ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಂದೇ ಮಾತರಂ ಗೀತೆಯ ಗಾಯನ ಸ್ಪರ್ಧೆಯನ್ನು ನ.29ರಂದು ಹಮ್ಮಿಕೊಳ್ಳಲಾಗಿದೆ. ಕವಿ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಈ ಸ್ಪರ್ಧೆಯನ್ನು ಆಯೋಜನೆಗೊಳಿಸಲಾಗಿದೆ. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬೆಳಗ್ಗೆ 10ರಿಂದ ಸ್ಪರ್ಧೆ ಆರಂಭಗೊಳ್ಳಲಿದೆ.
ಸ್ಪರ್ಧೆಯು ವೈಯಕ್ತಿಕ ಹಾಗೂ ಗುಂಪು ವಿಭಾಗಗಳೆರಡರಲ್ಲಿಯೂ ಪ್ರತ್ಯೇಕವಾಗಿ ನಡೆಯಲಿದ್ದು, ಗುಂಪಿನಲ್ಲಿ ಗರಿಷ್ಟ ಐದು ಮಂದಿ ಭಾಗವಹಿಸಬಹುದಾಗಿದೆ. ಒಂದು ಸಂಸ್ಥೆಯಿಂದ ಗುಂಪು ವಿಭಾಗದಲ್ಲಿ ಒಂದು ತಂಡ ಹಾಗೂ ವೈಯಕ್ತಿಕ ವಿಭಾಗದಲ್ಲಿ ಆಸಕ್ತ ಎಲ್ಲರೂ ಭಾಗವಹಿಸಬಹುದಾಗಿದೆ. ವಂದೇ ಮಾತರಂ ಗೀತೆಯ ಪೂರ್ಣಪಾಠವನ್ನು ಪ್ರಸ್ತುತಪಡಿಸುವುದು ಕಡ್ಡಾಯವಾಗಿದ್ದು, ಹಿನ್ನೆಲೆ ಸಂಗೀತಕ್ಕೆ ಅವಕಾಶ ಇರುವುದಿಲ್ಲ. ವಿಜೇತರಿಗೆ ಪ್ರಮಾಣಪತ್ರದೊಂದಿಗೆ ಪ್ರಥಮ ಮೂರು ಸಾವಿರ, ದ್ವಿತೀಯ ಎರಡು ಸಾವಿರ ಹಾಗೂ ತೃತೀಯ ಒಂದು ಸಾವಿರ ರೂಪಾಯಿಗಳ ಬಹುಮಾನ ದೊರೆಯಲಿದೆ. ಆಸಕ್ತರು 9741481600 ಅಥವ 8762892488 ಸಂಖ್ಯೆಗೆ ಕರೆಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




