ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಸಂವಿಧಾನ ಎಂದರೆ ಕಾನೂನುಗಳನ್ನು ಒಳಗೊಂಡ ದಾಖಲೆಯ ಪುಸ್ತಕ ಎಂದು ಅರ್ಥೈಸಬಹುದು. 1949 ನವೆಂಬರ್ 26 ರಂದು ಅಂಗೀಕೃತವಾದ ಭಾರತೀಯ ಸಂವಿಧಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1946 ರ ಡಿಸೆಂಬರ್ ತಿಂಗಳ 9ನೇ ತಾರೀಖಿನಂದು ಮೊದಲ ಸಂವಿಧಾನ ಸಭೆ ಪ್ರಾರಂಭವಾಯಿತು. ಸಂವಿಧಾನ ರಚನಾ ಸಭೆಯು ಡಾ. ಬಾಬು ರಾಜೇಂದ್ರಪ್ರಸಾದ್ ರವರ ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿದ್ದು ಒಟ್ಟಾರೆ 2 ವರ್ಷ 11 ತಿಂಗಳು 18 ದಿನಗಳ ಕಾಲ ಚರ್ಚೆ ನಡೆಸಿ, ವಿಶ್ವದಲ್ಲೇ ಒಂದು ಬೃಹತ್ ಸಂವಿಧಾನವನ್ನು ರಚಿಸಲಾಯಿತು.
ಇದು ಅಂದು 395 ವಿಧಿಗಳು, 22 ಭಾಗಗಳ ಮತ್ತು 8 ಅನುಸೂಚಿಗಳನ್ನು ಒಳಗೊಂಡಿತ್ತು. ಆದರೆ ಕಾಲಮಾನಕ್ಕೆ ಅನುಗುಣವಾಗಿ ಇಂದು ವಿಧಿಗಳ ಸಂಖ್ಯೆ, ಭಾಗಗಳ ಸಂಖ್ಯೆ ಮತ್ತು ಅನುಸೂಚಿಗಳ ಸಂಖ್ಯೆ ಹೆಚ್ಚಾಗುವ ಮೂಲಕ ಬದಲಾವಣೆ ಆಗಿದೆ. ಅಂತಹ ನಮ್ಮ ಸಂವಿಧಾನವು ಅಧಿಕೃತವಾಗಿ 1950 ರ ಜನವರಿ 26 ರಂದು ಜಾರಿಗೆ ಬಂದಿತು. ಆ ಸವಿ ನೆನಪಿಗೆ " ಗಣರಾಜ್ಯೋತ್ಸವವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದೇವೆ. 1949 ನವೆಂಬರ್ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿಯೇ ದೊಡ್ಡದಾದಾ ಸಂವಿಧಾನ ನಮ್ಮದಾಗಿದೆ. ಒಕ್ಕೂಟ ವ್ಯವಸ್ಥೆ , ಪ್ರಜಾಪ್ರಭುತ್ವ, ಮೌಲ್ಯಿಕ ಹಕ್ಕುಗಳು, ಮೌಲಿಕ ಕರ್ತವ್ಯಗಳನ್ನು ಒಳಗೊಂಡಿದೆ. ಸಂವಿಧಾನ ದಿನಾಚರಣೆಯನ್ನು ಆಚರಿಸುವ ಉದ್ದೇಶವೇನೆಂದರೆ ಸಂವಿಧಾನದ ಮಹತ್ವವನ್ನು ಜನ ಸಾಮಾನ್ಯರಿಗೆ ತಲುಪಿಸುವುದು. ಯುವಜನರಲ್ಲಿ ಸಂವಿಧಾನಿಕ ಮೌಲ್ಯಗಳಾದ ಸಮಾನತೆ, ನ್ಯಾಯ, ಸ್ವತಂತ್ರದ ಬಗೆಗೆ ಜಾಗೃತಿ ಮೂಡಿಸುವುದು ಹಾಗೂ ಅಂಬೇಡ್ಕರ್ ರವರ ಕೊಡುಗೆಯನ್ನು ಸ್ಮರಿಸುವುದು. ಈ ಸಂವಿಧಾನ ದಿನಾಚರಣೆಯಂದು ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಭಾಷಣ, ಚರ್ಚೆ, ಕ್ವಿಝ್ ಸ್ಪರ್ಧೆಗಳನ್ನು ನಡೆಸುವ ಮೂಲಕ ಅರಿವನ್ನು ಉಂಟುಮಾಡಬಹುದಾಗಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಅರಿತು ಗೌರವಿಸಿ, ಪಾಲಿಸೋಣ.
ಕು. ಮೇಘ ಈ
9ನೇ ತರಗತಿ
ಜಿ. ಜಿ. ಜೆ. ಸಿ. ಪ್ರಧಾನ,
ಆರ್. ಸಿ. ರಸ್ತೆ , ಹಾಸನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




