ಕೃಷಿ ಕೆಲಸಗಳೂ "ವರ್ಕ್ ಫ್ರೆಮ್ ಹೋಮ್" ಆಗಬಹುದು!

Upayuktha
0


ಜಿಕೆವಿಕೆ ಕೃಷಿ ಮೇಳದ ಸುದ್ದಿಯ ಪ್ರಾರಂಭದಲ್ಲಿ ಗಮನ ಸೆಳೆಯುವ ಒಂದು ವಿಚಾರ ಇದೆ!!


ಕೆಲವರಿಗೆ ತಮಾಷೆ ಅನಿಸಬಹುದು! ಕೆಲವರಿಗೆ ವಿಚಿತ್ರ ಅನಿಸಬಹುದು! ಕೆಲವರಿಗೆ ಸ್ವಾದಿಷ್ಟ ಅನ್ನಿಸಬಹುದು!?  ಲೋಕೋ ಭಿನ್ನರುಚಿಃ !


ಎಲ್ಲೋ ದೂರದ ದೇಶದಲ್ಲಿ ಜಿರಳೆ ಉಪ್ಪಿನಕಾಯಿ ನಂಜಿಕೊಳ್ಳುವ ಪದ್ದತಿ ಇದೆಯಂತೆ ಎಂದು ಕೇಳಿದ್ದೆವು.  


ತುಂಬು ಸಂಸಾರ ಇರುವ ದೊಡ್ಡ ಮನೆಯಲ್ಲಿ ಜಿರಳೆ ಕಾಟ ಹೆಚ್ಚಿದ್ದರೆ, ಚೀನಾದ ಒಂದು ಹುಡುಗಿಯನ್ನು ಸೊಸೆ ಮಾಡಿಕೊಂಡರೆ ಜಿರಳೆ ಸಮಸ್ಯೆಗೆ ಒಂದು ಶಾಶ್ವತವಾದ ಪರಿಹಾರ ಸಿಗುತ್ತೆ ಅಂತ ತಮಾಷೆ ಮಾಡಲಾಗುತ್ತಿತ್ತು! 


ತುಂಬ ಜಿರಳೆ ಇರುವ ಮನೆಯಲ್ಲಿ ಕೆಸುವಿನ ಸೊಪ್ಪಿನ ಹುಳಿ ಬಡಿಸಿದಾಗ, ಅದರಲ್ಲಿರುವ ಒಗ್ಗರಣೆ ಒಣ ಮೆಣಸಿನ ಚೂರೂ ಒಮ್ಮೊಮ್ಮೆ ಅನುಮಾನ ಹುಟ್ಟಿಸುತ್ತಿತ್ತು!


ಈಗ ಶುದ್ಧ ಸಸ್ಯಾಹಾರಿಗಳು ಬೆಂಗಳೂರಿನಲ್ಲಿ ಪಕೋಡ ತಿನ್ನುವಾಗ ಯೋಚಿಸಬೇಕಾಗಿದೆ! ಪಕೋಡದಲ್ಲಿ ಕಡ್ಡಿ ತರಹ ಕಾಣಿಸುತ್ತಿರುವುದು ಈರುಳ್ಳಿದೇ ಚೂರು ಹೌದಾ ಅಂತ!?


ಇನ್ನು ತರಹೇವಾರಿ ಅಡಿಕೆ ರೋಗಗಳಿಂದ ಹಾಳು ಬೀಳುತ್ತಿರುವ ಮಲೆನಾಡ ತೋಟಗಳಲ್ಲಿ ಬರ್ಗರ್‌ಗೆ ಬಳಸುವ ಗೆದ್ದಲು ಹುಳುವನ್ನು ಪರ್ಯಾಯ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದಾ ಎಂದು ಯೋಚನೆ ಮಾಡಬಹುದು!? ತಮಾಷೆ ಅನಿಸಿದರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಇದು.


****


ತೋಟದ ಹೊರಗೆ ನಿಂತು ರಿಮೋಟ್ ಮೂಲಕ ಕಳೆ ಹೊಡೆಯುವ ಯಂತ್ರದ ಆವಿಷ್ಕಾರ ಆಗಿರುವುದು ಈ ಬಾರಿಯ ಹೊಸ ಸಂಚಲನ. ಮೊಬೈಲ್ ಮೂಲಕ ತೋಟಕ್ಕೆ ನೀರು ಹಾಯಿಸಲು ಒಂದು ವ್ಯವಸ್ಥೆ ಕೆಲವು ವರ್ಷಗಳ ಹಿಂದೆ ಬಂದಿತ್ತು. ಈಗ ರಿಮೋಟ್ ಮೂಲಕ ಕಳೆ ಹೊಡೆಯುವ ಯಂತ್ರ.  ಇದು ಇನ್ನಷ್ಟು ಪರಿಷ್ಕೃತಗೊಂಡರೆ, ತೋಟದ ಹೊರಗೆ ಅಲ್ಲ, ಬೆಂಗಳೂರಿನಲ್ಲಿ ಕುಳಿತು ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ, ಮೇಲುಕೊಪ್ಪದ ತೋಟದ ಕಳೆ ಹೊಡೆಯುವ ದಿನಗಳು ಬರಬಹುದು. ಕೃಷಿಯಲ್ಲಿ ಲೇಬರ್ ಸಮಸ್ಯೆಗಳು ಆಗುತ್ತಿರುವಾಗ, ಇಂತಹ ಯಂತ್ರೋಪಕರಣಗಳು ಬರುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ.  


ಸ್ಮಾರ್ಟ್ ಹೆಲ್ಪಿಂಗ್ ಹ್ಯಾಂಡ್ (ಎಸ್ ಹೆಚ್ ಹೆಚ್) ಫಾರ್ಮಿಂಗ್ ಸರ್ವಿಸಸ್, ಬೆಂಗಳೂರು ಇವರು ಮೊನ್ನೆ ಭಾನುವಾರ ಕೊಪ್ಪದ ಎಸ್ಕಾನ್‌ನಲ್ಲಿ ನೆಡೆದ ನಮ್ಮ ಮಣ್ಣು ನಮ್ಮ ಬದುಕು ಸುಸ್ತಿರ ಕೃಷಿಯತ್ತ ಒಂದು ದಿಟ್ಟ ಹೆಜ್ಜೆ ಎಂಬ ಕಾರ್ಯಾಗಾರದಲ್ಲಿ ರಿಮೋಟ್ ಬಳಸಿ ಅಡಿಕೆಗೆ ಔಷಧಿ ಹೊಡೆಯುವ ಯಂತ್ರವನ್ನು ಅಭಿವೃದ್ಧಿಪಡಿಸಿದ ವಿಚಾರ ತಿಳಿಸಿದ್ದಾರೆ. ಸದ್ಯದಲ್ಲೇ ಅದರ ಡೆಮೋ ಪ್ರಾತ್ಯಕ್ಷಿಕೆಗಳು ನಡೆಯಲಿವೆ. 


AI ಜಗತ್ತಿಗೆ ಬಂದಿದ್ದೇವೆ. ಕೃಷಿಯೂ AIಗೆ ತೆರೆದುಕೊಳ್ಳುತ್ತಿದೆ. ಕೃಷಿ ಕೆಲಸಗಳೂ ರಿಮೋಟ್ ಒಳಗೆ, ಮೊಬೈಲ್ ಒಳಗೆ ಬರ್ತಾ ಇವೆ. ಕೃಷಿ ಕೆಲಸಗಳೂ ವರ್ಕ್ ಫ್ರೆಮ್ ಹೋಮ್ ಆಗಬಹುದು!?


ಮೊಬೈಲ್‌ನ ಯಾವುದೋ ಒಂದು ಆ್ಯಪ್ ರಿಮೋಟ್ ಮೂಲಕ ತೋಟದ ಹುತ್ತದ ಗೆದ್ದಲು ಹುಳಗಳನ್ನು, ಮನೆಯ ಸಂದಿಗೊಂದಿಯಲ್ಲಿರುವ ಜಿರಳೆಗಳನ್ನು ಮನೆಯಲ್ಲೇ ಕುಳಿತು ಹಿಡಿದು ಪಾತ್ರೆಗೆ ತುಂಬುವ ತಂತ್ರಜ್ಞಾನ ಬರಬಹುದು!!?  


ಗೋಡೆಯ ಮೇಲೆ ಹರಿದಾಡುವ ಜೀವಂತ ಹಲ್ಲಿಯೂ ಖರೀದಿಯ ವಸ್ತುವಾಗಬಹುದು!!


ಕೃಷಿ ಮೇಳಕ್ಕೆ ಹೋದವರು ಹೆಚ್ಚಿನ ಹೊಸ ವಿಚಾರಗಳಿದ್ದರೆ ಹಂಚಿಕೊಳ್ಳಿ.


ಅದೇನೋ ಎಣ್ಣೆ ಜೊತೆಗೆ ಉಪ್ಪಿನಕಾಯಿ ಶ್ರೇಷ್ಠ ಅಂತೆ!? ಡಿಸೆಂಬರ್ 31 ರ ಉತ್ಸವಕ್ಕೆ ಯಾರಿಗಾದರು ಜಿರಳೆ ಬೇಕಾದರೆ ಸಂಪರ್ಕಿಸಬಹುದು!

(ಸಾರಿ, ಉಪ್ಪಿನ ಕಾಯಿ ನೀವೇ ಹಾಕಿಕೊಳ್ಳಬೇಕು)


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top