ರಾಮಚಂದ್ರಾಪುರ ಮಠದ ವಿರುದ್ಧದ ಬಹುದೊಡ್ಡ ಸಂಚು ಬಹಿರಂಗ..!

Chandrashekhara Kulamarva
0

ಸುಳ್ಳು ಆರೋಪಗಳ ಷಡ್ಯಂತ್ರವನ್ನ ಮತ್ತೊಮ್ಮೆ ಸಾಬೀತುಪಡಿಸುತ್ತಿರುವ ಮೊಬೈಲ್ ಸಂದೇಶಗಳು




ಬೆಂಗಳೂರು: ಸಮಾಜದ ಒಗ್ಗಟ್ಟನ್ನು ಹಾಳು ಮಾಡುವ ಒಕ್ಕೂಟವೊಂದು ಸುಳ್ಳು ಆರೋಪಕ್ಕಾಗಿ, ಸುಳ್ಳು ಸಾಕ್ಷಿಗಾಗಿ ಸತತವಾಗಿ ಹಣ ಸಂದಾಯ ಮಾಡುತ್ತಿರುವುದು ವಾಟ್ಸಪ್ ಸಂದೇಶದ ಮೂಲಕ ಜಗಜ್ಜಾಹೀರಾಗುತ್ತಿದೆ.


ದೂರುದಾರರಿಗೆ ದೂರು ನೀಡಲೂ ಹಣ, ದೂರುದಾರ್ತಿಯರ ಜೀವನ ನಿರ್ವಹಣೆಗೂ ಹಣ, ಸುಳ್ಳನ್ನೇ ಸತ್ಯವೆಂದು ಬಿಂಬಿಸಹೊರಟ ಷಡ್ಯoತ್ರಿಗಳ ಪ್ರಯತ್ನ ಬಟಾಬಯಲಾಗಿದೆ.


ಇಷ್ಟೆಲ್ಲಾ ಹಣ ಎಲ್ಲಿಂದ? ಮಠವೊಂದರ ವಿರುದ್ಧ ಮಿತ್ಯಆರೋಪಗಳನ್ನು ಸೃಷ್ಟಿಸಿ ಇಷ್ಟೆಲ್ಲಾ ಹಣವನ್ನು ನೀಡುತ್ತಿರುವ ಕಾಣದ ಕೈಗಳು ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಈಗಲೇ ಸಿಗದಿದ್ದರೂ ಮಿತ್ಯ ಆರೋಪದ ಹಿಂದೆ ವ್ಯವಸ್ಥಿತವಾದ, ನಿರಂತವಾದ ಷಡ್ಯಂತ್ರ ನಡೆಯುತ್ತಲೇ ಇದೆ ಎನ್ನುವ ಸತ್ಯವನ್ನ ಸಾಮಾಜಿಕ ಜಾಲತಾಣವೇ ಸಮಾಜಕ್ಕೆ ಸಾರಿಹೇಳಿದಂತಾಯಿತು.



ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವ ರಾಮಚಂದ್ರಾಪುರ ಮಠದ ವಿರುದ್ಧ, ರಾಘವೇಶ್ವರ ಶ್ರೀಗಳ ವಿರುದ್ಧ ಒಂದು ವ್ಯವಸ್ಥಿತವಾದ ಷಡ್ಯಂತ್ರ ಕೂಟವೇ ಕೆಲಸ ಮಾಡುತ್ತಿದ್ದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ಓಪನ್ ಸೀಕ್ರೆಟ್. ಈ ಷಡ್ಯಂತ್ರಿಗಳ ಒಕ್ಕೂಟದ ಲಾಲನೆ- ಪಾಲನೆ ಹಾಗೂ ದುಡ್ಡಿನ ಪೋಷಣೆಯಲ್ಲಿಯೇ ಸುಳ್ಳು ಆರೋಪ ಮೂಡಿಬಂದಿದೆ ಎಂಬುದು ಇಂದು ಅನುಮಾನ ಮಾತ್ರವಾಗಿ ಉಳಿದಿಲ್ಲ!


ಸ್ತ್ರೀಪರವಾದ ಕಾನೂನಿನ ದುರ್ಬಳಕೆ ಮಾಡಿಕೊಂಡು ಮಾನಹಾನಿ ಮಾಡುವುದು ಬಹಳ ಸುಲಭವಾಗಿದ್ದು, ಚಾರಿತ್ರ್ಯಿಕ ಹನನ ಮಾಡಲು ಸ್ತ್ರೀಪರವಾದ ಕಾನೂನಿನ ದುರ್ಬಳಕೆ ಸರ್ವೇಸಾಮಾನ್ಯವಾಗಿದೆ. 2014 ರಲ್ಲಿ ದೆಹಲಿ ಮಹಿಳಾ‌ ಆಯೋಗವೇ ಒಪ್ಪಿಕೊಂಡಿರುವಂತೆ 53% ಅತ್ಯಾಚಾರ ಪ್ರಕರಣಗಳು ಸುಳ್ಳೇ ಆಗಿವೆ. ಕಳೆದ ವರ್ಷದ National Crime Records Bureau‌ ದ ವರದಿಯಂತೆ 74% ಅತ್ಯಾಚಾರ ಆರೋಪಗಳು ಮಿಥ್ಯಾರೋಪಗಳೇ ಆಗಿವೆ. ಇದೇ ರೀತಿಯ ರಾಮಚಂದ್ರಾಪುರ ಮಠದ ವಿರುದ್ಧ ಮಿಥ್ಯಾರೋಪಕ್ಕೆ ಸಾಕ್ಷಿಯಾದ ಹಲವು ವಾಟ್ಸಪ್ ಸಂದೇಶಗಳು ಫೇಸ್ಬುಕ್'ನ ಪೋಸ್ಟ್ ವೈರಲ್ ಆಗುತ್ತಿದೆ.


ತಂಟೆತಕರಾರಿಲ್ಲದ ಸುಂದರ ಸುಶಿಕ್ಷಿತ ಸಮುದಾಯ ಹವ್ಯಕ ಸಮಾಜ. ಲೋಕಹಿತದ ಕಾರಣಕ್ಕಾಗಿ ಈ ಸಮುದಾಯ ಆವಿರ್ಭಾವಿಸಿತು ಎನ್ನುತ್ತಾರೆ. ಈ ಸಮಾಜದ ಸಂಘಟನೆಯನ್ನು ಒಡೆಯುವ ಏಕೈಕ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ಒಕ್ಕೂಟವೊಂದು ಈ ಷಡ್ಯಂತ್ರದ ಹಿಂದಿರುವುದು ಇದೀಗ ಬಹಿರಂಗಗೊಂಡಿದೆ.


ಸುಳ್ಳು ದೂರಿಗೆ ದೇವಬಲವನ್ನು ಪ್ರಾರ್ಥಿಸಿ ದಿನಾಂಕ 01.08.2023 ರಂದು ಶಾಲ್ಮಲೀ ನದಿ ತೀರದಲ್ಲಿ ಹೋಮ- ಜಪ ಹಾಗೂ ವಾಮಾಚಾರವನ್ನು ಮಾಡಲಾಗಿದ್ದು, 'ದೂರುದಾರ್ತಿ' ಭಾಗ್ಯ ಯೋಜನೆಯಡಿಯಲ್ಲಿ ಈ ವಾಮಾಚಾರ ಪ್ರಯೋಗಕ್ಕಾಗಿ 1,00,011/- ರೂಪಾಯಿ 'ದಕ್ಷಿಣೆ'ಯನ್ನೂ ನೀಡಲಾಗಿದೆ. 'ಎದುರು ಪಾರ್ಟಿಯವರಿಗೆ ತಿಳಿಯಬಾರದು' ಎಂಬ ಸೂಚನೆಯಂತೆ ಹತ್ತಾರು ಪುರೋಹಿತರ ಸಮ್ಮುಖದಲ್ಲಿ ಈ ಹೋಮ, ವಾಮಾಚಾರ ಗುಟ್ಟಾಗಿ ನಡೆಸಲ್ಪಟ್ಟಿವೆ. 


ವೈರಲ್ ಆಗಿರುವ ಫೇಸ್ಬುಕ್ ಪೋಸ್ಟ್ ಲಿಂಕ್: https://www.facebook.com/share/178AcafBK2/


ಕೇಸಿನ ವಿವರ ಹಾಗೂ ತೀರ್ಪು 'ಹೀಗೆಯೇ' ಬರಬೇಕು ಎಂದು ಬರೆದಿರುವ ಸಂದೇಶವೂ ಇಲ್ಲಿದ್ದು, ಇದನ್ನು ಯಾರಿಗೆ ಕಳುಹಿಸಲಾಯಿತು? ಎಂಬುದು ಪ್ರಶ್ನೆಯಾದರೂ, ಇದು ನ್ಯಾಯಾಂಗದ ಮೇಲಿನ ಹಸ್ತಕ್ಷೇಪ ಎಂಬುದಕ್ಕೆ ವಿವರಗಳೇನೂ ಬೇಕಿಲ್ಲ!


ದೂರದಾಖಲಾಗಿ 8-10 ವರ್ಷಗಳ ನಂತರವೂ ದೂರುದಾರ್ತಿಗೆ ನಿರಂತರ ದೇಣಿಗೆ ಸಲ್ಲಿಕೆಯಾಗುತ್ತಿದೆ. ಇನ್ನು ದೂರು ದಾಖಲಿಸಲು ಆ ಸಮಯದಲ್ಲಿ ಎಷ್ಟೆಲ್ಲಾ, ಏನೆಲ್ಲಾ, ನೀಡಿರಬಹುದು? ಎಂಬುದು ನಮ್ಮ ಊಹೆಗೆ ನಿಲುಕದ ಸತ್ಯ!


ಆಧುನಿಕ ಯುಗಕ್ಕೆ ವರವಾಗಿರುವ ಸೋಷಿಯಲ್ ಮೀಡಿಯಾ ಈಗಾಗಲೇ ಮಿಥ್ಯಾರೋಪದ ಸತ್ಯತೆಯನ್ನು ಸಾಕ್ಷಿಸಮೇತ ಸಮಾಜದ ಮುಂದಿಟ್ಟಿದೆ.  ಸುಳ್ಳುಸಾಕ್ಷಿಗಳನ್ನ, ಕಾಣದ ಕೈಗಳ ಕೈವಾಡವನ್ನ, ಷಡ್ಯಂತ್ರದ ಹಾದಿಯನ್ನ ಪತ್ತೆಹಚ್ಚುವ ಯಾವ ಪ್ರಯತ್ನವಿಲ್ಲದೆಯೂ ಇಷ್ಟೊಂದು ಸುಳ್ಳು ಸಾಕ್ಷಿಯ ಸತ್ಯತೆ, ಸತ್ವವಿಲ್ಲದ ಸುಳ್ಳು ಸಾಕ್ಷಿ ಬಹಿರಂಗಗೊಳ್ಳುತ್ತಿರುವುದು ದೈವಕೃಪೆಯೆ ಸರಿ.





ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
To Top