ಪಾಕಿಸ್ತಾನವನ್ನು ದಂಡಿಸುವ ಅವಕಾಶ ಕೈಚೆಲ್ಲಿದ್ದ ಯುಪಿಎ ಸರಕಾರ: ಬೆಚ್ಚಿಬೀಳಿಸಿದ ಚಿದಂಬರಂ ಹೇಳಿಕೆ

Chandrashekhara Kulamarva
0


ಕೇಂದ್ರದ ಮಾಜಿ ಗೃಹ ಸಚಿವರ ಒಂದು ಹೇಳಿಕೆ ಇಡೀ ದೇಶವನ್ನು, ಭಾರತೀಯರನ್ನು, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.


ಮಾಜಿ ಗೃಹ ಸಚಿವರ ಈ ಹೇಳಿಕೆಯನ್ನು ಯಾವುದೋ ಪಕ್ಷದ ನೆಲೆಯಲ್ಲಿ ನಿಂತೋ, ಪಕ್ಷದ ವಿರೋಧಿ ನೆಲೆಯಲ್ಲಿ ನಿಂತೋ ನೋಡುವಂತದ್ದಲ್ಲ, ವಿಶ್ಲೇಷಣೆ ಮಾಡುವಂತದ್ದಲ್ಲ. ಕೇವಲ ಒಬ್ಬ ಭಾರತೀಯನಾಗಿ, ಪ್ರತಿಯೊಬ್ಬರೂ ಯೋಚಿಸಬೇಕಾದ ವಿಚಾರ.  


ಅವತ್ತಿನ ಸರಕಾರ ತುಂಬ ಗಂಭೀರವಾದ ಮತ್ತು ಭಯಾನಕವಾದ ಐತಿಹಾಸಿಕ ತಪ್ಪು ನೆಡೆಯನ್ನು ತೆಗೆದುಕೊಂಡಿದ್ದನ್ನು ಅವತ್ತಿನ ಸರಕಾರದ ಗೃಹ ಮಂತ್ರಿಗಳು ಇವತ್ತು ಬಹಿರಂಗಗೊಳಿಸಿ ಶರನ್ನವರಾತ್ರಿಯಲ್ಲಿದ್ದ ಜನರಿಗೆ ಒಂದು ಶಾಕ್‌ನ್ನು ಕೊಟ್ಟಿದ್ದಾರೆ.  



ಇದು ಕೇವಲ ಒಂದು ಪಕ್ಷದ ರಾಜಕಾರಣದ ತಪ್ಪು ನಡೆಯ ವಿಚಾರ ಮತ್ತು ಮತ್ತೊಂದು ಪಕ್ಷಕ್ಕೆ ರಾಜಕೀಯವಾಗಿ ಟೀಕೆ ಮಾಡುವುದಕ್ಕೆ ಸಿಕ್ಕ ರಾಜಕಾರಣದ ವಿಚಾರ ಅಲ್ಲ.  


ಪಕ್ಷಗಳ ಸಮರ್ಥನೆ, ಟೀಕೆಗಳನ್ನು ಬದಿಗಿಟ್ಟು, ಸಾಮಾನ್ಯ ಜನರೂ ಪಕ್ಷಗಳಿಂದ ದೂರ ನಿಂತು ದೇಶದ ವಿಚಾರದಲ್ಲಿನ ಐತಿಹಾಸಿಕ ಪ್ರಮಾದವನ್ನು ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಚಾರ ಇದು.


ತಾಯಿ ಚಾಮುಂಡೇಶ್ವರಿಯೇ ದಸರಾ ಸಂದರ್ಭದಲ್ಲಿ ಐತಿಹಾಸಿಕ ಪ್ರಮಾದ ಸತ್ಯವನ್ನು ಭಾರತೀಯರ ಮನೋ ಬುದ್ಧಿಗಳಿಗೆ ತಿಳಿಯಲಿ ಎಂದು ಮಾಜಿ ಗೃಹ ಸಚಿವರ ನಾಲಿಗೆಯಲ್ಲಿ ನಿಂತು ಹೇಳಿಕೆ ಕೊಡಿಸಿದಳಾ!!?


ಅವತ್ತು ಸಮರ್ಥ ಗೃಹ ಸಚಿವರು ಎಂದೇ ಹೆಸರಾಗಿದ್ದ ಕೇಂದ್ರ ಗೃಹ ಸಚಿವರು ದೇಶ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಸಮರ್ಥ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಂತೆ ಅವರ ಕೈ ಕಟ್ಟಲಾಗಿತ್ತಾ?


ಆ ಕೈ ಕಟ್ಟಿದವರು (ಯಾರು ಅನ್ನುವುದೇ ಒಂದು ಪ್ರಶ್ನೆ!!), ಕೈ ಕಟ್ಟಿದವರ ಟೀಮ್ ಮತ್ತು ಅದೇ ಗೃಹ ಸಚಿವರು ಈಗಲೂ ದೇಶ ನೆಡೆಸುವ ಅಧಿಕಾರ ಹೊಂದಿದ್ದಿದ್ದರೆ.... ವರ್ತಮಾನ ಹೇಗಿರುತ್ತಿತ್ತು?  ಭಾರತದ ಭವಿಷ್ಯ ಹೇಗಾಗುತ್ತಿತ್ತು!!?


ಈ ಹಿನ್ನಲೆಯಲ್ಲೂ ಚಿಂತನೆ ಮಾಡುವಂತೆ, ಮಾಜಿ ಗೃಹ ಸಚಿವರ ಈ ಒಂದು ಹೇಳಿಕೆ ವೈಬ್ರೇಷನ್ ಸೃಷ್ಟಿ ಮಾಡಿದೆ.


ಸತ್ಯ ಹೊರಗೆ ಬರುವಂತೆ ಮಾಡಿದ ತಾಯಿ ಚಾಮುಂಡೇಶ್ವರಿಗೆ ಮೊದಲು ನಮಿಸಿ, ದೇಶದ ಮೂಲೆಯಲ್ಲಿ ಬದುಕುತ್ತಿರುವ ನಮ್ಮಂತವರು "ನಾನೇನು ಮಾಡಬಹುದು?" ಎಂದು ಯೋಚಿಸೋಣ.


ಎಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.


- ಅರವಿಂದ ಸಿಗದಾಳ್, ಮೇಲುಕೊಪ್ಪ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top