ದೇವಸ್ಥಾನದಲ್ಲಿ ಖಾಸಗಿ ಸಂಘದಿಂದ ದೇಣಿಗೆ ಸಂಗ್ರಹ: ಕಾನೂನು ಕ್ರಮಕ್ಕೆ ಆಗ್ರಹ

Upayuktha
0



ಮಂಗಳೂರು: ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಹೆಸರಲ್ಲಿ ಅನಧಿಕೃತ ನಿಧಿ ಸಂಗ್ರಹಿಸಿ ಸಾರ್ವಜನಿಕ ಚಂಡಿಕಾ ಯಾಗ ನಡೆಸುತ್ತಿರುವುದಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.


ದೇವಸ್ಥಾನದಲ್ಲಿ ನ.23 ರಂದು ದೇವಸ್ಥಾನದಲ್ಲಿ ಶಿವಳ್ಳಿ ಸಭಾ ಎನ್ನುವ ಸಂಘವು “ಸಾರ್ವಜನಿಕ ಚಂಡಿಕಾ ಯಾಗ” ಆಯೋಜಿಸಿದೆ. ತಲಪಾಡಿ ಕ್ಷೇತ್ರದ ವತಿಯಿಂದ ಈಗಾಗಲೇ ಚಾಲ್ತಿಯಲ್ಲಿರುವ  ಸಾಂಪ್ರಾದಾಯಿಕವಾಗಿರುವ  ಈ “ಚಂಡಿಕಾ ಯಾಗ “ಸೇವೆಯನ್ನು ದೇವಸ್ಥಾನದ  ಮತ್ತು ದೇವರ ಕಾರಣೀಕ ಸಾನಿಧ್ಯ ಉಲ್ಲೇಖಿಸಿಕೊಂಡು ಖಾಸಗಿ ಸಂಘ ಒಂದು ಸ್ವ ಲಾಭಕ್ಕೆ ಬಳಸಿಕೊಂಡು ಊರ ಪರವೂರಿನ, ಕ್ಷೇತ್ರದ ಯಾ ಸಾರ್ವಜನಿಕ ಭಕ್ತರಿಂದ ದೇಣಿಗೆಯನ್ನು ಸಂಗ್ರಹಿಸುವ ಪಿತೂರಿ ನಡೆದಿರುವುದು ಮೇಲ್ನೋಟಕ್ಕೆ ಕರಪತ್ರ ಹಾಗೂ ಇತರ ಭಿತ್ತಿ ಪತ್ರದಿಂದ ಕಂಡು ಬಂದಿದೆ.


ಇದಕ್ಕಾಗಿ ಕರಪತ್ರಗಳನ್ನು ಮುದ್ರಿಸಿ ದೇವಸ್ಥಾನದ ಅರ್ಚಕರನ್ನೂ ಮತ್ತು ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಯಾಮಾರಿಸಿ ಕ್ಷೇತ್ರದ ಪರಿಸರದಲ್ಲಿ ಕಟೌಟ್‌ಗಳನ್ನು ಹಾಕಲಾಗಿದೆ. ಹಣ ಸಂಗ್ರಹಣೆಗಾಗಿ "ಶಿವಳ್ಳಿ ಸಭಾ" ಎನ್ನುವ ಹೆಸರಿನಲ್ಲಿ ಬ್ಯಾಂಕಿನ ಕ್ಯೂಆರ್ ಕೋಡ್ ನೀಡಲಾಗಿದೆ. 


ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಖಾಸಗಿಯಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ಇಂತಹ ಸಂಘದ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸುವಂತೆ ರಘುರಾಮ್ ರಾವ್ ಕೆ. ದೂರು ನೀಡಿದ್ದಾರೆ.


ಯಾಗಕ್ಕೆ ದೇಣಿಗೆ ಸಂಗ್ರಹಿಸಿ ಉಳಿಕೆಯ ಲಕ್ಷಾಂತರ ಹಣವನ್ನು ಖಾಸಗಿಯವರು ಸ್ವಂತಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದ್ದು, ಉಳಿಕೆ ಹಣವನ್ನು ದೇವಸ್ಥಾನದ ನಿಧಿಗೆ ಬಳಸಿಕೊಳ್ಳ ಬೇಕು ಎಂದು ಮನವಿ ಮಾಡಿದ್ದಾರೆ.


ತಲಪಾಡಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವವಿಲ್ಲದ ಕಾರಣ ನೇರವಾಗಿ ಆಡಳಿತ ಅಧಿಕಾರಿಗಳ ನೇರ ಸುಪರ್ದಿಯಲ್ಲಿದೆ ಹೀಗಾಗಿ ಆಡಳಿತಾಧಿಕಾರಿಗೂ ದೂರು ಸಲ್ಲಿಸಿದ್ದಾರೆ. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top