ದಾವಣಗೆರೆ: ಬೆಳಗಾವಿಯ ನಾಗರಮುನ್ನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ವತಿಯಿಂದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅಂತರಾಷ್ಟ್ರೀಯ ಮಟ್ಟದ “ವಿಶ್ವಮಾನ್ಯ ಕನ್ನಡಿಗ” ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಲಾಲಸಾಬ ಹೆಚ್. ಪೆಂಡಾರಿಯವರು ಶೆಣೈಯವರ ನಾಲ್ಕು ದಶಕಗಳ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕøತಿಕ ನಗರಿಯನ್ನಾಗಿ ಪರಿವರ್ತನೆ ಮಾಡಿದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿ, ಶಿಕ್ಷಣ, ಕನ್ನಡ ಭಾಷೆ ನೆಲ-ಜಲ ಕ್ಷೇತ್ರಗಳಲ್ಲಿ ಗಣನೀಯ ಸೇವೆ, ಸಾಧನೆಯ ಜೊತೆಗೆ ಪ್ರಾಥಮಿಕ ಶಾಲೆಗೆ ಸೀಮಿತವಾದ ಶೆಣೈಯವರು ಸಂಸ್ಕೃತಿಯ ಪರಿಜ್ಞಾನಗಳನ್ನು ಬೆಳೆಸಿದ ಶೆಣೈಯವರಿಗೆ ಈ ರಾಷ್ಟ್ರಪ್ರಶಸ್ತಿ ಘೋಷಿಲಾಗಿದೆ ಎಂದು ಕವಿತ್ತಕರ್ಮಮಣಿ ಫೌಂಡೇಶನ್ ಸಮಿತಿಯವರು ವ್ಯಕ್ತಪಡಿಸಿದ್ದಾರೆ.
ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಬಿಚ್ಕತ್ತಿ ಕುಟುಂಬ, ಶ್ರೀ ಗಾಯಿತ್ರಿ ಪರಿವಾರ, ಕರ್ನಾಟಕ ಸಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


