ಕಾಸರಗೋಡು: ವಿಶ್ವ ವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆ ಪ್ರಸ್ತುತ ಪಡಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯಿಂದ ಮೂಡಿಬಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ವರ್ಷಾ ಶೆಟ್ಟಿ, ಸುಮನ್ ವಿ ಆಚಾರ್ಯ, ಅರ್ಪಿತಾ ವಿ ರೈ, ಹಂಶಿತ್ ಆಳ್ವ, ನವ್ಯಶ್ರೀ ಕೆ, ಪಾವ್ನಿ, ಭಾನ್ವಿ, ದ್ರುತಿ, ರಿತಿಕಾ ಎಸ್ ಪಿ, ಅಶ್ವಿತಾ, ವಿತ್ವಿ, ಜಯಲಕ್ಷ್ಮಿ ಎನ್, ಪ್ರಣಮ್ಯ, ತನ್ವಿತಾ, ಧನ್ಯಶ್ರೀ, ಅಂಜನಾ ಕೆ, ಆರಾಧ್ಯ ಎಸ್ ಆಳ್ವ, ಅಸ್ಮಿತಾ ಜಿ ಸಾತ್ವಿಕ್, ಯತಿಕ್, ಚಿನ್ಮಯಿ ಎಸ್, ಶರ್ವಾಣಿ, ರಿಷಿಕಾ, ಸಾನ್ವಿ, ಸ್ಪಂದನ, ಅದಿತಿ, ಪ್ರೆಕ್ಷಾ, ಜೀವಿಕಾ, ಮಾನ್ವಿ, ಪೂರ್ಣಿಮಾ ಕೆ, ರಾಧಾ, ಸವಿತಾ ಎಸ್, ಲಾವಣ್ಯ, ಭೂಮಿಕಾ, ಸಾವಿತ್ರಿ, ಅದಿತ್ರಿ ಆಧ್ಯಾ, ಭುವಿ ಸಜಿಪ, ಮಾನ್ವಿ ಸಜಿಪ, ತಾನ್ಯ ಆರ್ ಶೆಟ್ಟಿ, ದ್ರುವಿ ಎಸ್ ಶೆಟ್ಟಿ, ವೈಶಾಲಿ, ಜಿಯಾ ಜೆ ಶೆಟ್ಟಿ, ಶ್ರೇಯಾ, ನವ್ಯ, ಇಶಿಕಾ ಎಸ್ ಶೆಟ್ಟಿ, ಕೃತಿ ಶೆಟ್ಟಿ ಮುಂತಾದ ಸಂಸ್ಥೆಯ ಸರಿ ಸುಮಾರು 50 ಕ್ಕೂ ಅಧಿಕ ಕಲಾವಿದರು ಕಲಾ ಪ್ರಸ್ತುತಿಗೈದರು.
ಎಲ್ಲಾ ಪ್ರಕಾರದ ಸಮೂಹ ನೃತ್ಯ ಪ್ರದರ್ಶನ ಹಾಗೂ ನೃತ್ಯರೂಪಕಗಳಿಂದ ರಂಜಿಸಿದ ಕಾರ್ಯಕ್ರಮ ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗುರುರಾಜ್ ಕಾಸರಗೋಡು ಅವರನ್ನು ದೇವಸ್ಥಾನದ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವದ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


