ಸಿಂಗಾಪುರದಲ್ಲಿ ಸಂಭ್ರಮದ 52ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ

Upayuktha
0

ಕಲೆ ಮತ್ತು ಸಂಸ್ಕೃತಿಗಳನ್ನು ಪ್ರೀತಿಸುವವರು ಸಮಾಜದ ಆಸ್ತಿ: ಅನಿತಾ ಜಗದೀಶ್ 




ಸಿಂಗಾಪುರ: ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂ) ಮತ್ತು ಇಂಡೋ -ಸಿಂಗಾಪುರ ಮಿತ್ರರ ಬಳಗ ನವಂಬರ್ 14ರಂದು ಲಿಟ್ಲ್ ಇಂಡಿಯಾದಲ್ಲಿರುವ ನೋವೆಟೆಲ್ ಜೇಡ್ ಸಭಾಂಗಣದಲ್ಲಿ 52ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ಯಶಸ್ವಿಯಾಗಿ ಆಚರಿಸಿದವು.


ಸಮಾರಂಭವನ್ನು "ನಾವು ವಿಶ್ವಾಸ ಪ್ರಿಯರು" ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಸಿಂಗಾಪುರದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕಿನ ನಿರ್ದೇಶಕಿ ಅನಿತಾ ಜಗದೀಶ್ ಅವರು ಉದ್ಘಾಟಿಸಿದರು.


ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತ, ಜೀವನದ ಸಮಗ್ರತೆಯಲ್ಲಿ ಕಲೆ ಮತ್ತು ಸಂಸ್ಕೃತಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಅವುಗಳನ್ನು ಪ್ರೀತಿಸಿ ಪ್ರೋತ್ಸಾಹಿಸುವವರು ಸಮಾಜದ ಬಹುದೊಡ್ಡ ಆಸ್ತಿಯಾಗಿ ಕಂಡು ಬರುತ್ತಾರೆ. ಅನಿತಾ ಜಗದೀಶ್ ಅಭಿಪ್ರಾಯ ಪಟ್ಟರು.


ಐಸಿಎಫ್‌ಸಿ ಇಂಡಿಯಾ ಸ್ಥಾಪಕ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡುತ್ತಾ 42ಕ್ಕೂ ಹೆಚ್ಚು ದೇಶಗಳಲ್ಲಿ 51 ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭಗಳನ್ನು ಆಯೋಜಿಸಿದ್ದೇವೆ. ಆಯಾ ದೇಶಗಳ ಕನ್ನಡ ಸಂಘಟನೆಗಳು ಮತ್ತು ಸ್ಥಳೀಯ ಸಂಸ್ಥೆಗಳು ತುಂಬುಹೃದಯದ ಪ್ರೋತ್ಸಾಹ ನೀಡಿ ಎಲ್ಲಾ ಸಮಾರಂಭಗಳನ್ನು ಯಶಸ್ವಿಗೊಳಿಸಿವೆ. 2021 ರಲ್ಲಿ ಮಾಲ್ಡೀಸ್ ದೇಶದಲ್ಲಿ ರಜತ ಸೌರಭವನ್ನು ಹಾಗೂ 2025 ಜೂನ್ ದುಬೈಯಲ್ಲಿ ಸುವರ್ಣ ಸೌರಭವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಿದ್ದೇವೆ. ತಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಶತ ಸೌರಭವನ್ನು ಆಚರಿಸಲಿದ್ದೇವೆ ಎಂದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top