ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಮತ್ತು ಪ್ರತಿಭಾ ದಿನಾಚರಣೆ

Chandrashekhara Kulamarva
0



ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ  ತೆಂಕನಿಡಿಯೂರು ಇಲ್ಲಿನ 2025-26 ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಉದ್ಘಾಟನಾ ಸಮಾರಂಭ  ಮತ್ತು ಪ್ರತಿಭಾ ದಿನಾಚರಣೆಯು ಜರುಗಿತು. ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿದ ಉಡುಪಿ ಶಾಸಕರಾದ ಯಶಪಾಲ ಎ ಸುವರ್ಣ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಜಗದ್ವಿಖ್ಯಾತ ಹೊಂದಿರುವ ಉಡುಪಿ ಜಿಲ್ಲೆಯ ಸ್ಥಾನಮಾನವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ.  


ವಿದ್ಯಾರ್ಥಿ ವೇದಿಕೆಯಲ್ಲಿ ಸಕ್ರಿಯರಾಗುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಂಸ್ಥೆಯ ಅಭಿವೃದ್ದಿಗೂ ಸಹಕರಿಸುವಂತೆ ವಿದ್ಯಾರ್ಥಿಗಳಿಗೆ ಕರೆಯಿತ್ತರು. ದಿಕ್ಸೂಚಿ ಭಾಷಣಗೈದ ನಿವೃತ್ತ ಪ್ರಾಂಶುಪಾಲರೂ, ಶಿಕ್ಷಣ ತಜ್ಞರೂ ಆದ ರಾಜಶೇಖರ್ ಹೆಬ್ಬಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡುತ್ತಾ ಬದುಕಿನಲ್ಲಿ ಸ್ಪಷ್ಟ ಗುರಿ, ಆದರ್ಶ  ಮತ್ತು ಸಾಧನೆ ಜೊತೆಯಾದಗ ಮಾತ್ರ ಜೀವನ ಸಾರ್ಥಕವಾಗಬಲ್ಲದು. 


ಜೀವನದಲ್ಲಿ ಸೊಲೆಂಬುದಿಲ್ಲ ಪ್ರಯತ್ನ ನಿಲ್ಲಿಸುವುದೇ ಸೋಲು .ಜೀವನ ಕರ್ತವ್ಯ, ನೈತಿಕತೆ, ಭಾವನೆಗಳು, ವಿವೇಚನೆ ಮತ್ತು ಆಧ್ಯಾತ್ಮಿಕತೆಗಳ ಮಿಶ್ರಣ. ಸಾಮಾಜಿಕ ಅಪರಾಧಗಳಿಗೆ ಬಲಿಯಾಗದೇ ವಿವೇಕಯುತ ಬದುಕು ರೂಪಿಸಿಕೊಳ್ಳುವಂತೆ ಮಾರ್ಗದರ್ಶಿಸಿದರು. ಅಧ್ಯಕ್ಷತೆ  ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 


ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿಯ ಕಾರ್ಯದರ್ಶಿಗಳಾದ ಡಾ.ಗಣನಾಥ ಎಕ್ಕಾರ್, ರೆಡ್ ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಾಕ್ಷರಾದ ಬಸ್ರೂರು ರಾಜೀವ ಶೆಟ್ಟಿ, ಲಯನ್ಸ್  ಅಮೃತ್ ಉಡುಪಿ ಅಧ್ಯಕ್ಷರಾದ ಗೋಪಾಲ್ ಅಂಚನ್ , ಐ.ಕ್ಯೂ.ಎ.ಸಿ ಸಂಚಾಲಕರಾದ ಶ್ರೀ ಡಾ. ವಿಷ್ಣುಮೂರ್ತಿ ಪ್ರಭು , ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಜ್ ಕುಮಾರ್, ಸಂದೇಶ್ , ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಕೃಷ್ಣ ಸಾಸ್ತಾನ, ಸುಷ್ಮಾ ಟಿ  ಮತ್ತು ವಿದ್ಯಾರ್ಥಿ ಪ್ರತಿನಿಗಳಾದ ಹನುಮಂತ್ ಬಿ, ಆಕಾಂಕ್ಷ, ಶಿವಾನಂದ, ರಕ್ಷಿತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ನೀಲಾವರ ಸ್ವಾಗತಿಸಿದರೆ,ಸಂಖ್ಯಾಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಉಮೇಶ್  ಪೈ ವಂದನಾರ್ಪಣೆಗೈದರು.ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಜಿ ಕಾರ್ಯಕ್ರಮನಿರೂಪಿಸಿದರು. ನಂತರ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂತರ್ ತರಗತಿ ಸಾಂಸ್ಕೃತಿಕ ಸ್ಫರ್ಧೆ ಜರುಗಿತು. ಗಣೇಶ್ ರಾವ್ ಎಲ್ಲೂರು ಮತ್ತು ತೇಜಸ್ವಿನಿ ತೀರಪುಗಾರರಾಗಿ ಸಹಕರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ತೀರ್ಪುಗಾರರನ್ನು ಪರಿಚಯಿಸಿದರು. ಪ್ರಿಯಾ, ಪಲ್ಲವಿ ಮತ್ತು ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top