ಶಿವಮೊಗ್ಗ: ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಹಾತ್ಮ ಗಾಂಧಿಯವರ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಆಡಳಿತಾಧಿಕಾರಿಗಳಾದ ಪ್ರೊ ರಾಮಚಂದ್ರ ಬಾಳಿಗಾ ಅವರು ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜೀವನ ಮೌಲ್ಯ ಹಾಗೂ ದೇಶ ಪ್ರೇಮದ ಕುರಿತು NSS ಕಾರ್ಯಕ್ರಮಾಧಿಕಾರಿಗಳಾದ ಮೋಹನ್ ಕುಮಾರ್ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಂಧ್ಯಾಕಾವೇರಿ ಅವರು "ಕರ್ನಾಟಕದಲ್ಲಿ ಗಾಂಧಿ" ಎಂಬ ಪುಸ್ತಕದಿಂದ ಗಾಂಧೀಜಿಯವರು ಭದ್ರಾವತಿಗೆ ಭೇಟಿ ನೀಡಿದ ಸಂಧರ್ಭದ ಕುರಿತ ಲೇಖನವನ್ನು ಓದಿ ಹೇಳಿದರು.
ವಿಧ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿಗಳು ತನ್ಮಯಿ ಹಾಗೂ ತಂಡದ ನೇತೃತ್ವದಲ್ಲಿ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡಿದರು.
ತರುವಾಯ ಎಲ್ಲರೂ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಾತ್ಮಗಾಂಧಿಯವರ ಸತ್ಯ,ಸಹಕಾರ, ಸಹೋದರತ್ವ, ಸ್ವಾವಲಂಬನೆ ಕುರಿತು ಅವಲೋಕನ ಹಾಗೂ ಅನುಭವ ಹೊಂದುವ ಕಾರ್ಯಕ್ರಮ ಇದಾಗಿತ್ತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

