ಭಾಷೆಗಳ ನಡುವೆ ಪ್ರೀತಿ ಬೆಳೆಯಬೇಕು: ಡಾ. ವಾಸುದೇವ ಬೆಳ್ಳೆ

Chandrashekhara Kulamarva
0

ಗೋವಿಂದ ದಾಸ ಕಾಲೇಜು, ಸುರತ್ಕಲ್‍ನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ನಾಡಗೀತೆ ನೂರರ ಸಂಭ್ರಮ



ಸುರತ್ಕಲ್‍: ಕರ್ನಾಟಕವು ಸಾಹಿತ್ಯ, ಶಿಲ್ಪಕಲೆ ಮತ್ತು ಪ್ರಾಕೃತಿಕವಾಗಿ ಸಂಪತ್ಭರಿತ ನಾಡಾಗಿದೆ. ಭವ್ಯ ವಿಜಯನಗರ ಸಾಮ್ರಾಜ್ಯದಿಂದ ತೊಡಗಿ ಕಡಲ ತಡಿಯ ಉಳ್ಳಾಲದವರೆಗೂ ಅಪ್ರತಿಮ ಶೌರ್ಯವನ್ನು ಹೊಂದಿದ್ದ ರಾಜರಾಣಿಯರ ಆಳ್ವಿಕೆಯನ್ನು ಕಂಡಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಕರ್ನಾಟಕದ ಸಹಸ್ರಾರು ದೇಶಪ್ರೇಮಿ ಅಮರ ವೀರರ ಬಲಿದಾನವಿದೆ. ಆದಿಕವಿ ಪಂಪ, ರನ್ನ, ರಾಷ್ಟ್ರಕವಿ ಕುವೆಂಪು, ವರಕವಿ ದ.ರಾ.ಬೇಂದ್ರೆ, ಕಡಲ ತಡಿಯ ಭಾರ್ಗವ ಎಂದೇ ಪ್ರಸಿದ್ಧರಾದ ಡಾ.ಕೆ.ಶಿವರಾಮ ಕಾರಂತರಂತಹ ಅನೇಕ ಕವಿಗಳನ್ನು, ಸಾಹಿತಿಗಳನ್ನು ಸಾಹಿತ್ಯಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಕರ್ನಾಟಕವು ವಿಶ್ವಮಾನ್ಯವಾದ ಹಿರಿಮೆಯನ್ನು ಹೊಂದಿದೆ. ಇಂತಹ ಭವ್ಯ ಪರಂಪರೆಯನ್ನು ಹೊಂದಿದ ಕರ್ನಾಟಕದ ಹಿರಿಮೆಯನ್ನು ಮುಂದುವರೆಸುವುದು ಇಂದಿನ ವಿದ್ಯಾರ್ಥಿ ಗಳ ಕರ್ತವ್ಯವಾಗಿದೆ ಎಂದು ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ವಾಸುದೇವ ಬೆಳ್ಳೆ ನುಡಿದರು. 


ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್‍ನ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‍ನ ಆಂತರಿಕ ಗುಣಮಟ್ಟ ಖಾತರಿ ಕೋಶ, ಕನ್ನಡ ವಿಭಾಗ, ವಿದ್ಯಾರ್ಥಿ ವಾಣಿ ಮತ್ತು ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಭಾಷಾ ವಿಭಾಗ, ಲಲಿತಕಲಾ ಸಂಘ ಮತ್ತು ಮಾನವಿಕ ವಿಭಾಗಗಳ ಸಂಯುಕ್ತಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ನಾಡಗೀತೆ ನೂರರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಏಕತೆ ಮತ್ತು ಕನ್ನಡಿಗರ ಹೆಮ್ಮೆಯ ಸಂಕೇತವಾಗಿ ಮೂಡಿಬಂದ ಕನ್ನಡ ನಾಡಗೀತೆಯ ಐತಿಹಾಸಿಕ ಮಹತ್ವನ್ನು ವಿಶ್ಲೇಷಿಸುತ್ತಾ ಭಾಷೆಗಳ ನಡುವೆ ಪ್ರೀತಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ. ಮಾತನಾಡಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯು ಪೂರ್ಣ ಕರ್ನಾಟಕದ ಚಿತ್ರಣವನ್ನು ಒಂದೇ ಗೀತೆಯಲ್ಲಿ ಕಟ್ಟಿಕೊಟ್ಟಂತಹ ಅದ್ಭುತ ಕೃತಿಯಾಗಿದ್ದು ಪ್ರತಿಯೊಬ್ಬರಲ್ಲೂ ಕನ್ನಡ ಭಾಷಾ ಪ್ರೇಮ ಮತ್ತು ನಾಡಿನ ಬಗ್ಗೆ ಹೆಮ್ಮೆಯನ್ನು ಬಡಿದೆಬ್ಬಿಸುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಲಿಕಾ ಭಾಷೆಯೊಂದಿಗೆ ಸಂವಹನ ಭಾಷೆಯಾಗಿಯೂ ಬಳಸುವುದರಿಂದ ಕನ್ನಡದ ಉಳಿವು ಹಾಗೂ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ ಎಂದರು.


ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಲಲಿತಕಲಾ ಸಂಘದ ಸಂಯೋಜಕ ಡಾ.ಸಂತೋಷ್ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕ ಕಿಟ್ಟು ಕೆ.ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಮತ್ತು ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ಅಕ್ಷತಾ ವಿ. ಕಾರ್ಯಕ್ರಮ ನಿರೂಪಿಸಿದರು.ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ವಿದ್ಯಾರ್ಥಿವಾಣಿ ಭಿತ್ತಿ ಪತ್ರಿಕೆಘಟಕದ ಸಂಯೋಜಕಿ ಡಾ. ಆಶಾಲತಾ ಪಿ. ವಂದಿಸಿದರು.


ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಧನ್ಯಕುಮಾರ್ ವೆಂಕಣ್ಣವರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯ ಪ್ರವೀಣ್, ರಾ.ಸೇಯೋ.ಕಾರ್ಯಕ್ರಮಾಧಿಕಾರಿ ಡಾ.ಭಾಗ್ಯಲಕ್ಷ್ಮೀ ಎಂ., ಸಾಹಿತ್ಯ ಸಂಘದ ಸಂಯೋಜಕ ಕುಮಾರ್ ಮಾದರ್‍ ಮಾನವಿಕ ಸಂಘದ ಸಂಯೋಜಕಿಡಾ. ವಿಜಯಲಕ್ಷ್ಮೀಮತ್ತುಎಲ್ಲಾ ವಿಭಾಗಗಳ ಉಪನ್ಯಾಸಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳುನಾಡಗೀತೆ ಮತ್ತು ಪ್ರಸಿದ್ಧ ಕನ್ನಡ ಸಾಹಿತಿಗಳಗೀತೆಗಳಿಗೆ ಧ್ವನಿಯಾಗುವ ಮೂಲಕ ರಾಜ್ಯೋತ್ಸವ ಮತ್ತು ನಾಡಗೀತೆ ನೂರರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top