1980 ನಂತರದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಲಾದ ಎಲ್ಲಾ ಮಂಜೂರಾತಿಗಳು ಕಾನೂನುಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು.!!!
ರೈತರಿಗೆ ಮತ್ತೊಂದು ಮರಣ ಶಾಸನವಾಗಲಿರುವ ಸರಕಾರದ ಈ ಸರ್ಕುಲರ್.
ಮೂರು ಎಕರೆವರೆಗಿನ ಅರಣ್ಯ ಒತ್ತುವರಿ (ಸ್ವಂತ ಹಿಡುವಳಿ ಮತ್ತು ವತ್ತುವರಿ ಸೇರಿ) ಯನ್ನು ತೆರವುಗೊಳಿಸುವುದಿಲ್ಲ ಎಂದ ಅರಣ್ಯ ಸಚಿವರು ಪತ್ರಿಕಾ ಹೇಳಿಕೆ (ಅಧಿಕೃತ ಆದೇಶ ಅಲ್ಲ) ಕೊಟ್ಟು ರೈತರ ಪ್ರತಿಭಟನೆಯ ಕಾವನ್ನು ತಣಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಈಗ 1980 ನಂತರದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಲಾದ ಎಲ್ಲಾ ಮಂಜೂರಾತಿಗಳು ಕಾನೂನುಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು ಎಂದು ಸರ್ಕುಲರ್ ಹೊರಡಿಸಿ, ರೈತರ ಕೃಷಿ ಭೂಮಿಗೆ ಬೆಂಕಿ ಹಚ್ಚಲಾಗಿದೆ!!?
ಮಂಜೂರಾದ, ಖಾತೆಯಾದ, ಪಹಣಿ-MR ಆಗಿ ಕಂದಾಯ ಕಟ್ಟಿ, 40 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿ "ಇನ್ನು ಇದು ನಿಮ್ಮದಲ್ಲ" ಎಂದು ಸರಕಾರ ಮನೆ ಬಾಗಿಲಿಗೆ ಬಂದು, ಜಮೀನು ಬಾಗಿಲಿಗೆ ಬಂದು ನೋಟೀಸ್ ಕೊಡಲಿದೆ.
1980 ರ ನಂತರದ ಮಂಜೂರಾದ ಭೂಮಿ ಮಾರುವಂತಿಲ್ಲ, ಮಕ್ಕಳಿಗೋ ಹಕ್ಕು ಬಾದ್ಯಸ್ತರಿಗೋ ವರ್ಗಾಯಿಸುವಂತಿಲ್ಲ. ಯಾಕೆಂದರೆ, ಇದು ಕಾನೂನುಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು ಎಂದು ಸರ್ಕುಲರ್ ಆಗಿದೆ!!!
ಲೋನ್ ಸಿಗೋದಿಲ್ಲ, ಇನ್ಷ್ಯೂರೆನ್ಸ್ ಕಟ್ಟಲೂ ಬರುವುದಿಲ್ಲ, ಯಾಕೆಂದರೆ, ಇದು ಕಾನೂನುಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು ಎಂದು ಸರ್ಕುಲರ್ ಆಗಿದೆ!!!
ಇದೆಂತಹ ಸರಕಾರ? ಇದೆಂತಹ ದಬ್ಬಾಳಿಕೆ? ಯಾವ ಪ್ರಜಾಪ್ರಭುತ್ವ ಸರಕಾರ ಜೀವಾನಾಧಾರಕ್ಕೆ ಭೂಮಿಯನ್ನು ರೈತರಿಗೆ ಮಂಜೂರು ಮಾಡಿತ್ತೋ ಅದೇ ಪ್ರಜಾಪ್ರಭುತ್ವ ಸರಕಾರ ತಣ್ಣಗೆ ಒಂದು ಸರ್ಕುಲರ್ ಹೊರಡಿಸಿ, ತನ್ನದೇ ಮಂಜೂರಾತಿಯನ್ನು ತಾನೇ ಕಾನೂನುಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು ಎಂದು ಹೇಳುವುದೆ!!?
ಇಲ್ಲ.
ಇದು ಮಲೆನಾಡ ರೈತ ಸಮುದಾಯದ ಮೇಲೆ ದೊಡ್ಡ ಮಟ್ಟದ ಆಘಾತ ಉಂಟುಮಾಡಲಿದೆ.
ಏನು ಆಗಬಹುದು?
ಏನೇನ್ ಆಗಬಹುದು?
ಏನೇನೂ ಆಗಬಹುದು?
ಮಲೆನಾಡ ರೈತರ ಜಮೀನಿಗೂ, ಬದುಕಿಗೂ ಸರಕಾರ ಗುಂಡಿ ತೋಡುತ್ತಿರುವಂತಿದೆ!!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248

 
 
 
 
 
 
 
 
 
 
 

 
