ಜಿಲ್ಲಾ ಮಟ್ಟದಿಂದ ಶ್ರೀ ನಂದ ವಸತಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Upayuktha
0


ಬಳ್ಳಾರಿ: ನವೆಂಬರ್‌ 10-11ರಂದು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕ/ಮಟ್ಟದ ಮತ್ತು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಬಳ್ಳಾರಿಯ ಪ್ರತಿಷ್ಠಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ 1. ಸತ್ಯಸಾಯಿವರ್ಮ 7ನೇ ತರಗತಿ 400 ಮತ್ತು 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ, 2. ಕಾವ್ಯಶ್ರೀ ಕೆ 7ನೇ ತರಗತಿ 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ. ಪ್ರೌಢ ವಿಭಾಗದಲ್ಲಿ 1. ಬಿ. ಎಸ್. ಪ್ರದೀಪ್ 9ನೇ ತರಗತಿ 1500 ಮತ್ತು 800 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಮತ್ತು ಉದ್ದಜಿಗಿತದಲ್ಲಿ ದ್ವಿತೀಯಸ್ಥಾನ, 2. ಕಾವ್ಯಶ್ರೀ ಕೆ 9ನೇ ತರಗತಿ 400 ಮೀಟ‌ರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಮತ್ತು ಎತ್ತರಜಿಗಿತದಲ್ಲಿ ಪ್ರಥಮಸ್ಥಾನ 3. ಸುಶಾಂತ 9ನೇ ತರಗತಿ ಎತ್ತರಜಿಗಿತದಲ್ಲಿ ಪ್ರಥಮಸ್ಥಾನ 4. ಕಾವ್ಯಶ್ರೀ ಕೆ, ಶ್ರೀನಿಧಿ, ತನುಶ್ರೀ, ದಿವ್ಯಾ 9ನೇ ತರಗತಿ ರಿಲೇ ಆಟದಲ್ಲಿ ದ್ವಿತೀಯಸ್ಥಾನ ಪಡೆದುಕೊಂಡಿರುತ್ತಾರೆ.


ಜಿಲ್ಲಾ ಮಟ್ಟದಲ್ಲಿ:-1. ಸತ್ಯಸಾಯಿವರ್ಮ 7ನೇ ತರಗತಿ 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ,  2. ಬಿ. ಎಸ್. ಪ್ರದೀಪ್ 9ನೇ ತರಗತಿ ಉದ್ದಜಿಗಿತದಲ್ಲಿ ಪ್ರಥಮಸ್ಥಾನ,  3. ಕಾವ್ಯಶ್ರೀ ಕೆ 9ನೇ ತರಗತಿ 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯ ಸ್ಥಾನ,  4. ರಾಮೋಜಿ 9ನೇ ತರಗತಿ ಚೆಸ್‌ ಆಟದಲ್ಲಿ ಪ್ರಥಮ ಸ್ಥಾನ - ಈ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರನ್ನು ಕುರಿತು ಶ್ರೀ ನಂದ ವಸತಿ ಶಾಲೆ ಹಾಗು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ವಿ ಗಾಂಧಿ ರವರು ಮಾತನಾಡಿ ಆಟಆಡುವದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯ ಸದೃಢನಾಗುತ್ತಾನೆ. ಆರೋಗ್ಯದ ಜೊತೆಗೆ ಜೀವನದಲ್ಲಿ ಯಾವಾಗಲು ಸ್ಪೂರ್ತಿದಾಯಕ ವ್ಯಕ್ತಿಗಳಾಗಿ ಬೆಳೆಯಲು ಕಾರಣವಾಗುತ್ತಾರೆ. ಅದ್ದರಿಂದ ಓದುವುದರ ಜೊತೆಗೆ ಆಟವಾಡುವುದನ್ನು ಅಭ್ಯಾಸಮಾಡಿಕೊಳ್ಳಿ ಎಂದರು. 


ದೈಹಿಕ ಶಿಕ್ಷಕ ಎಂ. ಖಾದರಭಾಷರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವಿ ರಮಣ್ ಕುಮಾರ್,  ವಿ ಮುರಳಿಕೃಷ್ಣ, ಕಿಶೋರ್ ಕುಮಾರ ಅಂಗಡಿ, ಹೆಚ್.ಜೆ ಸರಿತ, ಕೆ.ಲಕ್ಷ್ಮಿಕಾಂತ್,  ವಿನಯ್‌ ಕುಮಾ‌ರ್ ಚೌದರಿ, ಶ್ರೀಮತಿ ರಾಜೇಶ್ವರಿ ಶಾಲೆಯ ಸಿಬ್ಬಂದಿವರ್ಗದವರು ಮತ್ತು ಶಾಲಾ ಮಕ್ಕಳು ಅವರಿಗೆ ಶುಭಕೋರಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top