ಸುರತ್ಕಲ್: ಭಾರತೀಯ ಮೂಲದ ಗ್ರಾಮೀಣ ಸೊಗಡಿನ ಕ್ರೀಡೆಯಾದ ಕಬಡ್ಡಿ ಪ್ರಸ್ತುತ ಜಗತ್ತಿನ ಜನಪ್ರಿಯ ಕ್ರೀಡೆಯಾಗಿ ಬೆಳೆದು ನಿಂತಿದೆ. ದೈಹಿಕ ಸದೃಢತೆಯೊಂದಿಗೆ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವ ಕಬಡ್ಡಿಗೆ ಯುವ ಜನರು ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‍ನ ಕಾರ್ಯದರ್ಶಿ ಶ್ರೀರಂಗ ಹೆಚ್.ನುಡಿದರು. ಅವರು ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್ ಅಯೋಜಿಸಿದ್ದ ಗೋವಿಂದದಾಸ ಕಬಡ್ಡಿ ಲೀಗ ಸೀಸನ್ -2ನ್ನು ಉದ್ಘಾಟಿಸಿ ಮಾತನಾಡಿದರು.
ಗೌರವ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ. ಮಾತನಾಡಿ ಆಕ್ರಮಣವು ವೈಯಕ್ತಿಕ ಪ್ರಯತ್ನವಾಗಿದ್ದರೆ, ರಕ್ಷಣೆಯು ಗುಂಪು ಪ್ರಯತ್ನವಾಗಿರುವ ಏಕೈಕ ಹೋರಾಟದ ಕ್ರೀಡೆಯೆಂದರೆ ಕಬಡ್ಡಿ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಷ್ಟೇ ಆಸಕ್ತಿಯುತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಜ್ಞಾನ ವರ್ಧನೆಯೊಂದಿಗೆ ದೈಹಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದರು.
ಸುರತ್ಕಲ್ ಉತ್ತರ ವಿಧಾನಸಭಾಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಅನೇಕ ಪ್ರತಿಭಾವಂತಕಬಡ್ಡಿಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸತತ ಎರಡನೇ ಬಾರಿಗೆ ಕಾಲೇಜಿನಲ್ಲಿ ಗೋವಿಂದದಾಸ ಕಬಡ್ಡಿ ಲೀಗ್‌ನ್ನುಆಯೋಜಿಸಲಾಗಿದೆ ಎಂದರು.
ಉಪಪ್ರಾಂಶುಪಾಲ ಪ್ರೊ.ನೀಲಪ್ಪ ವಿ.ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಶಾಂತ್‍ಎಂ.ಡಿ. ಉಪಸ್ಥಿತದ್ದರು.
ಸಂತೋಷ್ ಕಾಟಿಪಳ್ಳ ಮತ್ತುಪುನೀತ್ ವೀಕ್ಷಕ ವಿವರಣೆ ನೀಡಿದರು. ಮೋಹನ್‍ಕೆ., ರಕ್ಷಿತ್ ಮತ್ತು ಮಂಜಪ್ಪತೀರ್ಪುಗಾರಾಗಿ ಮತ್ತು ಭವಿಷ್ ಸ್ಕೋರರ್ ಆಗಿ ಸಹಕರಿಸಿದರು.
ದೀಶಾ ಕಾರ್ಯಕ್ರಮ ನಿರ್ವಹಿಸಿದರು.
ಸಮಾರೋಭ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‍ನ ಉಪಾಧ್ಯಕ್ಷ ಬಾಲಕೃಷ್ಣ ಕೆ.ಮುಖ್ಯ ಅತಿಥಿಗಳಾಗಿ ವಿಜೇತರಿಗೆ ಬಹುಮಾನ ವಿತರಿಸಿದರು. ಶಕ್ತಿ ತಂಡವು ಪ್ರಥಮ ಬಹುಮಾನ ಮತ್ತು ರೋರಿಂಗ್ ಲಯನ್ಸ್ ತಂಡವು ರನ್ನರ್ ಆಪ್ ಪ್ರಶಸ್ತಿಯನ್ನು ಪಡೆದರು.
ತ್ರಿಶೂಲ್ ಉತ್ತಮ ರೈಡರ್, ಜ್ಯೂಡ್ ಉತ್ತಮ ರಕ್ಷಕ ಮತ್ತು ಮಹೇಶ ಆಲ್‍ರೌಂಡರ್ ಪ್ರಶಸ್ತಿ ಪಡೆದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




