ಬೆಂಗಳೂರು: ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿಯ ಸೇವಾ ಸದನದಲ್ಲಿ ಭರತನಾಟ್ಯ 21 ವಿದ್ಯಾರ್ಥಿಗಳ ನೃತ್ಯಾರೋಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಘಟಂ ವಾದಕರಾದ ವಿದ್ವಾನ್ ದಯಾನಂದ ಮೋಹಿತೆ ಹಾಗೂ ಕಲಾವಿದರು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನೃತ್ಯಾರೋಹಣದ ಮೊದಲನೇ ಹಂತವಾದ ರಂಗಪ್ರವೇಶಕ್ಕೆ ಸಿದ್ಧರಾದ 21 ವಿದ್ಯಾರ್ಥಿಗಳು (ಕು. ಕೃತಿಲಯ, ಚಿನ್ಮಯಿ, ಮೋನಿಷಾ, ದಿಯಾ, ತಿಲಕ, ಸುಧೀಕ್ಷಾ, ರಚಿತಾ, ಲಿತಿಶ, ಲಿಶಿತ, ಹೀರ, ನಿಧಿ, ಸಿಂಚನ, ವರ್ಷಿಣಿ, ಪೂರ್ವಿಕ, ಹೇಮಾ ಹೆಚ್ ಗೌಡ, ದೀಪಿಕಾ, ಪೂಜಿತ, ಕೀರ್ತನ, ಹಂಸಪ್ರಿಯ, ಕೃತಿಕಾ ಹಾಗೂ ಶ್ರೀಮತಿ ಮಂಜುಳ) ಪ್ರಮಾಣ ಮಾಡಿ ತಮ್ಮ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೃತ್ಯ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ದಯಾನಂದ ಮೋಹಿತೆ ರವರನ್ನು ಸನ್ಮಾನಿಸಲಾಯಿತು.
ಹಿಮ್ಮೇಳದಲ್ಲಿ ಸಹಕರಿಸಿದ ಕಲಾವಿದರು: ಶ್ರೀಮತಿ ರಾಧಿಕಾ ಪೊದುವಾಳ್ (ಗಾಯನ), ಸೋನಿಯಾ ಪೊದುವಾಳ್ (ನಟುವಾಂಗ), ಎಸ್.ವಿ. ಗಿರಿಧರ್ (ಮೃದಂಗ), ನರಸಿಂಹಮೂರ್ತಿ (ಕೊಳಲು), ಮಿಥುನ್ ಶಕ್ತಿ (ವಿಶೇಷ ವಾದ್ಯ), ಅಚ್ಯುತ್ (ವೀಣಾ) ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







