ಸಿನಿಮಾ ಸಿರಿಯಿಂದ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆಗೆ ಆಹ್ವಾನ

Chandrashekhara Kulamarva
0


ದಾವಣಗೆರೆ: ದಾವಣಗೆರೆ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ” ಆಶ್ರಯದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು ‘ಸಿನಿಮಾಸಿರಿ’ಯ ಬೆಳ್ಳಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣ ತಿಳಿಸಿದ್ದಾರೆ.


ಯಾವುದೇ ವಯೋಮತಿ ಇಲ್ಲದೇ ಸಾರ್ವಜನಿಕವಾಗಿ ಚಲನಚಿತ್ರಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಎರಡು ಪುಟ ಮೀರದಂತೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆಗಳ ಹೆಸರು ವಿಳಾಸ ವ್ಯಾಟ್ಸಪ್ ಸಂಖ್ಯೆ ಈ ಕೆಳಗಿನ ವಿಳಾಸಕ್ಕೆ 25-11-2025 ರೊಳಗೆ ಅಂಚೆ ಮೂಲಕ ಕಳಿಸಬಹುದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ಸಿನಿಮಾಸಿರಿ’ಯ ಬೆಳ್ಳಿ ಹಬ್ಬದ ವಿಜೃಂಭಣೆಯ ಸಮಾರಂಭದಲ್ಲಿ ಬಹುಮಾನ, ಅಭಿನಂದನಾ ಪತ್ರ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಟಿ.ಮೃತುಂಜಯ  ಪ್ರಕಟಿಸಿದ್ದಾರೆ.


ಪ್ರಬಂಧ ಬರೆದು ಕಳಿಸುವ ವಿಳಾಸ ಆರ್.ಟಿ.ಮೃತುಂಜಯ #2634, “ಮೇಘಶ್ರೀ” 3ನೇ ಮುಖ್ಯ ರಸ್ತೆ, ಎಸ್.ಎಸ್.ಲೇಔಟ್, `ಬಿ’ ಬ್ಲಾಕ್, ದಾವಣಗೆರೆ-577004. ಮೊ.: 9448727502. ಆಂಗ್ಲ ಭಾಷೆಯಲ್ಲಿ ವಿಳಾಸ ಹಾಕಿದರೆ ಸ್ವೀಕರಿಸುವುದಿಲ್ಲ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲ ಪ್ರಬಂಧ ಬರೆದು ಕಳಿಸಬೇಕಾಗಿ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top