ಬೆಂಗಳೂರು: ಹೆಸರಾಂತ ಲೇಖಕರು ವಿಮರ್ಶಕರು, ಸಂಶೋಧಕರು ಮತ್ತು ಅಂಕಣಕಾರರು, ಭಾರತೀಯ ವಿಚಾರಧಾರೆಗಳ ಚಿಂತಕರಾದ ಡಾ. ಜಿ.ಬಿ. ಹರೀಶ್ ಅವರು ವಿಷ್ಣುಸಹಸ್ರನಾಮದ ಅರ್ಥ ವಿವರಣೆ ಹಾಗೂ ಸಂವಾದಾತ್ಮಕ ಚಿಂತನೆಯ ಆನ್‌ಲೈನ್ ತರಗತಿಯನ್ನು ನಡೆಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ, ವಿಚಾರಧಾರೆಗಳು, ಪುರಾಣ, ಭಾಷೆ, ಸಾಹಿತ್ಯ ಮುಂತಾದ ವಿಷಯಗಳ ಕುರಿತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಲಭ್ಯವಿರದ ವಿಷಯಗಳು ಈ ತರಗತಿಗಳಲ್ಲಿ ದೊರೆಯಲಿವೆ.
ಅತ್ಯಮೂಲ್ಯ ಜ್ಞಾನದ ಪರಂಪರೆಯನ್ನು ತಿಳಿದುಕೊಳ್ಳಲು ಆಸಕ್ತರಾದವರಿಗೆ ಇದೊಂದು ಅಪೂರ್ವ ಅವಕಾಶವಾಗಿದ್ದು ತರಗತಿಗೆ ಸಣ್ಣದೊಂದು ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ. ವಾರಕ್ಕೆ ಎರಡು ದಿನ ನಡೆಯುವ ಈ ತರಗತಿಗಳ ಬಗ್ಗೆ ಆಸಕ್ತರು ಹೆಚ್ಚಿನ ವಿವರಗಳಿಗಾಗಿ 99806 43704 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಡಾ. ಜಿ. ಬಿ. ಹರೀಶ್ ಅವರು ಸಾಹಿತ್ಯ, ಕಲೆ, ತತ್ವಶಾಸ್ತ್ರ ಮತ್ತು ಐಟಿ ಕ್ಷೇತ್ರಗಳಲ್ಲಿ ಆಸಕ್ತರು. ಕನ್ನಡ ಕಾವ್ಯಗಳು, ಜೈನ ಮತ್ತು ಬೌದ್ಧ ಸಾಹಿತ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ, ಹಾಗೂ ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಮುಖ ಕೃತಿಗಳಲ್ಲಿ 'ಮಹಾಕಾಲ', 'ಬೆಳಕಿನಾಟ' ಮತ್ತು 'ಸೃಷ್ಟಿ' ಸೇರಿವೆ.
ಪ್ರಮುಖ ಕೃತಿಗಳು: 'ಮಹಾಕಾಲ', 'ಬೆಳಕಿನಾಟ', 'ತಂತ್ರಶಾಸ್ತ್ರ', 'ವೇದ ತಂತ್ರ ಸಂಸ್ಕೃತಿ', ಮತ್ತು 'ಸೃಷ್ಟಿ' ಇವರ ಕೆಲವು ಕೃತಿಗಳು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






