ಫಿಶರೀಶ್ ಚಿತ್ರಾಪುರ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Upayuktha
0




ಚಿತ್ರಾಪುರ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯಲ್ಲಿ ಮಕ್ಕಳ ದಿನಾಚರಣೆಯಂದು ಸರಕಾರದ ಆದೇಶದಂತೆ ಪೋಷಕರು ಮತ್ತು ಶಿಕ್ಷಕರ ಮಹಾಸಭೆ ನಡೆಯಿತು.


ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದು ಕೈಗಾರಿಕೆ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳ ಸಹಕಾರದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಗಳ ತರಗತಿಗಳು ಆರಂಭ ವಾಗಿದ್ದು ಇದರ ಸದುಪಯೋಗ ಪಡಿಸಿ ಕೊಳ್ಳುವ ಅಗತ್ಯ ವಿದೆ ಎಂದರು.


ಹಳೆ ವಿದ್ಯಾರ್ಥಿ ಸಂಘದ ದೇವದಾಸ ಕುಳಾಯಿ ಮಾತನಾಡಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದರು. ತೇಜಪಾಲ್ ಪುತ್ರನ್ ಶುಭ ಹಾರೈಸಿದರು.


ತಜ್ಞ ಮಾಹಿತಿ ಉಪನ್ಯಾಸದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಆಯೋಜಿಸುತ್ತಿರುವ ಮಕ್ಕಳ ಆರೋಗ್ಯಕ್ಕಾಗಿ ವ್ಯಸ್ಥ ಜೀವನ- ಸ್ವಸ್ಥ ಭೋಜನ ಯೋಜನೆಯಡಿ ಸುಜಯ ಶೆಟ್ಟಿ ಮಕ್ಕಳಿಗೆ ನೀಡಬೇಕಾದ ಅರೋಗ್ಯಕರ ಆಹಾರಗಳ ಬಗ್ಗೆ ತಿಳಿಸಿದರು.


ಮುಖ್ಯ ಶಿಕ್ಷಕಿ ಶೋಭಾ ಸರಕಾರದ ವಿವಿಧ ಯೋಜನೆಗಳನ್ನು ತಿಳಿಸಿದರು. ಸುರಕ್ಷಾ ಕಾಯ್ದೆಗಳ ಕುರಿತು ಮಾಹಿತಿ ಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಸರಕಾರದಿಂದ ಕೊಡ ಮಾಡುವ ಪಾದರಕ್ಷೆಗಳನ್ನು ವಿತರಣೆ ಮಾಡಲಾಯಿತು.


ಶಿಕ್ಷಕಿಯರಾದ ಸುಕೇಶಿನಿ, ಸಿಂತಿಯ, ನೀತಾ ತಂತ್ರಿ,ರೂಪ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂವಿಧಾನ ಪೀಠಿಕೆಯನ್ನು ಆರಂಭದಲ್ಲಿ ವಾಚನ ಮಾಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top