
ಸ್ನೇಹಿತರು ಕೇವಲ ಸ್ನೇಹಿತರಾಗಿ ಇರುವುದಿಲ್ಲ. ಒಡಹುಟ್ಟಿದವರಿಗಿಂತ ಹೆಚ್ಚಿನ ಬಾಂಧವ್ಯವನ್ನು ಹೊಂದಿರುತ್ತಾರೆ. ನನ್ನ ಗೆಳತಿಯರಾದ ಸ್ವಾತಿ, ಅಂಕಿತಾ ಬಹಳ ಅನ್ಯೋನ್ಯತೆಯಿಂದ ಇದ್ದೇವೆ. ಗೆಳತಿ ಎಂಬುದಕ್ಕೆ ಇವರೇ ಸಾಕ್ಷಿಗಳು.
ಸ್ನೇಹಿತರು ಒಬ್ಬರನ್ನೊಬ್ಬರು ಉತ್ತಮ ವ್ಯಕ್ತಿಗಳಾಗಲು ಸಹಾಯ ಮಾಡುತ್ತಾರೆ. ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು, ಅಷ್ಟೇ ಅಲ್ಲ ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ. ಶಾಲಾ ದಿನಗಳಿಂದ ಕೊನೆಯವರೆಗೂ ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ಸ್ನೇಹಿತೆಯೊಂದಿಗೆ ಹಂಚಿಕೊಳ್ಳಲು ಮಾತ್ರ ಸಾಧ್ಯ.
ಸ್ನೇಹ ಎಂಬುದು ಯಾವುದೇ ಸ್ವಾರ್ಥವನ್ನು ಹೊಂದಿರದ ಸಂಬಂಧವಾಗಿದೆ. ನಾವು ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ..... ನಾವು ನಂಬಿಕೆ ಇದ್ದು ಮಾಡುವುದೇ ನಿಜವಾದ ಸ್ನೇಹ.
ಸ್ನೇಹ ಮಾಡುವಾಗ ವ್ಯಕ್ತಿಯನ್ನು ನೋಡಿ ಮಾಡುವುದಲ್ಲ, ವ್ಯಕ್ತಿತ್ವವನ್ನು ನೋಡಿ ಮಾಡಬೇಕು. ಸ್ನೇಹಿತರು ಒಂಟಿತನವನ್ನು ಮೀರಿಸುವ ಶಕ್ತಿಯನ್ನು ಹೊಂದಿದ್ದಾರೆ. ಆತ್ಮವಿಶ್ವಾಸವು ಒಬ್ಬರನ್ನೊಬ್ಬರು ಉತ್ತಮ ವ್ಯಕ್ತಿಗಳಾಗಲು ಸಹಾಯ ಮಾಡುತ್ತದೆ. ಸ್ನೇಹಕ್ಕಾಗಿ ಪ್ರಾಣ ಕೊಡೋದು ಕಷ್ಟವಲ್ಲ, ಪ್ರಾಣ ಕೊಡುವಂತ ಸ್ನೇಹ ಸಿಗೋದು ಬಹಳ ಕಷ್ಟ.
ಕನಿಕರ ಇಲ್ಲದ ನೂರು ಜನ ಸ್ನೇಹಿತೆಯರಿಗಿಂತ, ಕರುಣೆ ಇರುವ ಒಬ್ಬಳು ಸ್ನೇಹಿತೆ ಇದ್ದರೆ ಸಾಕು ಜೀವನ ಬಹಳ ಸುಂದರವಾಗಿರುತ್ತದೆ. ಸ್ನೇಹ ಎಂದರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರವಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ. ನಮ್ಮ ಸ್ನೇಹ ಎಂದೆಂದಿಗೂ ಇರಲಿ ಶಾಶ್ವತ.
- ಶಿವಾನಿ ಕೊಡಂಗಾಯಿ
ಬಿ.ಎ ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


