ಕತ್ತಲಿನ ಮೇಲೆ ಬೆಳಕಿನ ಜಯ

Upayuktha
0



ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ, ಅದು ನಮ್ಮ ಹೃದಯದ ಅಂಧಕಾರವನ್ನು ದೂರ ಮಾಡುವ ಆಂತರಿಕ ಜಾಗೃತಿಯ ಹಬ್ಬವೂ ಹೌದು. ನಮ್ಮ ಮನಸ್ಸಿನೊಳಗಿನ ಕತ್ತಲೆಯನ್ನು ಓಡಿಸಿ, ಬೆಳಕಿನ ನಂಬಿಕೆಯನ್ನು ತುಂಬುವ ಪವಿತ್ರ ಕ್ಷಣವೇ ದೀಪಾವಳಿ. 


ಪ್ರತಿಯೊಂದು ದೀಪವೂ ಒಂದು ಹೊಸ ಆಶೆಯ ಪ್ರತೀಕ. ಕತ್ತಲೆಯ ಮಧ್ಯೆ ಒಂದು ಚಿಕ್ಕ ದೀಪವೂ ಬೆಳಕನ್ನು ಹರಡುತ್ತದೆ ಎಂಬ ಸಂದೇಶವನ್ನು ಅದು ನೀಡುತ್ತದೆ. ಅದೇ ರೀತಿಯಲ್ಲಿ ಜೀವನದ ಕಷ್ಟಗಳ ನಡುವೆ ಒಂದು ನಗು, ಒಂದು ದಯೆಯ ಮಾತು, ಒಂದು ಸಹಾಯದ ಕೈ- ಇವುಗಳೆ ಮಾನವೀಯ ದೀಪಗಳು. 


ಈ ಹಬ್ಬವು ನಮ್ಮ ಪುರಾತನ ಸಂಸ್ಕೃತಿಯ ಅಮೂಲ್ಯ ಸಂಕೇತ. ಶ್ರೀ ರಾಮಚಂದ್ರರು ರಾವಣನ್ನು ಸಂಹರಿಸಿ ಅಯೋಧ್ಯೆಗೆ ವಾಪಸ್ಸಾದ ದಿನವನ್ನು ಸ್ಮರಿಸುವುದಕ್ಕಾಗಿ ದೀಪಾವಳಿ ಆಚರಿಸಲಾಗುತ್ತದೆ. ಜನರು ಅಯೋಧ್ಯೆಯ ತುಂಬಾ ದೀಪಗಳನ್ನು ಹಚ್ಚಿ ಸಂತೋಷದಿಂದ ಅವರನ್ನು ಸ್ವಾಗತಿಸಿದರು. ಆ ಬೆಳಕುಗಳ ಹಬ್ಬವು ಇಂದು ಸಹ ಸತ್ಯ, ಧರ್ಮ ಹಾಗೂ ನ್ಯಾಯದ ವಿಜಯದ ಸಂಕೇತವಾಗಿ ಉಳಿದಿದೆ.


ಆದರೆ ದೀಪಾವಳಿಯ ಅರ್ಥ ಕೇವಲ ಪುರಾಣದಲ್ಲಿ ಮಾತ್ರ ಸೀಮಿತವಲ್ಲ. ಅದು ನಮ್ಮ ಮನಸ್ಸಿನ ಕತ್ತಲೆಯ ಮೇಲೆ ಜ್ಞಾನದ ಬೆಳಕಿನ ಜಯದ ಸಂಕೇತವೂ ಆಗಿದೆ. ದೀಪದ ಮೃದುವಾದ ಬೆಳಕು ನಮಗೆ ನೆನಪಿಸುತ್ತದೆ- ಅಲ್ಪ ಬೆಳಕೂ ಅಂಧಕಾರವನ್ನು ಓಡಿಸಬಲ್ಲವೆಂಬ ಸತ್ಯವನ್ನು. ಅದೇ ರೀತಿ, ಸಣ್ಣ ಸಣ್ಣ ಸದುದ್ದೇಶಗಳು ನಮ್ಮ ಬದುಕನ್ನು ಬೆಳಗಿಸಬಲ್ಲವು.


ದೀಪಾವಳಿ ಕೇವಲ ಪಟಾಕಿ ಸಿಡಿಸುವ  ಹಬ್ಬವಲ್ಲ, ಅದು ಹೃದಯಗಳನ್ನು ಬೆಳಗಿಸುವ, ಮಸ್ಸುಗಳನ್ನು ಶುದ್ಧಗೊಳಿಸುವ ಮತ್ತು ಹಳೆಯ ದ್ವೇಷಗಳನ್ನು ಕರಗಿಸು ಕ್ಷಣ. ನಮ್ಮೊಳಗಿನ ಕೆಟ್ಟತನ - ಅಸೂಯೆ, ಹಗೆ, ಅಹಂಕಾರ- ಇವುಗಳನ್ನು ಕರಗಿಸಿ, ಪ್ರೀತಿ, ಕರುಣೆ ಮತ್ತು ಸ್ನೇಹದ ದೀಪವನ್ನು ಹಚ್ಚುವ ಸಮಯ ಇದು.


ದೀಪಾವಳಿಯ ಬೆಳಕು ಕೇವಲ ಹೊರಗಿನ ದೀಪಗಳಲ್ಲಿ ಅಲ್ಲ, ನಮ್ಮ ಮಸ್ಸಿನ  ಆಳದಲ್ಲೂ ಹೊಳೆಯಲಿ. ಪ್ರತಿಯೊಬ್ಬರ ಮನೆಯೂ ಸಂತೋಷದಿಂದ, ಪ್ರೀತಿಯಿಂದ, ಶಾಂತಿಯಿಂದ ತುಂಬಿರಲಿ. ದೀಪದ ಬೆಳಕೂ ಜಗತ್ತಿನ ಮೂಲೆ ಮೂಲೆಗೂ ಹರಡಿ ನಾವೆಲ್ಲರೂ ಅಂಧಕಾರದಿಂದ ಹೊರಬಂದು, ಸತ್ಯ ಮತ್ತು ಪ್ರೀತಿಯ ದೀಪವನ್ನು ಹಚ್ಚಿ ನಲಿಯುವಂತಾಗಲಿ. 




- ಧನ್ಯ ದಾಮೋದರ ಕೋಲ್ಚಾರು

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top