ರಾಷ್ಟ್ರೀಯ ಗೀತೆಗೆ 150 ವರ್ಷ ಪೂರ್ಣ; ಹಿಂದೂ ಜನಜಾಗೃತಿ ಸಮಿತಿಯಿಂದ 'ವಂದೇ ಮಾತರಂ ' ಹಾಡಿ ಗೌರವ
ಬೆಂಗಳೂರು: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚೈತನ್ಯವಾದ 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವವನ್ನು ರಾಷ್ಟ್ರವ್ಯಾಪಿ ಆಚರಿಸಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ. ವಂದೇ ಮಾತರಂ ಕೇವಲ ಗೀತೆಯಲ್ಲ, ಅದು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಭಾರತಮಾತೆಯನ್ನು ದೇವತೆಯಾಗಿ ಆರಾಧಿಸಲು ಮತ್ತು ದಾಸ್ಯದಿಂದ ಮುಕ್ತಿ ಪಡೆಯಲು ಭಾರತೀಯರಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿಸಲು ಬರೆದ ಶಕ್ತಿಯುತ ಘೋಷವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.
ಸಮಿತಿಯ ವತಿಯಿಂದ ದೇಶದಾದ್ಯಂತ ಈ ಗೀತೆಯ ಮಹತ್ವವನ್ನು ತಿಳಿಸಿ, ಸಾಮೂಹಿಕವಾಗಿ 'ವಂದೇ ಮಾತರಮ್' ಗಾಯನವನ್ನು ನಡೆಸಲಾಯಿತು ಮತ್ತು ಶಾಲೆ–ಕಾಲೇಜುಗಳಲ್ಲಿ ಮಕ್ಕಳಿಂದಲೂ ಹಾಡಿಸಲಾಯಿತು, ಇದರಿಂದ ವಿದ್ಯಾರ್ಥಿಗಳಲ್ಲೂ ದೇಶಭಕ್ತಿಯ ಭಾವನೆ ಜಾಗೃತಗೊಳಿಸಲಾಯಿತು. ಈ ಅಭಿಯಾನದಲ್ಲಿ ಬೆಂಗಳೂರಿನ ಹಲವಾರು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಈ ದೇಶ ಭಕ್ತಿಗೀತೆ ಗಾಯನದಲ್ಲಿ ಪಾಲ್ಗೊಂಡಿದ್ದರು.
ಸ್ವತಂತ್ರ ಸಂಗ್ರಾಮದ ಕಾರ್ಯವನ್ನು ಮಹರ್ಷಿ ಅರಬಿಂದೋ ಅವರು ಇದನ್ನು ಕೇವಲ ರಾಜಕೀಯ ಕಾರ್ಯವಲ್ಲ, ಬದಲಿಗೆ ಜನರ ಆತ್ಮಚೇತನವನ್ನು ಜಾಗೃತಗೊಳಿಸುವ ಆಧ್ಯಾತ್ಮಿಕ ಕ್ರಿಯೆ ಎಂದು ಪರಿಗಣಿಸಿದ್ದರು. 1905ರ ಬಂಗಾಳ ವಿಭಜನೆ ವಿರೋಧ ಚಳುವಳಿಯ ಮುಖ್ಯವಾಹಿನಿಯಾಗಿದ್ದ ಈ ವಂದೇ ಮಾತರಂ ಘೋಷವು, ಬ್ರಿಟಿಷ್ ದಬ್ಬಾಳಿಕೆಯನ್ನು ಎದುರಿಸಲು ಮತ್ತು ಏಕತೆಯನ್ನು ಸಾರಲು ಸಾಧನವಾಗಿತ್ತು. ಕರ್ನಾಟಕದ ಗುಲ್ಬರ್ಗಾ (ಕಲಬುರಗಿ) ಯಲ್ಲಿ ವಂದೇ ಮಾತರಮ್ ಚಳುವಳಿ ನಡೆದಿತ್ತು. ಈ ವಿದ್ಯಾರ್ಥಿ ನೇತೃತ್ವದ ಚಳುವಳಿಯ ಮೂಲಕ ಇದು ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅಪಾರ ಕೊಡುಗೆ ನೀಡಿದೆ ಎಂದರು.
ಈ ಅಭಿಯಾನದ ವೈಶಿಷ್ಟ್ಯವೇನೆಂದರೆ ಸದ್ಯ ಅನೇಕ ಕಡೆಗಳಲ್ಲಿ ವಂದೇ ಮಾತರಮ್ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಲಾಗುತ್ತದೆ, ಆದರೆ ಬಂಕಿಮ ಚಂದ್ರ ಚಟರ್ಜಿ ಯವರು ಒಟ್ಟು 6 ಚರಣಗಳಲ್ಲಿ ಗೀತೆಯನ್ನು ಬರೆದು ಭಾರತ ಮಾತೆಯನ್ನು ವರ್ಣಿಸಿದ್ದಾರೆ. ಸಂಪೂರ್ಣ ವಂದೇ ಮಾತರಮ್ ಗಾಯನದಿಂದ ಭಾರತ ಮಾತೆಗೆ ಪೂರ್ಣ ಗೌರವ ಸಲ್ಲುತ್ತದೆ, ಮತ್ತು ಗೀತೆಯನ್ನು ಕೇಳುವವರ ಮನದಲ್ಲೂ ದೇಶಭಕ್ತಿಯು ಹೆಚ್ಚುತ್ತದೆ. ಹಾಗಾಗಿ ಸಮಿತಿಯು ಈ ನಿಮಿತ್ತ ಸಂಪೂರ್ಣ ವಂದೇ ಮಾತರಮ್ ಗೀತೆಯನ್ನು ಹಾಡುವ ಸಂಕಲ್ಪ ಮಾಡಿತ್ತು. ಕಳೆದ 23 ವರ್ಷಗಳಿಂದ ರಾಷ್ಟ್ರ ಮತ್ತು ಧರ್ಮ ರಕ್ಷಣೆಗೆ ಶ್ರಮಿಸುತ್ತಿರುವ ಸಮಿತಿಯು, ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮದ ಮೂಲಕ ದೇಶಾಭಿಮಾನವನ್ನು ಮೂಡಿಸಲು ಪ್ರಯತ್ನಿಸಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







