ಭಗವದ್ಗೀತೆಯ ಪರಂಪರೆ ಯಕ್ಷಗಾನದಲ್ಲಿ ಪರಿಪೂರ್ಣ: ಕಿರಣ್ ರವಿ.ಪೈ

Upayuktha
0


ದಾವಣಗೆರೆ: ಕರ್ನಾಟಕದ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಜೊತೆಗೆ ಭಗವದ್ಗೀತೆಯ ಪರಂಪರೆಯು ಯಕ್ಷಗಾನದಲ್ಲಿ ಪರಿಪೂರ್ಣತೆ ಇದೆ ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪೂಜಾ ಸೇವೆಯ ಯಕ್ಷಗಾನ ಕಲೆಗೆ ಅವಮಾನ ಮಾಡಿದ್ದು ಖಂಡನೀಯ. ಈ ಕಲಾಕುಂಚ ಸಂಸ್ಥೆ ನಿರಂತರವಗಿ 35 ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಇತರ ಸಂಘ ಸಂಸ್ಥೆಗಳ ಮಾದರಿ ಕೆಲವು ಸಂಸ್ಥೆಗಳು ಆರಂಭ ಶೂರತ್ವಕ್ಕೆ ಸೀಮಿತವಾಗುತ್ತಿದೆ. ವಾಣಿಜ್ಯ ನಗರಿಯಾದ ದಾವಣಗೆರೆ 4 ದಶಕಗಳಿಂದ ಯಕ್ಷಗಾನ ಗಂಡು ಕಲೆ ಪರಿಚಯಿಸಿದ್ದು ಸಾಲಿಗ್ರಾಮ ಗಣೇಶ್ ಶೆಣೈಯವರ ಸಾಧನೆ ಶ್ಲಾಘನೀಯ ಎಂದು ಸುಮುಖ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಯಕ್ಷಗಾನ ಕಲಾವಿದ ಕಿರಣ್ ರವಿ.ಪೈ ಅನಿಸಿಕೆ ಹಂಚಿಕೊಂಡರು.


ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಕರ್ನಾಟಕ ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಡಾ|| ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ, ನನ್ನ ಜೀವನದಲ್ಲಿ ಮೊಟ್ಟ ಮೊದಲ ವೇದಿಕೆಯನ್ನು ಕಲ್ಪಿಸಿ ನನ್ನ ಸಭಾ ಕಂಪನ ದೂರ ಮಾಡಿದ್ದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಅಪ್ಪಟ ಕನ್ನಡ ಭಾಷೆಯು ನಮ್ಮ ಮನದಾಳದಲ್ಲಿ ಇರಬೇಕು ಕೇವಲ ನವಂಬರ್‍ಗೆ ಸೀಮಿತವಾಗಿದೆ, ಕನ್ನಡ ನಿತ್ಯೋತ್ಸವ ಆಗಬೇಕಾಗಿದೆ.  ಈ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರು ನಿರಂತರವಾಗಿ ಹೊಸ ಹೊಸ ಪರಿಕಲ್ಪನೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯ ಎಂದರು.


ಬೆಂಗಳೂರಿನ ಖ್ಯಾತ ಸಂಗೀತ ಸಾಧಕಿ, ಸಾಹಿತಿ, ಕವಯತ್ರಿ ನವೀನ ರಾಯ್ಕರ್, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಶೈಕ್ಷಣಿಕ ಸಾಧಕಿ ಖ್ಯಾತ ಚಿತ್ರಕಾವಿದೆ ಕುಮಾರಿ ನವ್ಯ ಮನೋಹರ್ ಪೈ ಮಾತನಾಡಿ, ನಮ್ಮ ಮುಂದಿನ ಸಾಧನೆಗಳಿಗೆ ಇಂತಹ ಭವ್ಯ ದಿವ್ಯ ವೇದಿಕೆ ಕಲ್ಪಿಸಿ ನಮ್ಮೆಲ್ಲರನ್ನು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶೆಣೈಯವರು, ಸಂಕುಚಿತ ಭಾವನೆ ಇಲ್ಲದೇ ವಿಶಾಲವಾದ ಸೇವಾ ಮನೋಭಾವನೆಗಳು ನಮಗೆಲ್ಲರಿಗೂ ಮಾರ್ಗದರ್ಶನ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ, ಸಂಘಟನೆ ಅಷ್ಟು ಸುಲಭದ ಮಾತಲ್ಲ, ಸಹನೆ, ತಾಳ್ಮೆ, ಸೇವಾ ಮನೋಭಾವನೆಯೊಂದಿಗೆ ಕಲಾಕುಂಚ ಸ್ವತಂತ್ರ ಸಂಸ್ಥೆಯಾಗಿದೆ. ಯಾವುದೇ ಸಾರ್ವಜನಿಕ ದೇಣಿಗೆ ಇಲ್ಲದೇ ಸರ್ಕಾರದ, ಇಲಾಖೆಗಳ ಅನುದಾನವಿಲ್ಲದೇ ಪ್ರತಿ ವರ್ಷ ಕನ್ನಡ ಮಕ್ಕಳಿಗೆ ಪುರಸ್ಕಾರ ಸಾಧಕರಿಗೆ, ಕಲಾವಿದರಿಗೆ ವಿವಿಧ ಉಚಿತ ಸ್ಪರ್ಧೆಗಳು 35 ವರ್ಷ ನಡೆದು ಬಂದ ದಾರಿಗೆ ಕಾರಣ ಶೆಣೈಯವರದ್ದು ಎಂದರು.


ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಲಲಿತಾ ಕಲ್ಲೇಶ್ ಸ್ವಾಗತಿಸಿದರು. ಸುಮಾರು 241 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವೇದಿಕೆಯ ಪ್ರತ್ಯೇಕ ಸಿಂಹಾಸನದ ಮೇಲೆ ಕೂರಿಸಿ, ಕಲಾಕುಂಚದ ಮುತ್ತೈದೆಯರು ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಸಾಧಕರ ಭಾವಚಿತ್ರವಿರುವ ಸನ್ಮಾನ ಪತ್ರ ಮುದ್ರಿಸಿ, ಪ್ರೇಂ ಮಾಡಿ,  ಕನ್ನಡ ಪೇಟಾದೊಂದಿಗೆ ಹಾರ, ಶಾಲು ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ಚಿನ್ನದ ಲೇಪನದ ಪದಕ ಕೊರಳಿಗೆ ಹಾಕಿ, ಪುಷ್ಪ ವೃಷ್ಟಿಯೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು. ಶೈಲಾ ವಿನೋದ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.  ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥೆಯ ಗೌರವಾಧ್ಯಕ್ಷೆ ವಸಂತಿ ಮಂಜುನಾಥ್, ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕೊನೆಯಲ್ಲಿ ಚಂದ್ರಶೇಖರ ಅಡಿಗ ವಂದಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top