ಪುತ್ತೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಸಿ ಎ ಇಂಟರ್ಮೇಡಿಯೇಟ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2023-2024 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಹೇಂದ್ರ ಗೋಪಾಲ್ ವಿಭಾಸ್ . ಕೆ ಉತ್ತೀರ್ಣರಾಗಿದ್ದಾರೆ.
ಇವರು ಪುತ್ತೂರಿನ ಪರ್ಲಡ್ಕದ ಪ್ರಸಾದ್ ಕೆ.ವಿ.ಎಲ್.ಎನ್ ಮತ್ತು ಅನುಪಮಾ ಎಸ್ ದಂಪತಿ ಪುತ್ರ. ಅದೇ ರೀತಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಪರ್ಣ ಅಡಿಗ ಎ. (ಕಾಸರಗೋಡು ಜಿಲ್ಲೆಯ ಪೆರ್ಲದ ಗೋಪಾಲಕೃಷ್ಣ ಅಡಿಗ ಹಾಗೂ ಆಶಾ ಅಡಿಗ ದಂಪತಿಗಳ ಪುತ್ರಿ), ಅನುಶ್ರೀ (ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪಿ. ಸತೀಶ್ ಮರಡಿತ್ತಾಯ ಹಾಗೂ ದೀಪಾ ದಂಪತಿಗಳ ಪುತ್ರಿ), ಹಾಗೂ 2023-2024 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಸಂಸ್ಕøತಿ ಜೈನ್(ಪುತ್ತೂರು, ಬನ್ನೂರಿನ ಜಯಕುಮಾರ್ ಜೈನ್ ಮತ್ತು ಕೆ ವಿದ್ಯಾವತಿ ದಂಪತಿ ಪುತ್ರಿ), ಕವನ ಜಿ ಎನ್ (ಸೋಮವಾರಪೇಟೆಯ ನವೀನ ಜಿ ಇ ಮತ್ತು ಸುವರ್ಣ ಜಿ ಎನ್ ದಂಪತಿ ಪುತ್ರಿ), ಸಂಜನಾ ಭಟ್ (ಬಿ.ಸಿ ರೋಡಿನ ಬಿ ಶ್ರೀಕಾಂತ್ ಭಟ್ ಮತ್ತು ಶಾಂತಿ ಭಟ್ ದಂಪತಿ ಪುತ್ರಿ) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇವರನ್ನು ಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




