ಮಂಗಳೂರಿನಲ್ಲಿ ಆದಿತ್ಯ ಬಿರ್ಲಾ ಜ್ಯುವೆಲ್ಲರಿ 'ಇಂದ್ರಿಯಾ'- ಮಳಿಗೆಯ ಭವ್ಯ ಉದ್ಘಾಟನೆ

Upayuktha
0

ಕರ್ನಾಟಕದಲ್ಲಿ ಮೂರನೇ ಮಳಿಗೆಯ ಸಂಭ್ರಮ



ಮಂಗಳೂರು: ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ಇಂದ್ರಿಯಾ, ಮಂಗಳೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸುವುದರೊಂದಿಗೆ ಕರ್ನಾಟಕದಲ್ಲಿ ತನ್ನ ಹೆಜ್ಜೆಗುರುತನ್ನು ಬಲಪಡಿಸಿದೆ. ಇದು ಭಾರತದಲ್ಲಿ ಚಿಲ್ಲರೆ ಆಭರಣ ವ್ಯಾಪಾರಕ್ಕೆ ಹೊಸ ವ್ಯಾಖ್ಯಾನ ನೀಡುವ ಸಂಸ್ಥೆಯ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. 


ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ನೆಲೆಗೊಂಡಿರುವ ಈ ಹೊಸದಾಗಿ ಪ್ರಾರಂಭಿಸಲಾದ ಇಂದ್ರಿಯಾ ಮಳಿಗೆಯಲ್ಲಿ ಭಾರತೀಯ ಕರಕುಶಲತೆಗೆ ಹೊಸ ರೂಪ ಸಿಗುತ್ತದೆ. ಸಂಸ್ಕೃತಿಯಲ್ಲಿ ಆಧುನಿಕ ಸೊಬಗಿನೊಂದಿಗೆ ಬೆಸೆಯುತ್ತದೆ. ಮಳಿಗೆಯಲ್ಲಿ ಗ್ರಾಹಕರು ಕ್ಯುರೇಟೆಡ್ ವಲಯಗಳನ್ನು ಕಾಣಬಹುದು. ಇದರಲ್ಲಿ ಮೀಸಲಾದ ಕಾರೀಗರಿ (ಕುಶಲಕರ್ಮಿಗಳ) ಸ್ಥಳ ಮತ್ತು 28,೦೦೦ ಕ್ಕೂ ಹೆಚ್ಚು ವಿನ್ಯಾಸಗಳ ಪ್ರದರ್ಶನವಿದೆ. ಈ ಉದ್ಘಾಟನೆಯ ಮೂಲಕ, ಇಂದ್ರಿಯಾ ಮಂಗಳೂರಿನ ಶ್ರೀಮಂತ ಕರಾವಳಿ ಸಂಸ್ಕೃತಿ ಮತ್ತು ಆಭರಣಗಳೊಂದಿಗೆ ತಾನು ಎಷ್ಟು ಆಳವಾಗಿ ಸಂಬಂಧ ಹೊಂದಿದ್ದೇನೆ ಎಂಬುದನ್ನು ಸೂಚಿಸುತ್ತದೆ.


ಇಂದ್ರಿಯಾದ ಸಿಇಒ ಸಂದೀಪ್ ಕೋಹ್ಲಿ ಅವರು ಮಾತನಾಡುತ್ತಾ, "ಕರ್ನಾಟಕದಲ್ಲಿ ಇಂದ್ರಿಯಾ ಹೆಜ್ಜೆಗುರುತು ವಿಸ್ತರಿಸುತ್ತಿದ್ದು, ಮಂಗಳೂರಿಗೆ ಕಾಲಿಟ್ಟಿದ್ದು ಮಹತ್ವದ ಸೇರ್ಪಡೆಯಾಗಿದೆ. ಕರಾವಳಿ ನಗರದ ಉತ್ಸಾಹಭರಿತ ಸಂಸ್ಕೃತಿ ಮತ್ತು ಸನಾತನ ಸೌಂದರ್ಯದಿಂದ ಪ್ರೇರಿತವಾದ ನಮ್ಮ ಸಂಗ್ರಹಗಳು ವೈಯಕ್ತಿಕತೆ ಮತ್ತು ಸೊಬಗನ್ನು ಸಂಭ್ರಮಿಸುತ್ತದೆ. ಈ ಪ್ರಾರಂಭದೊಂದಿಗೆ, ಇಂದ್ರಿಯಾ ತನ್ನ ವಿಶಿಷ್ಟ ಸಂಗ್ರಹಗಳು ಮತ್ತು ಅಸಾಧಾರಣ ಕುಶಲತೆಯ ಮೂಲಕ ಗ್ರಾಹಕರಿಗೆ ವಿಶಿಷ್ಟವಾದ ಆಭರಣ ಅನುಭವವನ್ನು ನೀಡಲು ಕರ್ನಾಟಕದಾದ್ಯಂತ ತನ್ನ ಉಪಸ್ಥಿತಿಯನ್ನು ವಿಸ್ತರಿಸುವುದನ್ನು ಮುಂದುವರೆಸಿದೆ" ಎಂದು ಹೇಳಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top