ವೈವಿಧ್ಯಮಯ ಲೇಖನಗಳ ಗುಚ್ಛ "ವಚನ- ಧರ್ಮ- ಪರಿಸರ": ಡಾ. ಎನ್.ಎಚ್. ಮುದಕಪ್ಪನವರ್

Upayuktha
0


ಹುನಗುಂದ: ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ಹೊನ್ನಕುಸುಮ ಸಾಹಿತ್ಯ ವೇದಿಕೆಯ "ತಿಂಗಳ ಬೆಳಕು -29"ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು. ಪ್ರೊ. ಬಿ.ಬಿ. ಕಡ್ಲಿ ಅವರ "ವಚನ-ಧರ್ಮ- ಪರಿಸರ ಎಂಬ ವಿಮರ್ಶೆ ಮತ್ತು ಸಂಶೋಧನ ಸಂಕಲನವನ್ನು ಕುರಿತು ಡಾ. ಎನ್. ಎಚ್. ಮುದುಕಪ್ಪನವರ್  ಮಾತನಾಡಿದರು. ಪ್ರೊ. ಬಿ.ಬಿ. ಕಡ್ಲಿಯವರ ಶಿಸ್ತು, ಅಚ್ಚುಕಟ್ಟುತನ, ಸರಳತೆಯಂತೆ ಅವರ ಕೃತಿಯು ವೈವಿಧ್ಯಮಯ ಲೇಖನಗಳೊಂದಿಗೆ ಮೌಲಿಕವಾಗಿದೆ ಎಂದರು.


15 ಲೇಖನಗಳ ಸಂಕಲನವಾದ ಈ ಕೃತಿಯು ವಚನಕಾರರ ತತ್ವ-ಆದರ್ಶ, ಅವರ ವಚನಗಳಲ್ಲಿ ಪುನರ್ಜನ್ಮದ ಕಲ್ಪನೆ, ಧರ್ಮದ ಸೂಕ್ಷ್ಮ ವಿಚಾರಗಳು, ಹುನಗುಂದ ಪರಿಸರದ ಸಂಶೋಧನಾತ್ಮಕ ಸ್ಥಳನಾಮಗಳನ್ನು ತಿಳಿಸುವ ಮಹತ್ವದ ಕೃತಿಯಾಗಿದೆ ಎಂದರು. ಯಾವುದು ಟೊಳ್ಳು- ಯಾವುದು ಗಟ್ಟಿ, ಸನ್ಯಾಸ ಮತ್ತು ವ್ಯಕ್ತಿ ಧರ್ಮ, ಧರ್ಮ: ವಿವೇಚನೆ, ಅರಿವು ಅರಸಿ ಹೋದ ಅರಸ, ಮಹಾಂತ ಜೋಳಿಗೆ, ಬಸವಣ್ಣನವರು ಕಟ್ಟಿದ ಸಮಾಜ, ಮೊದಲಾದ ಲೇಖನಗಳ ಕುರಿತು  ಸುದೀರ್ಘವಾಗಿ ಮಾತನಾಡಿದರು.


ಪ್ರೊ. ಬಿ.ಬಿ. ಕಡ್ಲಿ ಅವರು ಮಾತನಾಡಿ ತಮ್ಮ ಅನುಭವಗಳನ್ನು ಅಭಿವ್ಯಕ್ತಿಗೊಳಿಸಿದರು. ತಮ್ಮ ಗುರುಗಳಾದ ಎಂ ಎಂ. ಕಲಬುರ್ಗಿಯವರ ಒಡನಾಟವನ್ನು, ಅವರು ನೀಡಿದ ಸಾಹಿತ್ಯ ಕುರಿತಾದ ಸಲಹೆಗಳನ್ನು, ತಮ್ಮ ಬರವಣಿಗೆಗೆ ಮೆಚ್ಚುಗೆ ಸೂಚಿಸಿದ ಸಂದರ್ಭವನ್ನು ಮೆಲುಕು ಹಾಕಿದರು. ತಮ್ಮ ವಚನ- ಧರ್ಮ-ಪರಿಸರ ಕೃತಿಯಲ್ಲಿ ಅಭಿವ್ಯಕ್ತಿಗೊಂಡ ಹಲವಾರು ಪ್ರಶ್ನೆಗಳಿಗೆ ಸಮರ್ಥನೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಎಸ್ ಮುಡಪಲದಿನ್ನಿ ಅವರು ವಚನ- ಧರ್ಮ- ಪರಿಸರ ಕೃತಿ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ವಚನಕಾರರ ನಿಲುವು, ಅವರ ವೈಚಾರಿಕ ಪ್ರಜ್ಞೆ, ಜಾತಿ, ಧರ್ಮದ ಸೂಕ್ಷ್ಮ ವಿಚಾರಗಳನ್ನು ತಿಳಿಸಿದರು. ಪ್ರೊ. ಬಿ.ಬಿ. ಕಡ್ಲಿ ಅವರನ್ನು ತಮ್ಮ ಪ್ರೀತಿಯ ಗುರುಗಳೆಂದು ಅಭಿಮಾನ ವ್ಯಕ್ತಪಡಿಸಿದರು. ಅವರ ಶಿಸ್ತು, ಪ್ರಾಮಾಣಿಕತೆ, ನೇರ ನುಡಿಯನ್ನು ಸ್ಮರಿಸಿದರು.


ಪೂರ್ಣಿಮಾ ಕಾಂಬ್ಳೆ ಪ್ರಾರ್ಥಿಸಿದರು. ಡಾ. ಎಲ್.ಜಿ. ಗಗ್ಗರಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಂ.ಡಿ ಚಿತ್ತರಗಿಯವರು ವಂದಿಸಿದರು. ಕೆ.ಎ.ಬನ್ನಟ್ಟಿ, ಹೇಮಂತ್ ಬೂತ್ನಾಳ್, ಡಾ.ಎಸ್.ಆರ್. ಗೋಲಗೊಂಡ  ಡಾ.ನಾಗರಾಜ್ ನಾಡಗೌಡ, ಡಾ. ವಸಂತಕುಮಾರ್ ಕಡ್ಲಿಮಟ್ಟಿ, ಜಗದೀಶ್ ಹಾದಿಮನಿ, ಗೀತಾ ತಾರಿವಾಳ, ಜಗದೀಶ್ ಹದ್ಲಿ, ಎ.ಎಂ. ಗೌಡರ್ ಸೇರಿದಂತೆ ಇನ್ನಿತರ ಲೇಖಕರು, ಸಹೃದಯರು, ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top