ಇಂದು ಹಂಸ ಸಾಂಸ್ಕೃತಿಕ -ಸಾಮಾಜಿಕ ಸಿಂಚನ

Upayuktha
0

70ನೇ ಕನ್ನಡ ನಾಡ ಹಬ್ಬ-ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ 



ಬೆಂಗಳೂರು: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಹಂತ ಜ್ಯೋತಿ ಟ್ರಸ್ಟ್ 70ನೇ ಕನ್ನಡ ನಾಡ ಹಬ್ಬದ ಪ್ರಯುಕ್ತ ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲು ಬನ್ನು ಮತ್ತು ಸಿಹಿ ವಿತರಣೆ ಕಾರ್ಯಕ್ರಮವನ್ನು ನವಂಬರ್ 20 ಗುರುವಾರ ಬೆಳಗ್ಗೆ ಒಂಬತ್ತು ಗಂಟೆಗೆ ಆಯೋಜಿಸಿದೆ.


ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿರ್ದೇಶಕ ಡಾ. ಟಿ ನವೀನ್ ಸಮಾರಂಭ ಉದ್ಘಾಟಿಸಲಿದ್ದು ಹಿರಿಯರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಮತ್ತು ನೃತ್ಯಪಟು ಡಾ. ಶ್ರೀಧರ್, ಲವ್ಲಿ ಸ್ಟಾರ್ ಪ್ರೇಮ್, ವಿದ್ಯಾರ್ಥಿ ಭವನದ ಮಾಲೀಕ ರಾಮಕೃಷ್ಣ ಅಡಿಗ, ಮಾಜಿ ಶಾಸಕ ಎಸ್ ಬಾಲರಾಜ್, ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಲ್ ನರಸಿಂಹಮೂರ್ತಿ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕ ಕೆ ಬಾಲಾಜಿ ಬಾಬು, ವಾಣಿಜ್ಯೋದ್ಯಮಿ ಎಸ್ ಟಿ ಉದಯಕುಮಾರ್, ಸಮಾಜಸೇವಕ ಎಂ ಜಯಕುಮಾರ್, ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷ ಎನ್ ಜಗದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಕೆ ಮತ್ತು ಆರ್ ಗೀತಾ, ಚಲನಚಿತ್ರ ನಿರ್ಮಾಪಕಿ ಡಾ.ಸುಕನ್ಯಾ ಹಿರೇಮಠ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ನಿರ್ವಾಹಕಿ ಶ್ರೀ ಲಕ್ಷ್ಮಿ ಪ್ರಸಾದ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.


ಗಾಯಕರಾದ ಸ್ವಪ್ನ,ಮಂಜುನಾಥ್, ಐಶ್ವರ್ಯ, ರವಿ ಇಗ್ಗಲೂರು,ಸದಾನಂದ ಜಿ ಕುರುಡಿಕೆರೆ,ಎಸ್ ಶ್ರೀನಿವಾಸಮೂರ್ತಿ ಕನ್ನಡ ಗೀತೆಗಳ ಗಾಯನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಆಯೋಜಕರಾದ ಹಂಸ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಎಂ ಮುರುಳಿಧರ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ, ವಿಜಯ ಮುರುಳಿಧರ ತಿಳಿಸಿದ್ದಾರೆ. ವಿವರಗಳಿಗೆ +91 94480 93409



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top