕಾಲೇಜನ್ನು ಕಂಡುಕೊಳ್ಳುವ ರೀತಿಯಲ್ಲಿ ಇದು ಆ ರೀತಿ ಆಗಿರುವುದಿಲ್ಲ. ಈ ಹೊಂದಾಣಿಕೆಯ ಸಮಸ್ಯೆಗಳು ಬಹಳ ಮುಖ್ಯವಾಗಿರುತ್ತವೆ. ಆದರೆ, ಅಸಮಂಜಸವಾಗಿ ಅರ್ಥೈಸಿಕೊಳ್ಳಲಾಗುತ್ತವೆ. ಅಗರ್ವಾಲ್ ಅವರ ಈ ಮೂಲ ಸಾಹಿತ್ಯವನ್ನು ಡೇಟಾದಲ್ಲಿ ನೆಲೆಗೊಂಡಿರುವುಗಳಲ್ಲಿ ಒಂದಾಗಿ ಪರಿವರ್ತಿಸುವುದರ ಜೊತೆಗೆ ನೀತಿ ವಿನ್ಯಾಸಕ್ಕೆ ಹೊಸ ಒಳನೋಟಗಳನ್ನು ಒದಗಿಸುತ್ತದೆ.


ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್‌:

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಟೊರಾಂಟೊ ವಿಶ್ವವಿದ್ಯಾಲಯದ ಮ್ಯಾಥಮೆಟಿಕಲ್ ಅಂಡ್ ಕಂಪ್ಯುಟೇಶನಲ್ ಸೈನ್ಸಸ್ ನ ಅಸೋಸಿಯೇಟ್ ಪ್ರೊಫೆಸರ್ (CSC) ಸುಶಾಂತ್ ಸಚ್ ದೇವ್ ಅವರಿಗೆ 2025 ರ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡಲಾಗಿದೆ. ಮ್ಯಾಥಮೆಟಿಕಲ್ ಆಪ್ಟಿಮೈಸೇಶನ್ ನಲ್ಲಿ ಅವರು ಆಳವಾದ ಒಳನೋಟಗಳು ಮತ್ತು ಅಲ್ಗಾರಿದಮಿಕ್ ಸಿದ್ಧಾಂತಗಳಲ್ಲಿದ್ದ ದೀರ್ಘಕಾಲದ ಮುಕ್ತವಾದ ಪ್ರಶ್ನೆಗಳ ಪರಿಹಾರಕ್ಕೆ ತಮ್ಮದೇ ಆದ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ. ಇದಕ್ಕಾಗಿ ಇಂಟರ್ನೆಟ್, ಸಾರಿಗೆ ಮತ್ತು ಸಂವಹನ ಜಾಲಗಳು ಸೇರಿದಂತೆ ಸಾಮಾಜಿಕ ಜೀವನಾಡಿಗಳಲ್ಲಿ ಮಾಹಿತಿ ಹರಿವಿನ ಮೇಲೆ ಪರಿಣಾಮ ಬೀರುವ ಕಂಪ್ಯುಟೇಶನಲ್ ಸಮಸ್ಯೆಗಳಲ್ಲಿ ಸಾಧಿಸಬಹುದಾದ ಕಾರ್ಯಕ್ಷಮತೆಯ ಕುರಿತು ಹೊಸ ಮಾನದಂಡಗಳನ್ನು ಸ್ಥಾಪಿಸುವಂತೆ ಮಾಡಿದ್ದಾರೆ. ಅವರು ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಮುಖ ಪ್ರವರ್ತಕರಾಗಿದ್ದು, ಅವರ ಮೂಲಭೂತ ಕೊಡುಗೆಗಳು ಆಧುನಿಕ ಸಮಾಜದ ಆಧಾರವಾಗಿರುವ ಅನೇಕ ಅಲ್ಗಾರಿದಮಿಕ್ ಸವಾಲುಗಳ ಮೇಲೆ ಗಾಢವಾಗಿ ಪ್ರಭಾವ ಬೀರಿದೆ.



ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ 

ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಈ ವರ್ಷದ ಇನ್ಫೋಸಿಸ್ ಪ್ರಶಸ್ತಿಯನ್ನು ಚಿಕಾಗೋ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಭಾಷೆಗಳು ಮತ್ತು ನಾಗರಿಕತೆಗಳ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆ್ಯಂಡ್ರ್ಯೂ ಒಲೆಟ್ ಅವರಿಗೆ ನೀಡಲಾಗಿದೆ. ಅವರು ಈ ಪೀಳಿಗೆಯಲ್ಲಿ ಪ್ರಾಕೃತ ಭಾಷೆಗಳ ಬಗ್ಗೆ ವಿಶ್ವದ ಅಗ್ರಗಣ್ಯ ವಿದ್ವಾಂಸರೆನಿಸಿದ್ದು, ಈ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದವರಾಗಿದ್ದಾರೆ. ಅವರು ರಚಿಸಿರುವ "ಲಾಂಗ್ವೇಜ್ ಆಫ್ ದಿ ಸ್ನೇಕ್ಸ್" ಕೃತಿಯು ಕಳೆದ ಎರಡು ಸಾವಿರ ವರ್ಷಗಳಲ್ಲಿ ಸಂಸ್ಕೃತ ಮತ್ತು ಭಾರತೀಯ ಸ್ಥಳೀಯ ಭಾಷೆಗಳೊಂದಿಗೆ ಪ್ರಾಕೃತದ ಸಾಂಸ್ಕೃತಿಕ ಪಾತ್ರಗಳ ಒಂದು ಅಭೂತಪೂರ್ವ ವಿಶ್ಲೇಷಣೆಯನ್ನು ಹೊಂದಿದೆ. ಆ್ಯಂಡ್ರ್ಯೂ ಒಲೆಟ್ ಅವರ ಭಾಷಾ ಪಾಂಡಿತ್ಯ ಮತ್ತು ಜ್ಞಾನವು ಅತ್ಯದ್ಭುತವಾಗಿದ್ದು, ಸಂಸ್ಕೃತ, ಪ್ರಾಕೃತ, ಕನ್ನಡ, ತಮಿಳು, ಓಲ್ಡ್ ಜಾವನೀಸ್ ಮತ್ತು ಚೈನೀಸ್ ಅಧ್ಯಯನಕ್ಕೆ ವಿವರವಾದ ಕೊಡುಗೆಗಳನ್ನು ನೀಡಿದ್ದಾರೆ. ಆಧುನಿಕ ಯುರೋಪಿಯನ್ ಭಾಷೆಗಳ ಜ್ಞಾನ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಅವರ ತರಬೇತಿಯನ್ನು ಹೊಂದುವ ಮೂಲಕ ಜ್ಞಾನದ ಭಂಡಾರವೆನಿಸಿದ್ದಾರೆ. ಸಂಸ್ಕೃತ ಸಾಹಿತ್ಯ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಒಲೆಟ್ ಅವರಂತಹ ವಿದ್ವತ್ ಪೂರ್ಣತೆಯು ಆಗ್ನೇಯ ಏಷ್ಯಾದ ಅತ್ಯಂತ ದೂರದ ಸ್ಥಳಗಳಲ್ಲಿ ಭಾರತೀಯ ಸಂಸ್ಕೃತಿಯ ಗಮನಾರ್ಹ ವಿಶ್ವವ್ಯಾಪಿ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.


ಜೀವ ವಿಜ್ಞಾನಗಳು

ಜೀವ ವಿಜ್ಞಾನದಲ್ಲಿ 2025 ರ ವರ್ಷದ ಇನ್ಫೋಸಿಸ್ ಪ್ರಶಸ್ತಿಗೆ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ನ ಅಸೋಸಿಯೇಟ್ ಪ್ರೊಫೆಸರ್ ಅಂಜನಾ ಬದರಿನಾರಾಯಣ ಅವರು ಆಯ್ಕೆಯಾಗಿದ್ದಾರೆ. ಜಿನೋಮ್ ನಿರ್ವಹಣೆ ಮತ್ತು ದುರಸ್ತಿಯ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ಮಾಡಿರುವ ಸಾಧನೆಗಳಿಗಾಗಿ ಈ ಪ್ರಶಸ್ತಿ ಸಂದಿದೆ. ಜೆನೆಟಿಕ್ ಮತ್ತು ಸೆಲ್ ಬಯೋಲಾಜಿಕಲ್ ಕಾರ್ಯವಿಧಾನಗಳ ಮೂಲಕ ಸಂಯೋಜಿಸಲ್ಪಟ್ಟ ನಾವಿನ್ಯ ಲೈವ್-ಸೆಲ್ ಇಮೇಜಿಂಗ್ ಮೂಲಕ ಡಿಎನ್ಎ ಹಾನಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದರ ಮೂಲಭೂತ ತತ್ವಗಳನ್ನು ಬಹಿರಂಗಪಡಿಸಿದೆ. ಅವಿಭಜಿತ ಕೋಶಗಳಲ್ಲಿ ರೂಪಾಂತರವನ್ನು ಪ್ರದರ್ಶಿಸಿದೆ ಮತ್ತು ಮೈಟೋಕಾಂಡ್ರಿಯಲ್ ಡಿಎನ್ಎ ಹಾನಿ ಪ್ರತಿಕ್ರಿಯೆಗಳ ನವೀನ ಮಾರ್ಗಗಳನ್ನು ಗುರುತಿಸಿದೆ. ಜೀವನ ಮತ್ತು ವಿಕಾಸಕ್ಕೆ ಕೇಂದ್ರವಾದ ತತ್ವಗಳನ್ನು ಬೆಳಗುವಂತೆ ಮಾಡುತ್ತದೆ. ಜೀವಕೋಶಗಳು ತಮ್ಮ ಜಿನೋಮ್ ಗಳನ್ನು ರಕ್ಷಣೆಗೆ ಬಳಸುವ ಸಾರ್ವತ್ರಿಕ ತಂತ್ರಗಳನ್ನು ಬಹಿರಂಗಪಡಿಸುವ ಮೂಲಕ ಅವರು ಜಿನೋಮ್ ಮತ್ತು ಸೂಕ್ಷ್ಮಜೀವಿಯ ಜೀವಶಾಸ್ತ್ರದ ಕ್ಷೇತ್ರಗಳನ್ನು ಆಳವಾಗಿ ಮುನ್ನಡೆಸಿದ್ದಾರೆ. ಇದರೊಂದಿಗೆ ಜಿನೋಮ್ ಸ್ಥಿರತೆ ಮತ್ತು ಕೋಶೀಯ ಸ್ಥಿತಿಸ್ಥಾಪಕತ್ವದ ಸಂಶೋಧನೆಗೆ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ.


ಗಣಿತ ವಿಜ್ಞಾನ

ಈ ಕ್ಷೇತ್ರದಲ್ಲಿ ಈ ವರ್ಷದ ಇನ್ಫೋಸಿಸ್ ಪ್ರಶಸ್ತಿಯು ಮುಂಬೈನ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ನ ಗಣಿತ ಶಾಲೆಯ ಅಸೋಸಿಯೇಟ್ ಪ್ರೊಫೆಸರ್ ಸವ್ಯಸಾಚಿ ಮುಖರ್ಜಿ ಅವರಿಗೆ ಲಭಿಸಿದೆ. ಇದು ಗಣಿತದ ಎರಡು ವಿಭಿನ್ನ ಕ್ಷೇತ್ರಗಳನ್ನು ಸಂಪರ್ಕಿಸುವ ಅವರ ಪ್ರಬಲ ಮತ್ತು ಮೂಲಕರ್ತವ್ಯಕ್ಕಾಗಿ ಕ್ಲೀನಿಯನ್ ಗುಂಪು ಕ್ರಿಯೆಗಳ ಡೈನಾಮಿಕ್ಸ್ ಮತ್ತು ಸಂಕೀರ್ಣ ಡೈನಾಮಿಕ್ಸ್ ನಲ್ಲಿ ಹೋಲೋಮಾರ್ಫಿಕ್ ಮತ್ತು ಆ್ಯಂಟಿ-ಹೋಲೋಮಾರ್ಫಿಕ್ ನಕ್ಷೆಗಳ ಪುನರಾವರ್ತನೆಯನ್ನು ಬಿಡಿಸುವಲ್ಲಿ ನಿಪುಣರಾಗಿದ್ದಾರೆ. ಅವರ ಫಲಿತಾಂಶಗಳು ಕನ್ಫರ್ಮಲ್ ಡೈನಾಮಿಕ್ಸ್ ನ ನಮ್ಮ ತಿಳುವಳಿಕೆಯನ್ನು ಮರುರೂಪಿಸಿವೆ. ಇದು ಭೌತಶಾಸ್ತ್ರ, ದ್ರವ ಡೈನಾಮಿಕ್ಸ್ ಮತ್ತು ಡೇಟಾ ಸೈನ್ಸ್ ನಾದ್ಯಂತ ಪ್ರಮುಖ ಪರಿಣಾಮಗಳನ್ನು ಹೊಂದಿರುವ ಅಧ್ಯಯನ ಕ್ಷೇತ್ರವಾಗಿದೆ.


ಭೌತ ವಿಜ್ಞಾನಗಳು

ಭೌತ ವಿಜ್ಞಾನ ಕ್ಷೇತ್ರದಲ್ಲಿ 2025 ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಗೆ ಕ್ಯಾಲಿಫೋರ್ನಿಯಾದ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಕಾರ್ತೀಶ್ ಮಂಥಿರಾಮ್ ಅವರು ಆಯ್ಕೆಯಾಗಿದ್ದಾರೆ. ಇವರು ಅಗತ್ಯ ರಾಸಾಯನಿಕಗಳಿಗೆ ಸುಸ್ಥಿರ ಎಲೆಕ್ಟ್ರೋಕೆಮಿಕಲ್ ಮಾರ್ಗಗಳ ಕುರಿತು ಅವರು ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ದೊರೆತಿದೆ. ಲೀಥಿಯಂ-ಮಧ್ಯಸ್ಥಿಕೆಯ ಅಮೋನಿಯಾ ಸಂಶ್ಲೇಷಣೆ ಮತ್ತು ಆಮ್ಲಜನಕ-ಪರಮಾಣು ವರ್ಗಾವಣೆ ವೇಗವರ್ಧನೆಯಲ್ಲಿನ ಅವರ ಪ್ರಗತಿಗಳು ವಿದ್ಯುದ್ದೀಕೃತ ರಾಸಾಯನಿಕ ಉತ್ಪಾದನೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಪರಿವರ್ತಿಸಿವೆ. ನವೀಕರಿಸಬಹುದಾದ ವಿದ್ಯುತ್ ಕೃಷಿ ಮತ್ತು ಕೈಗಾರಿಕೆಗಳಿಗೆ ಮೂಲಭೂತವಾದ ರಾಸಾಯನಿಕಗಳ ಆಯ್ದ ಪರಿಣಾಮಕಾರಿ ಸಂಶ್ಲೇಷಣೆಯನ್ನು ಹೇಗೆ ಚಾಲನೆ ಮಾಡುತ್ತದೆ ಎಂಬುದನ್ನು ಪ್ರದರ್ಶಿಸುತ್ತದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



Post a Comment

0 Comments
Post a Comment (0)
Advt Slider:
To Top