ಅ.10: ಮಾನಸಿಕ ಆರೋಗ್ಯ ದಿನ

Upayuktha
0


“ಮನಸ್ಸನ್ನು ಎಚ್ಚರದಿಂದ ಹದವಾಗಿಟ್ಟುಕೊಂಡು ಬಾಳಬೇಕು” ಅಂತ ಡಿ.ವಿ.ಜಿ ಮಂಕುತಿಮ್ಮನ ಕಗ್ಗದಲ್ಲಿ ವರ್ಣಿಸಿದ್ದಾರೆ. 

ಕುದಿ ಹೆಚ್ಚೆ, ವೆಗಟುವುದು; ಕಡಿಮೆಯಿರಿ, ಹಸಿನಾತ, 

ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ 

ಅದರವೊಲೆ ಮನದ ಹದ ಅದನೆಚ್ಚರದಿ, 

ಬದುಕು ಸೊಗ ಹದದಿಂದ ಮಂಕುತಿಮ್ಮ, 


ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಗುವವರ ಸಂಖ್ಯೆ ಅತಿ ಹೆಚ್ಚಿದೆ. 2019ರ ಪ್ರಕಾರ ಭಾರತದಲ್ಲಿ ಶೇಕಡಾ 7-5 ಜನ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಗತ್ತಿನ ಒಟ್ಟೂ ಮಾನಸಿಕ ಅನಾರೋಗ್ಯಗಳಲ್ಲಿ ಶೇಕಡಾ 15. ಭಾರತದಲ್ಲೇ ಇದೆ. ಈ ವರ್ಷ ಇದು ಶೇಕಡಾ 20 ಆಗಬಹುದು.


ಅಭಯ ಆಸ್ಪತ್ರೆಯ ಮನೋರೋಗ ವೈದ್ಯ ಜಗÀದೀಶ್ ಎ ಪ್ರಕಾರ, “ಕೋವಿಡ್‍ನಿಂದ ಹಣಕಾಸಿನ ಕೊರತೆ ಎದುರಾಗಿದೆ. ನಿತ್ಯದ ಖರ್ಚು, ವೆಚ್ಚ ಭರಿಸಲಾಗದೇ ಬದುಕು ಬದಲಾಗಿದೆ. ಇದು ಜನರನ್ನು ಮಾನಸಿಕ ತೊಳಲಾಟಕ್ಕೆ ದೂಡಿದೆ. ಕುಟುಂಬದ ಯಜಮಾನ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವವರೂ ಇದ್ದಾರೆ. ಖರ್ಚು ಕಡಿಮೆ ಮಾಡುವ ದಾರಿ ಕಂಡುಕೊಳ್ಳಬೇಕು”.


ಲಾಕ್‍ಡೌನ್‍ನಿಂದ  ಉದ್ಯೋಗ ಕಳೆದುಕೊಂಡವರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು ಬಹಳಷ್ಟು ಮಂದಿ. ಸಂಕಷ್ಟಕ್ಕೆ ಎದುರಾದಾಗ ಅನಿವಾರ್ಯವಾಗಿ ವೃತ್ತಿಯಲ್ಲಿ ಬದಲಾವಣೆ ಒಪ್ಪಿಕೊಂಡು, ಸಿಕ್ಕ ಅವಕಾಶ, ಸದ್ಭಳಕೆ ಮಾಡಿಕೊಳ್ಳಬೇಕು.


ನಾನು ಗಮನಿಸಿರುವಂತೆ ಆಟೋ ಚಾಲಕರು ಪಾರ್ಕ್ ಬಳಿ, ರಸ್ತೆ ಮೂಲೆಯಲ್ಲಿ ಬೆಳಗಿನ ಜಾವ ತರಕಾರಿ, ಸೊಪ್ಪು ಮಾರುತ್ತಿದ್ದಾರೆ. ಕಂಪನೀಲಿ, ಖಾಸಗಿ ಕಚೇರೀಲಿ, ಕೈಗಾರಿಕೆಗಳಲ್ಲಿ ಹೋಟೆಲಲ್ಲಿ, ಪ್ರವಾಸಿ ಸಂಸ್ಥೆಗಳಲ್ಲಿ ಕೆಲಸ ಮಾಡ್ತಿದ್ದವರಿಗೆ ಈಗ ಕೆಲಸ ಇಲ್ಲ. ಖಾಸಗಿ ಸಂಸ್ಥೆ ಕಛೇರಿಗಳು, ವಸತಿ ಗೃಹಗಳು,  ವಾಣಿಜ್ಯ ವಾಹನ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಕೆಲಸ-ಸಂಬಳ ಇಲ್ಲ. ಲಕ್ಷಾವಧಿ -ಕೋಟ್ಯಾವಧಿ ಹಣ  ತೊಡಗಿಸಿ, 25-30 ವರ್ಷ ನಡೆಸಿದ ಕಂಪನಿಗಳು, ಪ್ರವಾಸಿ ಸಂಸ್ಥೆಗಳು ಬಾಗಿಲು ಹಾಕಿವೆ. ತೊಡಗಿಸಿದ್ದ ಹಣ, ಟಿಕೆಟ್‍ಗಳಿಗೆ ಪ್ಯಾಕೇಜ್‍ಗಳಿಗೆ ಹಾಕಿದ ಹಣಕ್ಕೆ 3 ನಾಮ. ಇವರೆಲ್ಲರ ಮನಸ್ಥಿತಿ ಹೇಗಿರಬಹುದು? ಹೇಗೋ ಜೀವಿಸಬೇಕು. ಆತ್ಮಹತ್ಯೆ ಎಲ್ಲರಿಗೂ ಸಾಧ್ಯವಿಲ್ಲದ ಪರಿಹಾರ. ಫ್ಲಾಟ್, ಕಾರ್‍ಗಳ ಇ.ಎಮ್.ಐ ಕಟ್ಟಲು ಸಂಬಳವೇ ಇಲ್ಲ. ಅವರಿವರ ಮನೆ ದಿನಾ ನಡೆಸಲು ಬಹಳ ಜನರಿಗೆ, ಪ್ರತಿ ಘಳಿಗೆ ಮಾನಸಿಕ ಒತ್ತಡ, ಸಂಕಟ, ನೋವು, ಉದ್ವೇಗ. ಕರೋನಾ ಪರಿಸ್ಥಿತಿ ಬಗ್ಗೆ  ರೋಷ,  ಘಳಿಗೆಗೊಮ್ಮೆ ಅವಡುಕಚ್ಚಿ, ಅಳು ನುಂಗಿ, ಸ್ವಪ್ರಯತ್ನದಿಂದ ಬಹಳ ಕಷ್ಟಪಟ್ಟು, ಭಾವನೆಗಳ ತಕಲಾಟ ತಡೆದುಕೊಳ್ಳುತ್ತಿದ್ದಾರೆ. ಸಿಕ್ಕಿದ ಕೆಲಸ - ಪಡೆದಷ್ಟೇ ಸಂಬಳ ಇದ್ದಷ್ಟೇ ತಿಂಡಿ-ಊಟ. ಅಲ್ಪತೃಪ್ತಿಯೇ ಜೀವನ ಅನ್ನೋ ಮಂತ್ರದ ಸಾಕ್ಷಾತ್ಕಾರ. ಕರೋನಾದ ಕೋವಿಡ್ ವೈರಸ್ ಬಂದು,  ರೌಂಡ್ ಬಂದು ಕಡಿಮೆಯಾಗಿ ಹೋಗೋ ಸಮಯದಲ್ಲಿ ಏನೆಲ್ಲ ಸ್ತಿತ್ಯಂತರ!? ನೆಟ್‍ವರ್ಕಿಂಗ್‍ನಲ್ಲಿ ಅಧ್ಯಾಪಕರಾಗಿ 36000 ಪಡೀತಿದ್ದವರು, ಕರೋನಾದ ಕಾರಣ, ಮೈಸೂರಿಗೆ ಬಂದು ಪ್ರೆಸ್‍ನಲ್ಲಿ ಡಿ.ಟಿ.ಪಿ ಕೆಲಸ ಮಾಡ್ತಿದ್ದಾರೆ 4500 ರೂಪಾಯಿಗೆ. ಮನೆ ಕಟ್ಟೋ ಸೂಪರ್ ವೈಸರ್, ಕಿರಾಣಿ ಅಂಗಡಿ- ಬಟ್ಟೆ ಅಂಗಡಿ, ವಿವಿಧ ವಸ್ತುಗಳ ಹಂಚಿಕೆದಾರರು,  ಖಾಸಗಿ ಶಾಲೆಯ ಶಿಕ್ಷಕರು, ನಿವೃತ್ತ ವ್ಯಕ್ತಿಗಳು,  ರ್ಯಾಪಿಡ್ ಬೈಕ್, ಟ್ಯಾಕ್ಸಿ ಓಡಿಸ್ತಿದಾರೆ. ಒಂದು ದಿನ ಬೆಳಗಿನಿಂದ ಮಧ್ಯಾಹ್ನದವರೆಗೆ ರ್ಯಾಪಿಡ್ ಓಡಿಸಿದ ಒಬ್ಬ  ನನ್ನ ಮುಂದೆ ಗೋಳಾಡಿದ .’ಇದುವರೆಗೆ ಬರೀ 50 ರೂ ಆಗಿದೆ. ಏನು ಮಾಡ್ಲಿ? ಮನೆಗೆ ಏನು ಹೇಳ್ಲಿ “ ಅಂತ.


ಮಾದಕ ವ್ಯಸನ

ಮಾದಕ ವ್ಯಸನಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹೆಚ್ಚು ಎಂದು ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕರಾದ ಜಿ. ಗುರುರಾಜ್ ಹೇಳುತ್ತಾರೆ. ಇವರ ಪ್ರಕಾರ ವ್ಯಸನ ಮುಕ್ತರಾಗಲು ಕುಟುಂಬದ ಸಹಕಾರ ಅತೀ ಮುಖ್ಯ.


ಎನ್.ವ್ಹಿ.ರಮೇಶ್

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು

ಆಕಾಶವಾಣಿ

ಮೊ: 98455 65238



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top