ಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು: ರಾಮಚಂದ್ರಾಪುರ ಶ್ರೀ

Upayuktha
0

  • ನಾಡಿನಾದ್ಯಂತ ಸಂಚರಿಸುವ ಸುವರ್ಣ ಪಾದುಕ ಸಂಚಾರಕ್ಕೆ ಚಾಲನೆ 
  • ಲಲಿತಾಮೂರ್ತಿ ವಿಸರ್ಜನೆ




ಸಾಗರ: ಇನ್ನೊಬ್ಬರ ಕಷ್ಟ ನೋಡಿ ಖುಷಿ ಪಡುವ ವರ್ಗ ಒಂದಾದರೆ ಇನ್ನೊಬ್ಬರಿಗೆ ತಾವೇ ಕಷ್ಟ ಕೊಟ್ಟು ಖುಷಿ ಪಡುವ ವರ್ಗ ಇನ್ನೊಂದು ಈ ಎರಡೂ ವರ್ಗದವರು ದುರ್ಜನರು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. 


ಸಾಗರದ ಶ್ರೀರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ವಿಜಯದಶಮಿ ವಿಶೇಷದೊಂದಿಗೆ ನವರಾತ್ರ ನಮಸ್ಯಾದ 11 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.


ಕಷ್ಟ ನೋಡಿ ಖುಷಿ ಪಡುವ ವರ್ಗ ನರಾಧಮರಾದರೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು ಎಂದ ಅವರು, ಅಂತಹ ರಕ್ಕಸ ಪ್ರವೃತ್ತಿ ಇರುವವರಿಂದ ಸಮಾಜಕ್ಕೆ ಅತಿ ದೊಡ್ಡ ಕಂಟಕ ಎಂದರು.


ಇನ್ನೊಬ್ಬರ ನೋವು ಯಾರಿಗೂ ಅರ್ಥವಾಗುವುದಿಲ್ಲ ಆದರೆ  ತಮಗೆ ನೋವು ಬಂದಾಗ ಮಾತ್ರ ನೋವಿನ ವೇದನೆ ಅರ್ಥವಾಗಲಿದೆ, ಎಲ್ಲ ರೀತಿಯ ದುರ್ಜನರಿಗೂ ಅಂತಿಮವಾಗಿ ನೋವಿನ ಸ್ಥಿತಿ ಬಂದೇ ಬರಲಿದೆ ಎಂದ ಅವರು ಇನ್ನೊಬ್ಬರಿಗೆ ಕಷ್ಟ ಕೊಟ್ಟವರು ಯಾವುದೇ ಕಾರಣಕ್ಕೂ ಕೊನೆಯಲ್ಲಿ ನೋವು ಅನುಭವಿಸಲೇ ಬೇಕು ಅದೇ ರೀತಿ ಜಗಕ್ಕೆ ಕಂಟಕನಾಗಿ ಮೆರೆದ ಭಂಡಾಸುರನಿಗೆ ಇಂತಹದ್ದೆ ಪರಿಸ್ಥಿತಿ ದೇವಿಯಿಂದ ಎದುರಾಯಿತು ಎಂದರು.



ಇದಕ್ಕೂ ಮುನ್ನ ಬೆಳಗ್ಗೆ ವಿಜಯದಶಮಿ ಆಚರಣೆ,ನವಚಂಡಿಕಾ ಹವನ, ಶಮೀಪೂಜೆ ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ರಾತ್ರಿ ದುರ್ಗಾದೀಪ ನಮಸ್ಕಾರ, ಲಲಿತಾಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.



108 ಶಂಖನಾದ- 108 ಮುತ್ತಿನ ಆರತಿಯೊಂದಿಗೆ ಸ್ವರ್ಣಪಾದುಕಾ ಸಂಚಾರಕ್ಕೆ ಚಾಲನೆ


ವಿಜಯ ದಶಮಿಯ ಶುಭಾವಸರದಲ್ಲಿ ರಾಜ್ಯ ಹೊರರಾಜ್ಯ ವ್ಯಾಪ್ತಿಯಲ್ಲಿ ಶಿಷ್ಯ ಹಿತಕ್ಕಾಗಿ ಶ್ರೀಮಠದಿಂದ ಪ್ರತಿ ಶಿಷ್ಯಭಕ್ತರ ಮನೆಮನೆಗೆ  ತೆರಳಿ ಪೂಜೆಕೈಗೊಳ್ಳಲಿರುವ ಸುವರ್ಣ ಪಾದುಕ ಸಂಚಾರಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಲಾಯಿತು. ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ 108 ಶಂಖನಾದ ಹಾಗೂ 108 ಮುತ್ತಿನಾರತಿಯನ್ನು ಬೆಳಗಿ ಮಠದ ಶಾಸನತಂತ್ರದ ಪ್ರಮುಖರು ಮಹಾಮಂಡಲದ ಪ್ರಮುಖರ ಹೆಗಲಿಗೆ ಸಂಚಾರ ಪಾದುಕೆಯ ಪಲ್ಲಕ್ಕಿ ಹಸ್ತಾಂತರಿಸಿದರು.


ಈ ವೇಳೆ ಶಿಷ್ಯಹಿತಂ ಪ್ರಮುಖ ವೈ.ವಿ.ಕೃಷ್ಣಮೂರ್ತಿ, ಆಚಾರವಿಚಾರ ಗಜಾನನ ಭಟ್ಟ, ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಶಾಂತರಾಮಹಿರೇಮನೆ, ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ ಮತ್ತಿತರರು ಇದ್ದರು.



ಇನ್ನು ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ವೈಭವದ ತೆರೆ ಬಿದ್ದಿದೆ. ಲಲಿತಾಮೂರ್ತಿಯನ್ನು ಮಂಗಲ ವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಹೊತ್ತು ತಂದು ಸಂಬ್ರಮದಿಂದ ಇಲ್ಲಿನ ಗಣಪತಿ ಕೆರೆಯಲ್ಲಿ ವಿಸರ್ಜಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top