ಮಂಗಳೂರು: ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಬೆಸೆಂಟ್ splash 2025 ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ಉತ್ಸವ ಉದ್ಘಾಟನಾ ಸಮಾರಂಭ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರ ಸಾಹಿತಿ ಕೀರ್ತನ್ ಭಂಡಾರಿಯವರು ಉಪಸ್ಥಿತರಿದ್ದು ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ– ಶಾಲೆಗಳಲ್ಲಿ ಸಿಗುವ ವೇದಿಕೆ ಸಣ್ಣದಾಗಿದ್ದರೂ ಬದುಕಿನ ಸಂದರ್ಭದಲ್ಲಿ ಅದು ಬಹುದೊಡ್ಡ ವೇದಿಕೆ ಆಗುತ್ತದೆ. ಕಲಾವಿದರ ಕನಸುಗಳು ಶಾಲಾ ವೇದಿಕೆಗಳಿಂದಲೇ ಮೂಡುತ್ತದೆ. ಸಿಕ್ಕಿದ ವೇದಿಕೆಗಳನ್ನು ಚೆನ್ನಾಗಿ ಬಳಸಿಕೊಂಡು ವಿದ್ಯಾರ್ಥಿಗಳಾಗಿರುವಾಗಲೇ ನಮ್ಮ ಕನಸುಗಳನ್ನು ರೂಪಿಸಿಕೊಳ್ಳಬೇಕಾದದು ವಿದ್ಯಾರ್ಥಿಗಳ ಜವಾಬ್ದಾರಿ- ಎಂದು ನುಡಿದರು.
ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಂಚಾಲಕ ಸತೀಶ್ ಭಟ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿವೆ. ಅದನ್ನು ಪ್ರದರ್ಶಿಸುವ ಮೂಲಕ ಬೆಳಕಿಗೆ ತರಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ. ಅದಕ್ಕೆ ಬೇಕಾದ ವೇದಿಕೆಗಳು ಇಂತಹ ಸ್ಪರ್ಧಾ ಉತ್ಸವಗಳಿಂದ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಫಿಲಂ ಎಡಿಟರ್ ನಿತಿನ್ ಶೆಟ್ಟಿ, ಫಿಲಂ ಕೊರಿಯೋಗ್ರಾಫರ್ ವಿನಾಯಕ ಆಚಾರ್ಯ, ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಬೆಸೆಂಟ್ ಕನ್ನಡ ಮಾಧ್ಯಮ ಶಾಲೆ ಮತ್ತು ಹೈಸ್ಕೂಲ್ ಸಂಚಾಲಕರಾದ ಗಣೇಶ್ ಪೈ, ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಯಕ್ ರೂಪಸಿಂಗ್ ಉಪಸ್ಥಿತರಿದ್ದರು. ಸ್ಪರ್ಧೆಗಳ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ಶೈಲಶ್ರೀ ಸಿ. ಮೇಲ್ಮಾರಿ ಮತ್ತು ಸಹ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ರಾಜಿ ಮೋಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೀರ್ತನ್ ಭಂಡಾರಿ, ನಿತಿನ್ ಶೆಟ್ಟಿ, ವಿನಾಯಕ ಆಚಾರ್ಯ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕ್ಯಾನ್ವಾಸ್ ಪೇಂಟಿಂಗ್, ಫಿಲ್ಮಿ ಡಾನ್ಸ್, ಕುಣಿತ ಭಜನೆ, ವಿಜ್ಞಾನದ ಮಾದರಿಗಳು, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಫ್ಯೂಶನ್ ಮ್ಯೂಸಿಕ್, ಭಾಷಣ, ಪೋಸ್ಟರ್ ತಯಾರಿಕೆ ಮುಂತಾದ ಹಲವು ಸ್ಪರ್ಧೆಗಳು ನಡೆದವು. ಅನೇಕ ಶಾಲೆಗಳ ವಿದ್ಯಾರ್ಥಿಗಳು ಇವುಗಳಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕು. ಅಂಕಿತ ಮತ್ತು ಕು. ತ್ರಿಯಾ ನಿರೂಪಿಸಿದರು. ವಿದ್ಯಾರ್ಥಿನಿ ಕು.ರಿದಾ ಧನ್ಯವಾದಗಳು ಸಮರ್ಪಣೆಗೈದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




