ಮಂಗಳೂರು: ಸಾಹಿತ್ಯದ ಅಭಿವ್ಯಕ್ತಿಗೆ ಗೋಡೆ ಬರಹ ಪತ್ರಿಕೆಗಳು ಪ್ರೇರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಹಸ್ತಪತ್ರಿಕೆಗಳ ಪರಂಪರೆ ನಮ್ಮಲ್ಲಿದ್ದು, ಹಿರಿಯ ಸಾಹಿತಿಗಳ ಮೊದಲ ರಚನೆಗಳಿಗೆ ಅವು ಮೊದಲ ಮೆಟ್ಟಲುಗಳಾಗಿದ್ದವು ಎಂದು ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪಿ. ನುಡಿದರು.
ಅವರು ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಪ್ರೊ. ಬಿ.ಎ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ನಡೆದ 'ಭಿತ್ತಿ' ಗೋಡೆ ಬರಹದ ಉದ್ಘಾಟನಾ ಸಮಾರಂಭದಲ್ಲಿ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದರು.
ಶೀಘ್ರವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದಲ್ಲಿಯೂ ಭಾವಗಳ ಅಭಿವಕ್ತಿಯ ಮಾಧ್ಯಮವಾದ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದ್ದು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ನೂತನ ಅವಕಾಶಗಳ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಕನ್ನಡ ವಿಭಾಗವನ್ನು ಕಟ್ಟಿದ ಎಸ್.ವಿ. ಪರಮೇಶ್ವರ ಭಟ್ಟರ ಪರಂಪರೆಯನ್ನು ಮುಂದುವರಿಸಿದ ಹಿರಿಯರಾದ ಪ್ರೊ. ಬಿ.ಎ. ವಿವೇಕ ರೈ ಮೊದಲಾದವರ ಕಾರ್ಯಗಳಿಂದ ಕನ್ನಡ ವಿಭಾಗ ಅನನ್ಯ ಸ್ಥಾನವನ್ನು ಪಡೆದಿದ್ದು ಅದೇ ಮಾದರಿ ಇಂದಿಗೂ ಮುಂದುವರಿಯಲಿ ಎಂದು ಅಶಿಸಿದರು.
ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ ಆರ್. ಮಾತನಾಡಿ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಆದ್ಯತೆಯನ್ನು ನೀಡುತ್ತಿದ್ದು ಅಧ್ಯಯನ, ಸಂಶೋಧನೆ, ಸೃಜನಶೀಲ ಬರವಣಿಗೆಗಳಿಗೆ ಅವಕಾಶ ನೀಡುತ್ತಿದೆ ಎಂದರು.
ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಧನಂಜಯ ಕುಂಬ್ಳೆ, ಬಿತ್ತಿ ಸಂಯೋಜಕ ಡಾ. ಯಶು ಕುಮಾರ್ ಡಿ. ಉಪಸ್ಥಿತರಿದ್ದರು.
ಭಿತ್ತಿ ಸಂಪಾದಕಿ ಪೃಥ್ವಿ ನಾಯಕ್ ಭಿತ್ತಿ ಪತ್ರಿಕೆಯ ಆಶಯಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಸಲೀಮ್, ಮರಿ ಸಿದ್ದಪ್ಪ, ಶ್ರೇಯಸ್, ಉಪ ಸಂಪಾದಕ ಜಗದೀಶ್ ಕವನಗಳನ್ನು ವಾಚಿಸಿದರು. ಅಭಿಷೇಕ್ ವಾಲ್ಮೀಕಿ ಸ್ವಾಗತಿಸಿದರು. ಅನೂಪ್ ವಂದಿಸಿದರು. ರೇಷ್ಮಾ ಎನ್. ಬಾರಿಗ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

 
 
 
 
 
 
 
 
 
 
 

 
