ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿ ಇಲ್ಲಿ ‘Digital World – Future, Innovation, You’ ಎಂಬ ವಿಶೇಷ ಕಾರ್ಯಾಗಾರ ಬುಧವಾರ 8 ಅಕ್ಟೋಬರ್ 2025ರಂದು ಕಾಲೇಜಿನ ಟಿ.ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಮಣಿಪಾಲ ಡಿಜಿಟಲ್ ಸಿಸ್ಟಮ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಇಓ ಶ್ರೀ ಗುರುಪ್ರಸಾದ್ ಕಾಮತ್ ಆಗಮಿಸಿ “ಡಿಜಿಟಲ್ ಪ್ರಪಂಚದಲ್ಲಿ ಹೊಸತನ ಮತ್ತು ಮಾನವ ಸಂಪನ್ಮೂಲದ ಪಾತ್ರ” ಕುರಿತು ಅತ್ಯಂತ ಪ್ರೇರಣಾದಾಯಕ ಉಪನ್ಯಾಸ ನೀಡಿದರು.
ಜೊತೆಗೆ ಹಳೆಯ ಕಾಲದ ಸಂವಹನ ವಿಧಾನಗಳಿಂದ ಇಂದಿನ ನವೀನ ತಂತ್ರಜ್ಞಾನಗಳವರೆಗಿನ ಅಭಿವೃದ್ಧಿಯನ್ನು ವಿವರಿಸಿದರು. ಅತಿಥಿ ಪರಿಚಯವನ್ನು ತೃತೀಯ ಬಿಸಿಎ ವಿದ್ಯಾರ್ಥಿನಿ ಪ್ರತೀಕ್ಷಾ ಪ್ರಭು ಮಾಡಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಶಿವರಂಜನಿ ಕಾರ್ಯಕ್ರಮ ನಿರೂಪಿಸಿದರು.