ಕೆನರಾ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆ

Upayuktha
0


ಮಂಗಳೂರು: ಕೆನರಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ಮಂಗಳೂರಿನ ವಕೀಲ ಹಾಗೂ ನೋಟರಿ ಬಿ ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಧ್ವಜಾರೋಹಣಗೈದು ಮಾತನಾಡಿ, ಅಮ್ಮೆಂಬಳ ಸುಬ್ಬರಾವ್ ಪೈಯವರು ಬಹಳ ದೂರ ದೃಷ್ಟಿಕೋನದಿಂದ ಸಮಾಜದಲ್ಲಿನ ಬದಲಾವಣೆಗೆ ಪ್ರಯತ್ನಿಸಿ ಗೆದ್ದವರು. ಶಿಕ್ಷಣವೆಂಬ ಮರದ ನೆರಳಲ್ಲಿ ಪ್ರತಿದಿನ ಮೆಲುಕು ಹಾಕಬೇಕಾದ ಮಹಾವ್ಯಕ್ತಿತ್ವ ಅಮ್ಮೆಂಬಳರು. ಗೌಡ ಸಾರಸ್ವತ ಸಮುದಾಯ ಮಾತ್ರವಲ್ಲದೆ ಸಮಾಜದ ಬಡವರಿಗಾಗಿ ಅವರು ಮಾಡಿದ ಸಹಾಯ ಸದಾ ಸ್ಮರಿಸತಕ್ಕದ್ದು ಎಂದು ಹೇಳಿದರು.


ಕಾಲೇಜು ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್, ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ ಶೇಟ್, ಕಾರ್ಯಕ್ರಮ ಸಂಯೋಜಿಸಿದ ಕಾಲೇಜಿನ ಮಾನವಿಕ ವಿಭಾಗದ ಉಪನ್ಯಾಸಕರಾದ ವಾಣಿ ಯು ಎಸ್, ಡಾ. ಗಣೇಶ್ ಶೆಟ್ಟಿ, ಸುಜಾತ ಜಿ ನಾಯಕ್, ರಿತಿಕಾ ದಾಸ್, ಶೈಲಜಾ ಪುದುಕೋಳಿ, ಕೀರ್ತನ ಎಂ ಭಟ್, ಚೇತನಾ, ಮನಿಷಾ, ರಕ್ಷಿತಾ, ನಮಿತಾ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top