ಅಂಬಿಕಾ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಅಖಿಲ ಭಾರತ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ.
ಚಿಕ್ಕಪುತ್ತೂರಿನ ನಿವಾಸಿಗಳಾದ ಸತ್ಯನಾರಾಯಣ ಮತ್ತು ಲತಾ ಕೆ ದಂಪತಿ ಪುತ್ರ, ಏಳನೆಯ ತರಗತಿಯ ಪ್ರತ್ಯುಷ್ ಎಲ್.ಎಸ್. ಗೌಡ ಇವರು 50ಮೀ ಬಟರ್ ಫ್ಲೈನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಪರ್ಲಡ್ಕದ ನಿವಾಸಿಗಳಾದ ಲೋಕನಾಥ ಶೆಟ್ಟಿ ಮತ್ತು ದಿಶಾ ಮಣಿ ಬಿ ದಂಪತಿಯ ಪುತ್ರ ಹತ್ತನೇ ತರಗತಿಯ ಸಮೃದ್ಧ್ ಎಲ್. ಶೆಟ್ಟಿ 200ಮೀ ಬ್ಯಾಕ್ ಸ್ಟ್ರೋಕ್, 200ಮೀ ಫ್ರೀ ಸ್ಟೈಲ್ ಮತ್ತು 100ಮೀ ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಪುತ್ತೂರು ಹಾರಾಡಿಯ ನಿವಾಸಿಗಳಾದ ಮಧುಸೂಧನ್ ಸಾಲೆ ಮತ್ತು ವಿನುತಾ ಎಂ ಸಾಲೆ ದಂಪತಿ ಪುತ್ರ, ಒಂಬತ್ತನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ ಇವರು ಇವರು 800ಮೀ ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂರೂ ಮಂದಿ ವಿದ್ಯಾರ್ಥಿಗಳು ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ (ಎಸ್‍ಜಿಎಫ್‍ಐ) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪುತ್ತೂರು ಉಲಾರ್ಂಡಿ ನಿವಾಸಿಗಳಾದ ಮಹೇಶ್ ಶೆಟ್ಟಿ ಮತ್ತು ಸುಕನ್ಯ ಕೆ ಶೆಟ್ಟಿ ದಂಪತಿ ಪುತ್ರ, ಏಳನೇ ತರಗತಿಯ ದೀಪಾಂಶ್ ಶೆಟ್ಟಿ ಇವರು 100ಮೀ ಬ್ಯಾಕ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




