ಶ್ರೇಷ್ಠವಾದ (nobel) ಅಂಕ ಬಾರದಿರುವುದಕ್ಕೆ ಕಾರಣ ಏನು ಅಂದ್ರೆ...! 🤣😂

Chandrashekhara Kulamarva
0

(ಇದು ಕೇವಲ ಲಘು ಪ್ರಬಂಧ) 🤣😂





ನೋಬಲ್ ಅಂಕ ನಿರೀಕ್ಷೆ ಮಾಡಿದ್ದ ಬಾಲಕ 'ಯುವರಾಜ್‌' "ನನಗೆ ಜೀರೋ ಕೊಟ್ಟಿದ್ಯಾಕೆ?" ಅಂತ ಅಶಾಂತಿ ಯಿಂದ ಉತ್ತರ ಪತ್ರಿಕೆ ಹಿಡಿದುಕೊಂಡು, ಅದೇ ಶಾಲೆಯಲ್ಲಿ  ಹೆಡ್‌ಮಿಸ್ ಆಗಿರುವ ಮದರ್ ಬಳಿ ಹೋಗಿ ಮಾರ್ಕ್ಸ್ ವಾದ ದ ರಚ್ಚೆ ಹಿಡಿದ!! 


ಹೆಡ್‌ಮಿಸ್ ಹತ್ರ ಕರೆದು ಹೇಳಿದ್ರು "ಮಗೂ, ಐದಕ್ಕೆ 'ಶೂ'ನ್ಯ 'ಎಸೆದಿದ್ದು' POEM ನ್ನು ಪೂರ್ಣ ಐದು ಸಾಲಿನಲ್ಲಿ ನೀನು ಬರೆದಿಲ್ಲ ಅಂತ.  ನೀನು ಕೇವಲ ನಾಲ್ಕು ಮುಕ್ಕಾಲು ಸಾಲಿನಲ್ಲಿ POEM ಬರೆದಿದ್ದಿ ಹಾಗಾಗಿ ಲಿಟ್ರೇಚರ್ ಟೀಚರ್ ಮೇಲ್ಗಡೆ 'ಶೂ'ನ್ಯ ಹಾಕಿದ್ರೂ, ಲೈನ್ ಕೆಳಗಡೆ ಐದು ಅಂಕ ಕೊಟ್ಟಿದಾರೆ.  ನೆಕ್ಸ್ಟ್ ಟೈಮ್, ಪೂರ್ತಿ ಐದೂ ಲೈನಿಗೆ POEM ಬರೆಯಬೇಕು.  ಆಗ ಮೆಲ್ಗಡೆ 5 ಕೊಡ್ತಾರೆ, ಲೈನ್ ಕೆಳಗಡೆ 0 ಕೊಡ್ತಾರೆ.  ಇರುವುದೇ 5 ಅಂಕ ಅಂತಾದಾಗ, ಮೇಲ್ಗಡೆನೂ 5 ಕೊಟ್ಟು, ಲೈನಿನ ಕೆಳಗೂ 5 ಕೊಡುವುದಕ್ಕೆ ಆಗಲ್ಲ ಅಲ್ವಾ?"


"ಹೂಂ ಮಮ್ಮಿ"


"ಏಯ್, ಶಾಲೆಯಲ್ಲಿ ಮಮ್ಮಿ ಅಂತ ಹೇಳಬಾರದು ಅಂತ ಹೇಳಿಲ್ವಾ?"


"ಓಕೆ ಮಿಸ್"


ಅಷ್ಟು ಹೊತ್ತಿಗೆ ಶಾಲೆಯ ಬೆಲ್ ಹೊಡೆದಿದ್ದರಿಂದ 'ಯುವರಾಜ' ಖಾಲಿ ನೋಟ್ ಪುಸ್ತಕ ಗಳನ್ನು ಹಿಡ್ಕೊಂಡು ಮನೆಗೆ ಹೊರಟ!!


**

ಶ್ರೇಷ್ಠವಾದ (nobel) ಅಂಕ ಬಾರದಿರುವುದಕ್ಕೆ ಇದು ಕಾರಣ


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


إرسال تعليق

0 تعليقات
إرسال تعليق (0)
To Top