ನ.16ರಂದು 'ಗಂಗಾ ಲಹರಿ' ವಾಚನ - ವ್ಯಾಖ್ಯಾನ

Upayuktha
0


ಬೆಂಗಳೂರು: ಬೆಂಗಳೂರು ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಶ್ರೀ ಜಗನ್ನಾಥ ಪಂಡಿತರು ಸಂಸ್ಕೃತದಲ್ಲಿ ಮೂಲ ರಚನೆ ಮಾಡಿರುವ ಕೀರ್ತಿಶೇಷ ಪಂಡಿತ ಶ್ರೀ ಪಂಡರಿನಾಥಾಚಾರ್ಯ ಗಲಗಲಿ (ರಾಷ್ಟ್ರಪತಿ ಪುರಸ್ಕೃತರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರು)ರವರು ಕನ್ನಡಕ್ಕೆ ಅನುವಾದಿಸಿರುವ ರಾಗ ತಾಳ ಭಾವದ ಕಾವ್ಯ 'ಗಂಗಾಲಹರಿಯ' ಆಯ್ದ ಪದ್ಯಗಳ ವಾಚನ -ವ್ಯಾಖ್ಯಾನವನ್ನು ರಾಜಾಜಿನಗರ ಒಂದನೇ ಕೆ ಬ್ಲಾಕ್, ಬಾಲಮೋಹನ್ ವಿದ್ಯಾ ಮಂದಿರ ಸಭಾಂಗಣದಲ್ಲಿ ಭಾನುವಾರ ನವಂಬರ್ 16ರಂದು ಬೆಳಗ್ಗೆ 10.00 ರಿಂದ 12:30 ರವರೆಗೆ ಆಯೋಜಿಸಲಾಗಿದೆ .


ಪಂಡಿತ ಪೂಜ್ಯ ಗಲಗಲಿ ಆಚಾರ್ಯರ ನೇರ ಶಿಷ್ಯರಾದ ಖ್ಯಾತ ವಾಗ್ಮಿ ಡಾ. ವೆಂಕಟನರಸಿಂಹಾಚಾರ್ಯ ಜೋಷಿ ,ಗುಡೇ ಬಲ್ಲೂರರವರು ವಾಚನ- ವ್ಯಾಖ್ಯಾನವನ್ನು ನಡೆಸಿಕೊಡುತ್ತಾರೆ . ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ಪುಷ್ಪಾ ಮುದಕವಿ ಮತ್ತು ಮೋಹನ ಮುದಕವಿ ಪ್ರಾಯೋಜಿಸಲಿದ್ದಾರೆ ಎಂದು ಆಯೋಜಕರಾದ ಉ.ರಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಸ್ .ಬಿ ರಾಜೇಶ್ ಮತ್ತು ಕಾರ್ಯದರ್ಶಿ ಭಾನುಪ್ರಕಾಶ್ ಹೆಚ್ ಪಿ ತಿಳಿಸಿದ್ದಾರೆ .



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top