ದಾವಣಗೆರೆ: ಮಕ್ಕಳ ದಿನಾಚರಣೆಯ ಸಮಾರಂಭಕ್ಕೆ ಬಾಲಕ, ಬಾಲಕಿಯರನ್ನು ವೇದಿಕೆ ಕಲ್ಪಿಸಿದ್ದು ಸಂತೋಷದ ಸಂಗತಿ. ನಮ್ಮೆಲ್ಲರ ಸಭಾ ಕಂಪನ ದೂರ ಮಾಡುವ ನಮ್ಮ ದಿವ್ಯ ಭವ್ಯ ಜೀವನಕ್ಕೆ ನಾಂದಿ ಹಾಡಿರುವುದು ಕಲಾಕುಂಚ ಸಾಂಸ್ಕøತಿಕ ಸಂಸ್ಥೆ. ಕಳೆದ 35 ವರ್ಷಗಳಿಂದ ಪ್ರತೀ ವರ್ಷ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಮೊದಲೇ ಉಚಿತ ಪೂರ್ವಭಾವಿ ಸಿದ್ಧತಾ ಕಾರ್ಯಾಗಾರದಿಂದ ನಮ್ಮೆಲ್ಲರಿಗೂ ಉತ್ತೇಜನ ಬರುತ್ತದೆ. ಉತ್ತಮ ಫಲಿತಾಂಶ ಬರುತ್ತದೆ. ನಾನು ಮುಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದಲ್ಲಿ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ ಪಡೆಯುತ್ತೇನೆ ಎಂದು ನಗರದ ಸಂತಪೌಲರ ಬಾಲಕೀಯ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅಪೇಕ್ಷ ಕೆ.ಯು. ತನ್ನ ಅನಿಸಿಕೆ ಹಂಚಿಕೊಂಡಳು.
ದಾವಣಗೆರೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದಳು. ಮುಖ್ಯ ಅತಿಥಿಗಳಾಗಿ ಅತ್ತಿಗೆರೆ ಗ್ರಾಮದ ಶ್ರೀ ಕೇಸರಿ ಪಬ್ಲಿಕ್ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ವೈಷ್ಣವಿ ಪ್ರಶಾಂತ್, ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಜಿ.ಎಂ. ಚಂದನ್, ನಗರದ ಅನುಭವ ಮಂಟಪದ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರ ಸಮರ್ಥ ಜಿ.ಈ., ಶಾಮನೂರಿನ ಶ್ರೀದೇವಿ ತಿಮ್ಮಾರೆಡ್ಡಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಮಾನ್ಯ ಸಂದೀಪ್ ಶೆಣೈ ಮಾತನಾಡಿ, ನಮ್ಮ ಮುಂದಿನ ಭವಿಷ್ಯಕ್ಕೆ, ಸಾಧನೆಗಳಿಗೆ ನಿಮ್ಮೆಲ್ಲರ ಹಿರಿಯರ, ಗುರುಗಳ ಆಶೀರ್ವಾದವಿರಲಿ ಸರ್ವರಿಗೂ ಮಕ್ಕಳ ದಿನಾಚರಣೆ ಶಭಾಶಯಗಳು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ನಗರದ ವಿದ್ಯಾಸಾಗರ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ನಿರಾಲಿ ಲೋಹಿತಾಶ್ವ ಮಾತನಾಡಿ, ನಾವೆಲ್ಲ ಚಿಕ್ಕ ವಯಸ್ಸಿನಲ್ಲಿ ಕುಚೇಷ್ಟೆ, ಆಟೋಟ ಸಹಜ ಈ ಹಂತದಲ್ಲಿ ನಾವು ಶಿಕ್ಷಣದ ಕಾಳಜಿಯೊಂದಿಗೆ ಬದ್ಧತೆಯಿಂದ ಗಮನಕೊಟ್ಟು ಉತ್ತಮ ಫಲಿತಾಂಶದೊಂದಿಗೆ ತಂದೆ-ತಾಯಿಗಳ ಕನಸು ನನಸು ಮಾಡಬೇಕಾಗಿದೆ. ಮನೆಯಲ್ಲಿ ತಾಯಿಯ ಜೊತೆಗೆ ಮನೆ ಕೆಲಸಕ್ಕೆ ಕೈ ಜೋಡಿಸಿದರೆ ಜೀವನಕ್ಕೆ ಸಾರ್ಥಕತೆ. ತಂದೆಯ ಉದ್ಯೋಗದ ಜೊತೆಯಲ್ಲಿ ನಾವುಗಳು ಕೆಲಸ ಮಾಡಿದರೆ ನಮಗೆ ಅನುಭವವಾಗುತ್ತದೆ. ತಂದೆ-ತಾಯಿಗಳಿಗೆ ಸಹಾಯ ಮಾಡಿದಂತೆ ಆಗುತ್ತದೆ ಎಂದರು.
ದಾವಣಗೆರೆಯ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯ ನಗರದ ಸಿದ್ದವೀರಪ್ಪ ಬಡಾವಣೆಯ ಶಾಖೆ ಮತ್ತು ಎಂ.ಸಿ.ಸಿ. `ಎ’ ಬ್ಲಾಕ್ ಶಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಈ ಸಮಾರಂಭ ತುಂಬಾ ತುಂಬಾ ಯಶಸ್ವಿ ಆಯಿತು ಎಂದು ಎರಡು ಶಾಖೆಯ ಅಧ್ಯಕ್ಷರುಗಳಾದ ಲಲಿತಾ ಕಲ್ಲೇಶ್, ಪ್ರಭಾ ರವೀಂದ್ರ ತಮ್ಮ ಸಂತೋಷ ವ್ಯಕ್ತಪಡಿಸಿದರು. ಕಲಾಕುಂಚದ ಮುತ್ತೈದೆಯರು ಕಾರ್ತಿಕೋತ್ಸವದೊಂದಿಗೆ ಕನ್ನಡ ತಾಯಿ ಭುವನೇಶ್ವರಿ, ಶ್ರೀ ಗಾಯಿತ್ರಿದೇವಿ, ಶ್ರೀ ಮಹಾಲಸ ನಾರಾಯಣಿ ದೇವರುಗಳಿಗೆ ಆರತಿ ಬೆಳಗಿ ಸಾಮೂಹಿಕ ಭಜನೆಯೊಂದಿಗೆ ಆಚರಿಸಿದರು.
ಮಕ್ಕಳ ಸಮೂಹ ನೃತ್ಯ ಮತ್ತು ಆಟೋಟ ಸ್ಪಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಸ್ವರ್ಗಸ್ಥರಾದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಚಂದ್ರಶೇಖರ ಅಡಿಗರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ನಿರೂಪಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಜ್ಯೋತಿ ಗಣೇಶ್ ಶೆಣೈ ಉಪಸ್ಥಿತರಿದ್ದರು. ಕುಮಾರಿ ಅನುಷ ಕೆ.ಯು. ಸ್ವಾಗತಿಸಿ ಕೊನೆಯಲ್ಲಿ ವಂದಿಸಿದಳು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







