ಕುಂಬಳೆ: ನವರಾತ್ರಿ ಹಬ್ಬದ ಪ್ರಯುಕ್ತ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ 124 ನೇ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು.
ಸಂಸ್ಥೆಯ ನಾಟ್ಯ ಸರಸ್ವತಿ ಸಾಧನೆಯಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಒಫ್ ರೆಕಾರ್ಡಿಗೆ ಸೇರ್ಪಡೆಯಾಗಿರುವ ಕುಮಾರಿ ಲಾಲಿತ್ಯ ಬೇಲೂರು ವಿಶೇಷ ಅತ್ಯಾಕರ್ಷಕ ರಿಂಗ್ ನೃತ್ಯ, ಫೈರ್ ಡಾನ್ಸ್, ಮೊಳೆ ಮೇಲೆ ಕುಣಿತ ಪ್ರದರ್ಶಿಸಿ ಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉದಯೋನ್ಮುಖ ಕಲಾವಿದರು ಶ್ರೀ ದೇವಿಯ ಸಾನಿಧ್ಯದಲ್ಲಿ ಕಲಾಪ್ರದರ್ಶನ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾದರು. ಡಾ. ವಾಣಿಶ್ರೀಯವರ ಸಾಹಿತ್ಯ ಪ್ರಸ್ತುತಿಯೊಂದಿಗೆ ಮಧುಲತಾ ಪುತ್ತೂರು ಗಾನ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾಸರಗೋಡಿನ ಕಲಾವಿದರು, ಸಂಸ್ಥೆಯ ಮಂಜೇಶ್ವರ ವಿಭಾಗದ ಕಲಾವಿದರು ವಿದುಷಿ ರೇಖಾ ದಿನೇಶ್ ಅವರ ಶಿಷ್ಯೆಯರು, ಸಂಸ್ಥೆಯ ಪುತ್ತೂರು ವಿಭಾಗದ ಕಲಾವಿದರು ಮನು ಕುಮಾರ್ ಪುತ್ತೂರು ಅವರ ಶಿಷ್ಯಂದಿರು, ಸಹ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಿದರು.
ದೇವಸ್ಥಾನದ ಮಂಜುನಾಥ್ ಆಳ್ವಾ ಹಾಗೂ ಸಂಸ್ಥೆಯ ಕಲಾವಿದರ ಪೋಷಕರು, ನಾಟ್ಯ ವಿದುಷಿ ರೇಖಾ ದಿನೇಶ್, ಮನು ಕುಮಾರ್ ಪುತ್ತೂರು, ಅಚ್ಯುತ ಭಟ್, ಶ್ರೀಕುಮಾರ್, ಶೋಭಾರಾಣಿ, ಸ್ಮರಣಿಕೆಯ ಪ್ರಾಯೋಜಕರಾದ ನರಸಿಂಹ ಬಲ್ಲಾಳ್ ಮುಂತಾದವರು ಸ್ಮರಣಿಕೆ ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರಶಂಸಿಸಿದರು. ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ದೇವರ ಪ್ರಸಾದ ನೀಡಿ ಪುರಸ್ಕರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ